Neer Dose Karnataka
Take a fresh look at your lifestyle.

Cricket News: ಮಂದಿ ಹತ್ತು ವರ್ಷಗಳಲ್ಲಿ ಈತನೇ ಕ್ರಿಕೆಟ್ ಲೋಕದ ಕಿಂಗ್ ಆಗುತ್ತಾನೆ ಎಂದ ಯುವರಾಜ್ ಸಿಂಗ್. ಯಾರಂತೆ ಗೊತ್ತೇ??

Cricket News: ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ (T20 World Cup) ಸೆಮಿಫೈನಲ್ ನಲ್ಲಿ ಭಾರತ ತಂಡ ಸೋತ ಕಾರಣ ಭಾರಿ ಟೀಕೆಗಳು ಕೇಳಿಬರುತ್ತಿದೆ. ಧೋನಿ (Dhoni) ಅವರ ನಂತರ ಟೀಮ್ ಇಂಡಿಯಾದ ಯಾವುದೇ ನಾಯಕ ಐಸಿಸಿ ಟ್ರೋಫಿ (ICC Trophy) ಗೆಲ್ಲದ ಕಾರಣ ಭಾರತ ತಂಡದ ಮೇಲೆ ಒತ್ತಡ ಹೆಚ್ಚಾಗಿದೆ. ಇದರ ನಡುವೆ 2024ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಗೆ ಹಾರ್ದಿಕ್ ಪಾಂಡ್ಯ (Hardik Pandya) ಅವರು ಕ್ಯಾಪ್ಟನ್ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಇದಕ್ಕಿಂತ ಮೊದಲು 50 ಓವರ್‌ ಗಳ ಓಡಿಐ ವಿಶ್ವಕಪ್ 2023 ರಲ್ಲಿ ಭಾರತದಲ್ಲಿ ನಡೆಯಲಿದೆ. ಈಗ ಭಾರತ ತಂಡ ಏಕದಿನ ವಿಶ್ವಕಪ್ (ODI World Cup) ಗೆ ಸಜ್ಜಾಗುತ್ತಿದೆ.

ಭಾರತ ತಂಡ ಪ್ರಸ್ತುತ ಬಾಂಗ್ಲಾದೇಶದಲ್ಲಿ (India vs Bangladesh) ಏಕದಿನ ಸರಣಿ ಮುಗಿಸಿದೆ, ಇದರಲ್ಲಿ ಭಾರತ ತಂಡ ಸೋಲು ಕಂಡಿದೆ. ಈ ಏಕದಿನ ಸರಣಿಗೆ ಟೀಮ್ ಇಂಡಿಯಾದ ಹಿರಿಯ ಆಟಗಾರರು ತಂಡಕ್ಕೆ ಮರಳಿದರು ಹಾಗೆ ಕೆಲ ಯುವ ಆಟಗಾರರು ಮತ್ತೆ ಅವಕಾಶ ಕಳೆದುಕೊಂಡಿದ್ದಾರೆ. ನ್ಯೂಜಿಲೆಂಡ್ (India vs New Zealand) ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತದ ಆರಂಭಿಕ ಆಟಗಾರ ಶುಭಮನ್ ಗಿಲ್ (Shubhman Gill) ಇದೀಗ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಈ ವಿಚಾರದಲ್ಲಿ ಶುಭಮನ್ ಗಿಲ್ ಅವರ ಅದ್ಭುತ ಪ್ರದರ್ಶನವನ್ನು ಭಾರತ ತಂಡದ ಹಿರಿಯ ಆಟಗಾರ ಯುವರಾಜ್ ಸಿಂಗ್ (Yuvraj Singh) ಅವರು ಹೊಗಳಿದ್ದಾರೆ, “ಶುಭಮನ್ ಗಿಲ್ ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದಾರೆ, ಹಾಗೂ ಆಟದಲ್ಲಿ ಎಲ್ಲವನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ..” ಎಂದು ಹೇಳಿದ್ದಾರೆ. ಇದನ್ನು ಓದಿ..Cricket News: ಸರಣಿ ಸೋತ ತಕ್ಷಣವೇ ಎಚ್ಚೆತ್ತು ಕೊಂಡ ರೋಹಿತ್ ಶರ್ಮ: ತಾನು ಮಾಡಿದ್ದನ್ನು ಮರೆತು ಆಯ್ಕೆ ಸಮಿತಿ ಬಗ್ಗೆ ಹೇಳಿದ್ದೇನು ಗೊತ್ತೇ??

“ಮುಂದಿನ 10 ವರ್ಷಗಳಲ್ಲಿ ಶುಬ್ಮನ್ ಗಿಲ್ ವಿಶ್ವದ ಅತ್ಯುತ್ತಮ ಕ್ರಿಕೆಟಿಗನಾಗುವ ಎಲ್ಲ ಸಾಮರ್ಥ್ಯ ಮತ್ತು ಅವಕಾಶ ಅವರಲ್ಲಿದೆ ಎನ್ನುವ ನಂಬಿಕೆ ನನಗೆ ಇದೆ. ಶುಭಮನ್ ಗಿಲ್ ಅವರಿಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಆದರೆ 2023ರ ಐಸಿಸಿ ಓಡಿಐ ವಿಶ್ವಕಪ್‌ ನಲ್ಲಿ ಆರಂಭಿಕ ಸ್ಥಾನಕ್ಕಾಗಿ ಅವರು ಸ್ಪರ್ಧೆಯಲ್ಲಿರುತ್ತಾರೆ. ಯಾಕೆಂದರೆ ಗಿಲ್ ಅವರು ಇತ್ತೀಚಿಗೆ ಸಿಕ್ಕ ಅವಕಾಶಗಳನ್ನೆಲ್ಲ ಪೂರ್ತಿಯಾಗಿ ಬಳಸಿಕೊಂಡಿದ್ದಾರೆ. ಆದರೆ ಮುಂದೆ ಏನಾಗುತ್ತದೆ ಎಂದು ನಮಗೆ ತಿಳಿದಿಲ್ಲ..” ಎಂದು ಹೇಳಿದ್ದಾರೆ ಯುವರಾಜ್ ಸಿಂಗ್.. ಶುಭಮನ್ ಗಿಲ್ ಟೀಮ್ ಇಂಡಿಯಡ್ಸ್ ಪ್ರಮುಖ ಆಟಗಾರನಾಗಿ ಹೊರಹೊಮ್ಮುತ್ತಾರೆ. ಓಡಿಐ ವಿಶ್ವಕಪ್‌ ಸರಣಿಯಲ್ಲಿ ಶುಭಮನ್‌ ಗಿಲ್‌ ಓಪನರ್‌ ಆಗಿ ಆಡಿದರೆ ಅದು ಭಾರತ ತಂಡಕ್ಕೆ ಇನ್ನಷ್ಟು ಬಲ ತುಂಬುವುದು ಖಂಡಿತ. ಈಗ ಅವರು ಒಳ್ಳೆಯ ಫಾರ್ಮ್‌ ನಲ್ಲಿದ್ದಾರೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ಇದನ್ನು ಓದಿ.. Cricket News: ರೋಹಿತ್ ನಾಯಕತ್ವದ ತೂಗುಗತ್ತಿ: ನಾಯಕತ್ವ ಕಳೆದುಕೊಳ್ಳಲು ಕಂಡು ಬರುತ್ತಿರುವ ಮೂರು ಕಾರಣಗಳೇನು ಗೊತ್ತೇ??

Comments are closed.