Neer Dose Karnataka
Take a fresh look at your lifestyle.

Cricket News: ಒಂದು ಕಾಲ ಉತ್ತಮ ಆಟಗಾರನಿಗೆ ಇದೆಂತಹ ಪರಿಸ್ಥಿತಿ, ಬಹಿರಂಗವಾಗಿ ಬೇಡಿಕೊಂಡ ಕನ್ನಡಿಗ ಕರುಣ್ ನಾಯರ್. ಏನು ಗೊತ್ತೇ??

Cricket News: ಟೀಂ ಇಂಡಿಯಾದ ಅತ್ಯುತ್ತಮ ಆಟಗಾರ ಕರುಣ್ ನಾಯರ್ ಅವರ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಇದುವರೆಗೆ ಕರುಣ್ ನಾಯರ್ ತಮ್ಮ ವೃತ್ತಿ ಜೀವನದಲ್ಲಿ 76 ಟಿ20 ಪಂದ್ಯಗಳನ್ನು ಆಡಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಕರುಣ್ ನಾಯರ್ ಅವರು ಆಡಿರುವ 85 ಪ್ರಥಮದರ್ಜೆ ಪಂದ್ಯಗಳಲ್ಲಿ 50ರ ಆವರೇಜ್ ನಲ್ಲಿ 5922 ರನ್ ಗಳಿಸಿದ್ದಾರೆ. ಕರುಣ್ ನಾಯರ್ ಅವರು ಟೆಸ್ಟ್ ಪಂದ್ಯಗಳಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ. ಇವರು 2016 ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ 303 ರನ್ಸ್ ಗಳಿಸಿ ಇಂಟರ್ನ್ಯಾಷನಲ್ ಕ್ರಿಕೆಟ್‌ ಗೆ ಎಂಟ್ರಿ ಕೊಟ್ಟರು.

ಈ ರೀತಿಯಾಗಿ ವೀರೇಂದ್ರ ಸೆಹ್ವಾಗ್ ಅವರ ನಂತರ ತ್ರಿಶತಕ ಸಿಡಿಸಿದ ಭಾರತದ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರವಾದರು. ಭವಿಷ್ಯದಲ್ಲಿ ಅವರು ಸ್ಟಾರ್ ಆಟಗಾರ ಆಗುತ್ತಾರೆ ಎನ್ನುವ ನಂಬಿಕೆ ಎಲ್ಲರಲ್ಲೂ ಇದೆ. ಆದರೆ, 2017ರಲ್ಲಿ ಆಸ್ಟ್ರೇಲಿಯ ವಿರುದ್ಧದ ಸರಣಿ ಅವರ ವೈಫಲ್ಯ ಎಲ್ಲರಿಗೂ ಶಾಕ್ ನೀಡಿದರು. ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡ ನಂತರ ಕರುಣ್ ಅವರು ನ್ಯಾಷನಲ್ ಟೀಮ್ ಗೆ ಮತ್ತೆ ಬರಕಿಲ್ಲ. ಬಹಳ ಸಮಯದ ವರೆಗು ತಂಡಗಳಲ್ಲಿ ಅವಕಾಶ ನೀಡದಿರಲು ಕಾರಣ ಏನು ಎನ್ನುವ ಬಗ್ಗೆ ಆಡಳಿತ ತನಗೆ ಯಾವುದೇ ವಿವರಣೆ ನೀಡಿಲ್ಲ ಎಂದು ಕರುಣ್ ನಾಯರ್ ಅವರು ಬಹಳ ಬೇಸರ ಪಟ್ಟುಕೊಂಡರು. ಇದನ್ನು ಓದಿ..Cricket News: ಮಂದಿ ಹತ್ತು ವರ್ಷಗಳಲ್ಲಿ ಈತನೇ ಕ್ರಿಕೆಟ್ ಲೋಕದ ಕಿಂಗ್ ಆಗುತ್ತಾನೆ ಎಂದ ಯುವರಾಜ್ ಸಿಂಗ್. ಯಾರಂತೆ ಗೊತ್ತೇ??

ಈ ರೀತಿ ಆದ ಕಾರಣ ದೇಶೀಯ ಪಂದ್ಯಗಳಲ್ಲಿ ಆಡುವುದನ್ನು ಮುಂದುವರೆಸಿದರು. ಆದರೆ, ಸ್ವಲ್ಪ ಸಮಯದ ನಂತರ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ ಇಂತಹ ಟೂರ್ನಮೆಂಟ್ ಗಳಲ್ಲಿ ಅವಕಾಶ ಸಿಗದೆ ಹೋಯಿತು. ಇದರಿಂದ ಕರುಣ್ ನಾಯರ್ ಅವರು ಟ್ವಿಟರ್ ನಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. “ಆತ್ಮೀಯ ಕ್ರಿಕೆಟ್, ನನಗೆ ಇನ್ನೊಂದು ಅವಕಾಶ ಕೊಡಿ..” ಎಂದು ಪೋಸ್ಟ್ ಮಾಡಿದ್ದಾರೆ ಕರುಣ್. ಇದೀಗ ವೈರಲ್ ಆಗಿರುವ ಈ ಟ್ವೀಟ್ ಅಭಿಮಾನಿಗಳ ಮನಗೆದ್ದಿದೆ. ಇದು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. “ಅಣ್ಣ, ನಿಮ್ಮ ತ್ರಿಶತಕವನ್ನು ನಾವು ಮರೆತಿಲ್ಲ. ನೀವು ಖಂಡಿತವಾಗಿಯು ಮತ್ತೆ ಮರಳಿ ಬಂದು ನಿಮ್ಮನ್ನು ನೀವು ಪ್ರೂವ್ ಮಾಡಿಕೊಳ್ಳುತ್ತೀರಿ..” ಎಂದು ನೆಟ್ಟಿಗರು ಕರುಣ್ ಅವರಿಗೆ ಸಮಾಧಾನ ಮಾಡಿದ್ದಾರೆ.. ಇದನ್ನು ಓದಿ.. Cricket News: ಒಂದೇ ದ್ವಿಶತಕದ ಮೂಲಕ ಟಾಪ್ ಆಟಗಾರನ ಸ್ಥಾನಕ್ಕೆ ಕಂಟಕ ತಂದಿದ್ದ ಇಶಾನ್ ಕಿಶನ್, ಈತನಿಗೆ ಅವಕಾಶ ಡೌಟ್. ಯಾರು ಗೊತ್ತೇ?

Comments are closed.