Neer Dose Karnataka
Take a fresh look at your lifestyle.

Cricket News: ಕೈಲಾಗದೆ ಪರದಾಡುತ್ತಿರುವ ರಾಹುಲ್ ಬದಲು ಮತ್ಯಾರು ಆರಂಭಿಕ ಆಗಬೇಕಂತೆ ಗೊತ್ತೇ? ಆಸ್ಟ್ರೇಲಿಯಾ ಲೆಜೆಂಡ್ ಹೇಳಿದ್ದೇನು ಗೊತ್ತೇ??

Cricket News: ಐಸಿಸಿ ಕ್ರಿಕೆಟ್ ವರ್ಲ್ಡ್ ಕಪ್ (ICC World Cup) ಶುರುವಾಗೋದಕ್ಕೆ ಉಳಿದಿರುವುದು ಇನ್ನು ಕೆಲವು ಸಮಯ ಮಾತ್ರ. ಈ ಸಮಯದಲ್ಲಿ ಎಲ್ಲಾ ತಂಡಗಳು ಗೆಲುವಿಗಾಗಿ ತಯಾರಿ ನಡೆಸುತ್ತಿದೆ. ಹೆಚ್ಚಿನ ಒತ್ತಡ ಇರುವುದು ಟೀಮ್ ಇಂಡಿಯಾ ಮೇಲೆ ಎಂದು ಹೇಳಬಹುದು. ಏಕೆಂದರೆ, ಟೀಮ್ ಇಂಡಿಯಾ (Team India) ಐಸಿಸಿ ಟ್ರೋಫಿ (ICC Trophy) ಗೆದ್ದು ಬಹಳ ಸಮಯ ಆಗಿದೆ. ಹಾಗಾಗಿ ಈ ವರ್ಷ ಭಾರತದಲ್ಲೇ ನಡೆಯುವ ಟೆಸ್ಟ್ ಚಾಂಪಿಯನ್ಷಿಪ್ ನಲ್ಲಿ ಟೀಮ್ ಇಂಡಿಯಾ ಗೆಲ್ಲುವುದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದೆ. ಆದರೆ ನಮ್ಮ ತಂಡದಲ್ಲಿ ಕೆಲವು ಕೊರತೆಗಳು ಎದ್ದು ಕಾಣುತ್ತಿದೆ.

ಕಳೆದ ವರ್ಷದಲ್ಲಿ ಟೀಮ್ ಇಂಡಿಯಾದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಅದರಲ್ಲಿ ಈಗ ಆತಂಕ ಮೂಡಿಸಿರುವುದು ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್ಮನ್ ಗ ವಿಚಾರ, ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಅವರು ಈಗ ಒಳ್ಳೆಯ ಫಾರ್ಮ್ ನಲ್ಲಿ. ರನ್ಸ್ ಗಳಿಸಲು ಪರದಾಟ ನಡೆಸುತ್ತಲೇ ಇದ್ದಾರೆ. ಆದರೆ ಇವರು ತಂಡದಲ್ಲಿ ಇರುವುದಂತೂ ಖಂಡಿತ, ಹಾಗಿರುವಾಗ ಇವರ ಜೊತೆಗೆ ಓಪನರ್ ಆಗಿ ಯಾವ ಆಟಗಾರ ಆಡಬೇಕು ಎನ್ನುವ ಚರ್ಚೆ ಕೂಡ ಇದೆ. ಕೆ.ಎಲ್.ರಾಹುಲ್ (KL Rahul) ಮತ್ತು ಶಿಖರ್ ಧವನ್ (Shikhar Dhawan) ಅವರ ಹೆಸರು ಕೇಳಿ ಬರುತ್ತಿದೆಯಾದರು, ಅವರಿಬ್ಬರು ಒಳ್ಳೆಯ ಫಾರ್ಮ್ ನಲ್ಲಿಲ್ಲ. ಕೆ.ಎಲ್.ರಾಹುಲ್ ಅವರು ಕೂಡ ರನ್ಸ್ ಗಳಿಸೋದಕ್ಕೆ ಕಷ್ಟಪಡುತ್ತಿದ್ದಾರೆ . ಇತ್ತ ಇಶಾನ್ ಕಿಶನ್ (Ishan Kishan) ಅವರು ಡಬಲ್ ಸೆಂಚುರಿ ಭಾರಿಸಿ, ಈಗ ಅದ್ಭುತ ಫಾರ್ಮ್ ನಲ್ಲಿದ್ದಾರೆ. ಇದನ್ನು ಓದಿ..RCB IPL 2023: ಕಪ್ ಗೆಲ್ಲುವ ಸ್ಕೆಚ್ ಹಾಕಿದ ಆರ್ಸಿಬಿ: ಆರಂಭಿಕ ಸ್ಥಾನ ಯಾರದ್ದು ಗೊತ್ತೇ?? ತಿಳಿದರೆ ಶೇಕ್ ಆಗಿ ಬಿಡ್ತೀರಾ. ಎಬಿಡಿ ಪ್ಲಾನ್ ಆರಂಭ.

ಹಾಗಾಗಿ ಇಶಾನ್ ಕಿಶನ್ ಅವರು ಓಪನಿಂಗ್ ಬ್ಯಾಟ್ಸ್ಮನ್ ಆಗಲಿ ಎಂದು ಹಲವರ ಅಭಿಪ್ರಾಯ ಆಗಿದ್ದು, ಆಸ್ಟ್ರೇಲಿಯಾದ ಮಾಜಿ ಬೌಲರ್ ಬ್ರೆಟ್ ಲೀ (Brett Lee) ಅವರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಇತ್ತೀಚೆಗೆ ತವರಿನಲ್ಲಿ ನಡೆದ ಇಂಡಿಯಾ ವರ್ಸಸ್ ಬಾಂಗ್ಲಾದೇಶ್ (India vs Bangladesh) ಏಕದಿನ ಸರಣಿಯಲ್ಲಿ ದ್ವಿಶತಕ ಭಾರಿಸಿ, ಟೀಮ್ ಇಂಡಿಯಾದ ಓಪನರ್ ಆಗುವ ಎಲ್ಲಾ ಅವಕಾಶಗಳು ಇಶಾನ್ ಕಿಶನ್ ಅವರ ಬಳಿ ಇದೆ. ಇದು ನಡೆಯುತ್ತೋ ಇಲ್ಲವೋ ಗೊತ್ತಿಲ್ಲ, ಏಕದಿನ ಪಂದ್ಯದಲ್ಲಿ ಅತ್ಯಂತ ವೇಗವಾಗಿ 200 ರನ್ಸ್ ಗಳಿಸಿದರು. ಇಶಾನ್ ಕಿಶನ್ ಅವರು ಇದೇ ಫಾರ್ಮ್ ನಲ್ಲಿ ಇದ್ದರೆ, ವಿಶ್ವಕಪ್ ಗೆ ಅತ್ಯುತ್ತಮ ಓಪನರ್ ಆಗುತ್ತಾರೆ. ದ್ವಿಶತಕ ಈಗಾಗಲೇ ಸಾಧಿಸಿದ ಮೈಲಿಗಲ್ಲು ಎನ್ನುವುದನ್ನು ಮರೆತರೆ, ಸಾಧಿಸೋದಕ್ಕೆ ಇನ್ನು ತುಂಬಾ ಇದೆ. ಫಿಟ್ ಆಗಿದ್ದು, ಮುಂದಿನ ಆಟಗಳಲ್ಲಿ ಇನ್ನು ಉತ್ತಮವಾಗಿ ಆಡಿ, ಹೆಚ್ಚು ರನ್ಸ್ ಗಳಿಸುವ ಕಡೆಗೆ ಇಶಾನ್ ಅವರು ಪ್ರಯತ್ನ ಮಾಡಬೇಕು..” ಎಂದು ಇಶಾನ್ ಕಿಶನ್ ಅವರು ಹೇಳಿದ್ದಾರೆ.. ಇದನ್ನು ಓದಿ.. Kannada News: ನೂರಾರು ಕೋಟಿ ಬಾಚಿದರೂ ನಿರ್ದೇಶಕ ತ್ರಿವಿಕ್ರಮ್ ಈಗಲೂ ಬಾಡಿಗೆ ಮನೆಯಲ್ಲಿ 5 ಸಾವಿರ ಕಟ್ಟಿ ಅಲ್ಲೇ ಇರುವುದು ಯಾಕೆ ಗೊತ್ತೇ??

Comments are closed.