Neer Dose Karnataka
Take a fresh look at your lifestyle.

ಆಯ್ಕೆ ಸಮಿತಿ ಒಪ್ಪಿಕೊಂಡು ಆಸಕ್ತಿ ತೋರಿದರೂ ಕೂಡ ಆ ಒಬ್ಬನಿಂದ ಯುವ ಆಟಗಾರರಿಗೆ ಅವಕಾಶವೇ ಸಿಗಲಿಲ್ಲ. ಆ ಮಹಾನುಭಾವ ಯಾರು ಗೊತ್ತೇ??

ನಿನ್ನೆಯ ಸೆಮಿಫೈನಲ್ಸ್ ಪಂದ್ಯದಲ್ಲಿ ಭಾರತ ತಂಡ ಸಂಪೂರ್ಣ ನಿರಾಸೆ ಮೂಡಿಸುವಂಥ ಪರ್ಫಾರ್ಮೆನ್ಸ್ ನೀಡಿತು. ತಂಡದ ಆಯ್ಕೆ ಸರಿ ಇರಲಿಲ್ಲ ಎಂದು ಎಲ್ಲರ ಅಭಿಪ್ರಾಯವಾಗಿದೆ. ಬಿಸಿಸಿಐ ಆಯ್ಕೆಯಲ್ಲಿ ಎಡವಿತು, ಕ್ಯಾಪ್ಟನ್ ರೋಹಿತ್ ಶರ್ಮ ಮತ್ತು ವೈಸ್ ಕ್ಯಾಪ್ಟನ್ ಕೆ.ಎಲ್.ರಾಹುಲ್ ಇವರಿಬ್ಬರು ಕೂಡ ತಂಡದ ಪರವಾಗಿ ಒಂದೇ ಒಂದು ಒಳ್ಳೆಯ ಇನ್ನಿಂಗ್ಸ್ ಕೂಡ ಆಡದೆ ಇರುವುದು ಬೇಸರದ ಸಂಗತಿ. ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅವರು, ಕೊನೆಯ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರು ಸಹ ಅತ್ಯುತ್ತಮ ಪ್ರದರ್ಶನ ನೀಡಿದರು. ನಿನ್ನೆಯ ಪಂದ್ಯದಲ್ಲಿ ಬ್ಯಾಟಿಂಗ್ ಚೆನ್ನಾಗಿಯೇ ಇದ್ದರು ಸಹ, ಅತ್ಯಂತ ಕಳಪೆ ಬೌಲಿಂಗ್ ಪ್ರದರ್ಶನ ನಡೆಯಿತು ಎಂದರೆ ತಪ್ಪಲ್ಲ.

ಏಕೆಂದರೆ ಇಂಗ್ಲೆಂಡ್ ತಂಡದವರ ಒಂದೇ ಒಂದು ವಿಕೆಟ್ ಪಡೆಯಲು ಕೂಡ ಭಾರತದ ಬೌಲರ್ ಗಳಿಂದ ಸಾಧ್ಯವಾಗಲಿಲ್ಲ. ಬ್ಯಾಟಿಂಗ್ ನಲ್ಲಿ ಒಂದೇ ಒಂದು ಪಂದ್ಯದಲ್ಲೂ ಆರಂಭದಲ್ಲಿ ಉತ್ತಮ ಆರಂಭ ನೀಡಿ, ರನ್ಸ್ ಕಲೆಹಾಕಲಿಲ್ಲ. ಇದರ ಬಗ್ಗೆ ಈಗ ಎಲ್ಲೆಡೆ ಅಸಮಾಧಾನ ವ್ಯಕ್ತವಾಗುತ್ತಿದೆ. ತಂಡವೆ ಸರಿ ಇಲ್ಲ ಎನ್ನಲಾಗುತ್ತಿದ್ದು, ಪ್ರತಿಭೆ ಇರುವ ಆಟಗಾರರಿಗೆ ಅವಕಾಶ ಕೊಡದೆ ಇರುವುದು ಕೂಡ ಈ ಸೋಲಿಗೆ ಕಾರಣ ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ. ಪೃಥ್ವಿ ಶಾ, ಇಶಾನ್ ಕಿಶನ್, ಮತ್ತು ಸಂಜು ಸ್ಯಾಮ್ಸನ್ ಈ ಮೂವರು ಪ್ರತಿಭಾನ್ವಿತ ಆಟಗಾರರು, ಟಿ20 ಪಂದ್ಯಗಳಿಗೆ ಹೇಳಿ ಮಾಡಿಸಿದಂಥ ಆಟಗಾರರು ಇವರು. ಈ ಮೂವರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದರೆ, ಗೆಲುವು ನಮ್ಮದೇ ಆಗಿರುತ್ತಿತ್ತು ಎಂದು ನೆಟ್ಟಿಗರ ಅಭಿಪ್ರಾಯ..

ತಂಡದಲ್ಲಿ ಈಗಾಗಲೇ ಇದ್ದ ಮತ್ತೊಬ್ಬ ಪ್ರತಿಭೆ ಇರುವ ಆಟಗಾರ ರಿಷಬ್ ಪಂತ್ ಅವರಿಗೆ ಅವಕಾಶ ಕೊಟ್ಟಿದ್ದಕ್ಕಿಂತ ಬೆಂಚ್ ಕಾಯಿಸಿದ್ದೇ ಹೆಚ್ಚಾಯಿತು. ರಿಷಬ್ ಪಂತ್ ಅವರಿಗೆ ಆಸ್ಟ್ರೇಲಿಯಾದಲ್ಲಿ ಆಡಿರುವ ಅನುಭವ ಇತ್ತು, ಆದರೂ ಅವರಿಗೆ ಸರಿಯಾದ ಅವಕಾಶ ಕೊಡಲಿಲ್ಲ. ಮುಂದಿನ ದಿನಗಳಲ್ಲಿ ಕೆ.ಎಲ್.ರಾಹುಲ್ ಅವರು ಮತ್ತು ರೋಹಿತ್ ಶರ್ಮಾ ಇಬ್ಬರು ಕೂಡ ತಂಡದಲ್ಲಿ ಇರಬಾರದು ಎನ್ನುವ ಅಭಿಪ್ರಾಯ ಈಗ ವ್ಯಕ್ತವಾಗುತ್ತಿದ್ದು, ಬಿಸಿಸಿಐ ಮೇಲೆ ಈಗ ದೊಡ್ಡ ಜವಾಬ್ದಾರಿಯೇ ಇದೆ, ಪೃಥ್ವಿ ಶಾ, ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಅವರಿಗೆ ಮುಂದಿನ ಪಂದ್ಯಗಳಲ್ಲಿ ಅವಕಾಶ ಸಿಗುತ್ತಾ ಎಂದು ಕಾದು ನೋಡಬೇಕಿದೆ.

Comments are closed.