Neer Dose Karnataka
Take a fresh look at your lifestyle.

Cristiano Ronaldo: ನೂರಲ್ಲ ಸಾವಿರ ಅಲ್ಲ, ಹೊಸ ಕ್ಲಬ್ ಜೊತೆ ವರ್ಷಕ್ಕೆ ರೊನಾಲ್ಡೊ ಡೀಲ್ ಮಾಡಿಕೊಳ್ಳುತ್ತಿರುವುದು ಅದೆಷ್ಟು ಕೋಟಿ ಡೀಲ್ ಗೊತ್ತೇ??

Cristiano Ronaldo: ವಿಶ್ವ ವಿಖ್ಯಾತ ಫುಟ್ ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಈಗ ಹೊಸ ಕ್ಲಬ್ ಗಾಗಿ ಎದುರು ನೋಡುತ್ತಿದ್ದಾರೆ. ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಜೊತೆಗಿನ ಇವರ ಒಪ್ಪಂದ ಈಗಾಗಲೇ ಕೊನೆಯಾಗಿದ್ದು, ಹೊಸ ಒಪ್ಪಂದ ಯಾವುದಿರಬಹುದು ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಸೌದಿ ಅರೇಬಿಯಾ ಮೂಲದ ಅಲ್​ ನಾಸ್ರ್ ಫುಟ್​ಬಾಲ್ ಕ್ಲಬ್ ಈಗ ಕ್ರಿಸ್ಟಿಯಾನೋ ರೊನಾಲ್ಡೊ ಅವರೊಡನೆ ಹೊಸ ಡೀಲ್ ಮಾಡಿದೆ ಎನ್ನುವ ವಿಚಾರ ತಿಳಿದುಬಂದಿದೆ. ಈ ಡೀಲ್ ಫಿಕ್ಸ್ ಆಗಿರುವುದು ಬರೊಬ್ಬನರಿ 432 ಮಿಲಿಯನ್ ಪೌಂಡ್ಸ್ ಗೆ ಎಂದು ಮಾಹಿತಿ ಸಿಕ್ಕಿದೆ.

ಸ್ಪ್ಯಾನಿಶ್ ನ ಪತ್ರಿಕೆಯ ಪ್ರಕಾರ ಈ ವಿಚಾರ ತಿಳಿದುಬಂದಿದ್ದು, ಶೀಘ್ರದಲ್ಲೇ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಈ ಒಪ್ಪಂದಕ್ಕೆ ಸಹಿ ಹಾಕುತ್ತಾರೆ ಎಂದು ಹೇಳಲಾಗಿದೆ. 432 ಮಿಲಿಯನ್ ಪೌಂಡ್ಸ್ ಪಡೆದು ಈ ಸಂಸ್ಥೆಗಾಗಿ ಇವರು ಆಡಲಿದ್ದು, ಇದರ ಬಗ್ಗೆ ಹೇಳುವುದಾದರೆ, ವರ್ಷಕ್ಕಾ 1,687 ಕೋಟಿ ರೂಪಾಯಿಗಿಂತ ಹೆಚ್ಚು ಹಣವನ್ನು ಈ ಸಂಸ್ಥೆ ಅವರಿಗೆ ನೀಡಬೇಕಿದೆ. ಅಲ್​ ನಾಸ್ರ್ ಫುಟ್​ಬಾಲ್ ಕ್ಲಬ್ ಸೌದಿ ಅರೇಬಿಯಾದ ಪ್ರತಿಷ್ಠಿತ ಕಂಪನಿ ಆಗಿದ್ದು, ಇದಕ್ಕೆ ಕ್ರಿಸ್ಟಿಯಾನೋ ಅವರು ಸೈನ್ ಮಾಡಿದರೆ, ಇದು ಅವರ 4ನೇ ಕ್ಲಬ್ ಆಗುತ್ತದೆ. ಮೊದಲಿಗೆ ಪೋರ್ಚುಗಲ್ ಸ್ಪೋರ್ಟಿಂಗ್ ಕ್ಲಬ್ ಪರವಾಗಿ ಅಡಿದ್ದ ಕ್ರಿಸ್ಟಿಯಾನೋ ರೊನಾಲ್ಡೊ ಅವರು ನಂತರ, ಮ್ಯಾಂಚೆಸ್ಟರ್ ಯುನೈಟೆಡ್ ಪರವಾಗಿ ಅಡಿದ್ದರು. ಇದನ್ನು ಓದಿ.. Kannada Astrology: ಸೃಷ್ಟಿಯಾಗುತ್ತಿದೆ ಲಕ್ಷ್ಮಿ ನಾರಾಯಣ ಯೋಗ: ಇದರಿಂದ ಆ ಮೂರು ರಾಶಿಗಳನ್ನು ಟಚ್ ಮಾಡಲು ಕೂಡ ಆಗಲ್ಲ. ಯಾರನ್ನು ಗೊತ್ತೇ?

ಇದಾದ ನಂತರ ಇಟಲಿಯ ಯುವೆಂಟಸ್ ಕ್ಲಬ್ ಪರವಾಗಿ ಆಡಿದ್ದರು ನಂತರ ಕಳೆದ ವರ್ಷ ಮತ್ತೊಮ್ಮೆ ಮ್ಯಾಂಚೆಸ್ಟರ್ ಯುನೈಟೆಡ್ ಗೆ ವಾಪಸ್ ಬಂದಿದ್ದರು. ಹಳೆಯ ಕ್ಲಬ್ ನಲ್ಲಿದ್ದರು ಸಹ, ಕ್ರಿಸ್ಟಿಯಾನೋ ಅವರಿಗೆ ಹೆಚ್ಚಾಗಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಆ ಸಂಸ್ಥಯ ಮ್ಯಾನೇಜರ್ ಮತ್ತು ಕ್ರಿಸ್ಟಿಯಾನೋ ರೊನಾಲ್ಡೊ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಇದರ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದ ಕ್ರಿಸ್ಟಿಯಾನೋ ರೊನಾಲ್ಡೊ ಅವರು, ಪರಸ್ಪರ ಒಪ್ಪಿಗೆಯಿಂದ ಫಿಫಾ ವರ್ಲ್ಡ್ ಕಪ್ ಶುರುವಾಗುವ ಮೊದಲು, ಮ್ಯಾಂಚೆಸ್ಟರ್ ಯುನೈಟೆಡ್ ಜೊತೆಗೆ ಒಪ್ಪಂದ ಮುರಿದುಕೊಂಡಿದ್ದರು. ತಮ್ಮ ಕೊನೆಯ ಫಿಫಾ ವರ್ಲ್ಡ್ ಕಪ್ ನಲ್ಲಿ ಪೋರ್ಚುಗಲ್ ತಂಡವನ್ನು ಮುನ್ನಡೆಸುತ್ತಿರುವ ಕ್ರಿಸ್ಟಿಯಾನೋ ರೊನಾಲ್ಡೊ ಅವರನ್ನು ಸೌದಿ ಅರೇಬಿಯಾ ಕ್ಲಬ್ ದುಬಾರಿ ಮೊತ್ತಕ್ಕೆ ಖರೀದಿ ಮಾಡಲು ರೆಡಿಯಾಗಿದೆ. ಇದನ್ನು ಓದಿ..Kannada News: ನಾಗ ಚೈತನ್ಯ ಬಳಿ ಕೋಟಿ, ಲಕ್ಷಗಳಿಗೆ ಲೆಕ್ಕವೇ ಇಲ್ಲ ಬೈಕ್ ಹಾಗೂ ಕಾರ್ ಗಳ ಎಷ್ಟಿವೆ ಗೊತ್ತೇ??

Comments are closed.