Neer Dose Karnataka
Take a fresh look at your lifestyle.

Cricket News: ರವೀಂದ್ರ ಜಡೇಜಾಗೆ ಶಾಕ್ ಕೊಟ್ಟು, ಹೊಸ ಖಡಕ್ ಪ್ಲೇಯರ್ ಅನ್ನು ತಂಡಕ್ಕೆ ಆಯ್ಕೆ. ಸ್ಥಾನ ಪಡೆದ ಖಡಕ್ ಪ್ಲೇಯರ್ ಯಾರು ಗೊತ್ತೇ?

4,337

Cricket News: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರು ಮುಂದಿನ ತಿಂಗಳು ನಡೆಯಲಿರುವ ಬಾಂಗ್ಲಾದೇಶ್ ವಿರುದ್ಧದ (India vs Bangladesh) ಸರಣಿ ಪಂದ್ಯಗಳ ಮೂಲಕ ಭಾರತ ತಂಡಕ್ಕೆ ಕಂಬ್ಯಾಕ್ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು, ಆದರೆ ಈಗ ಜಡ್ಡು ಅವರು ಬಾಂಗ್ಲಾದೇಶ್ ಸೀರೀಸ್ ನಲ್ಲಿ ಇರುವುದಿಲ್ಲ ಎಂದು ಅಧಿಕೃತ ಮಾಹಿತಿ ಸಿಕ್ಕಿದೆ. ಡಿಸೆಂಬರ್ ತಿಂಗಳಿನಲ್ಲಿ ಭಾರತ ತಂಡವು ಬಾಂಗ್ಲಾದೇಶ್ ಪ್ರವಾಸ ಕೈಗೊಳ್ಳಲಿದೆ. ಪ್ರಸ್ತುತ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಟೂರ್ನಿ ಬಳಿಕ ಈ ಟೂರ್ನಿ ಶುರುವಾಗಲಿದೆ.

ಆಗಸ್ಟ್ ನಲ್ಲಿ ಏಷ್ಯಾಕಪ್ (Asiacup) ನಡೆಯುವಾಗ, ರವೀಂದ್ರ ಜಡೇಜಾ ಅವರು, ಮೊಣಕಾಲಿಗೆ ಪೆಟ್ಟು ಮಾಡಿಕೊಂಡ ಕಾರಣ, ಅವರಿಗೆ ಶಸ್ತ್ರಚಿಕಿತ್ಸೆ ನಡೆದಿತ್ತು, ಇದರಿಂದ ರವೀಂದ್ರ ಜಡೇಜಾ ಅವರು ತಂಡದಿಂದ ಹೊರಗುಳಿದಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ರವೀಂದ್ರ ಜಡೇಜಾ ಅವರು ಈಗ ಬಹುತೇಕ ಚೇತರಿಸಿಕೊಂಡಿದ್ದಾರೆ, ಬಾಂಗ್ಲಾದೇಶ್ ಸರಣಿಯ ವೇಳೆಗೆ ಫಿಟ್ ಆಗುತ್ತಾರೆ ಎನ್ನಲಾಗಿತ್ತು. ಆದರೆ ರವೀಂದ್ರ ಜಡೇಜಾ ಅವರು ಇನ್ನು ಪೂರ್ತಿಯಾಗಿ ಚೇತರಿಸಿಕೊಳ್ಳದೆ ಇರುವುದರಿಂದ ಅವರನ್ನು ತಂಡದಿಂದ ಕೈಬಿಡಲಾಗಿದೆ. ಜಡ್ಡು ಅವರ ಬದಲಾಗಿ ಮತ್ತೊಬ್ಬ ಆಲ್ ರೌಂಡರ್ ಅನ್ನು ಆಯ್ಕೆ ಮಾಡಲಾಗಿದೆ.. ಇದನ್ನು ಓದಿ.. Cricket News: ಅನಗತ್ಯವಾಗಿ ಮೋಜು ಮಾಡಲು ಹೋಗಿ ಇಂಜುರಿ ಮಾಡಿಕೊಂಡು ವಿಶ್ವನಿಂದ ಹೊರಹೋಗಿದ್ದ ಜಡೇಜಾಗೆ ಶಾಕ್ ಕೊಟ್ಟ ಆಯ್ಕೆ ಸಮಿತಿ. ಗಟ್ಟಿ ನಿರ್ಧಾರ ಏನು ಗೊತ್ತೆ?

ಭಾರತ ತಂಡ ಈಗಾಗಲೇ ಬಾಂಗ್ಲಾದೇಶ್ ತಂಡದ ವಿರುದ್ಧ ನಡೆಯಲಿರುವ ಸರಣಿ ಪಂದ್ಯಗಳಿಗೆ ತಂಡವನ್ನು ಆಯ್ಕೆ ಮಾಡಿದ್ದು, ಅದರಲ್ಲಿ ರವೀಂದ್ರ ಜಡೇಜಾ ಅವರ ಬದಲಾಗಿ ಶಾಬಾಜ್ ಅಹ್ಮದ್ (Shahbaz Ahmed) ಅವರನ್ನು ಆಯ್ಕೆ ಮಾಡಲಾಗಿದೆ. ಇವರು ಕೂಡ ಉತ್ತಮವಾದ ಆಲ್ ರೌಂಡರ್ ಆಗಿದ್ದು, ಐಪಿಎಲ್ ನಲ್ಲಿ ಆರ್ಸಿಬಿ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಬಾಂಗ್ಲಾದೇಶ್ ವಿರುದ್ಧ ನಡೆಯುವ ಓಡಿಐ ತಂಡ ಹೀಗಿದೆ, ರೋಹಿತ್ ಶರ್ಮಾ (ಕ್ಯಾಪ್ಟನ್), ಕೆಎಲ್ ರಾಹುಲ್ (ವೈಸ್ ಕ್ಯಾಪ್ಟನ್), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಬ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್ ಮತ್ತು ಕುಲದೀಪ್ ಸೇನ್. ಇದನ್ನು ಓದಿ.. Cricket News: ಫುಲ್ ಟೈಮ್ ನಾಯಕನಾಗುವ ಮೊದಲೇ ಮತ್ತದೇ ಆಟ ಆರಂಭಿಸಿದ ಪಾಂಡ್ಯ. ಈ ಬಾರಿ ದೊಡ್ಡ ವಿಲ್ಲನ್ ಆದದ್ದು ಹೇಗೆ ಗೊತ್ತೇ??

Leave A Reply

Your email address will not be published.