Neer Dose Karnataka
Take a fresh look at your lifestyle.

Cricket News: ಬೇಕು ಬೇಕು ಅಂತಾನೆ ಹೋಗಿ, ಬಾಲಿವುಡ್ ನಟಿಯರನ್ನು ಮದುವೆಯಾದ ಟಾಪ್ ಐವರು ಭಾರತೀಯ ಕ್ರಿಕೆಟಿಗರು ಯಾರ್ಯಾರು ಗೊತ್ತೆ? ಇವೆಲ್ಲರಿಗೂ ಅವರೇ ಬೇಕಿತ್ತು.

Cricket News: ನಮ್ಮ ಭಾರತ ಕ್ರಿಕೆಟಿಗರು ಯಾವುದೇ ಸೆಲೆಬ್ರಿಟಿಗಳಿಗೂ ಕಡಿಮೆ ಇಲ್ಲ. ಕ್ರಿಕೆಟಿಗರು ಒಂದು ಉತ್ತಮ ಪ್ರದರ್ಶನ ನೀಡುವ ಮೂಲಕ ದೇಶಾದ್ಯಂತ ಸಂಚಲನವಾಗುತ್ತಾರೆ. ಹಲವು ಬ್ರ್ಯಾಂಡ್ ಗಳಿಗೆ ಅಂಬಾಸಿಡರ್ ಆಗುತ್ತಾರೆ, ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇವುಗಳ ಮೂಲಕ ವಿಶ್ವಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಸಹ ಗಳಿಸುತ್ತಾರೆ. ಕೆಲವು ಟೀಮ್ ಇಂಡಿಯಾ ಕ್ರಿಕೆಟಿಗರು ಬಾಲಿವುಡ್ ಸೆಲೆಬ್ರಿಟಿಗಳನ್ನೇ ಮದುವೆಯಾಗಿದ್ದಾರೆ. ಈಗಷ್ಟೇ ಮದುವೆಯಾದ ಕೆ.ಎಲ್.ರಾಹುಲ್ ಮತ್ತು ಅಥಿಯಾ ಶೆಟ್ಟಿ ಅವರನ್ನು ಸೇರಿಸಿ, ಬಾಲಿವುಡ್ ನಟಿಯರನ್ನು ಮದುವೆಯಾದ ಟಾಪ್ ಕ್ರಿಕೆಟಿಗರು ಯಾರು ಎಂದು ತಿಳಿಸುತ್ತೇವೆ ನೋಡಿ..

ಕೆ.ಎಲ್.ರಾಹುಲ್ ಅಥಿಯಾ ಶೆಟ್ಟಿ :- ಇವರಿಬ್ಬರೂ ಮೂಲತಃ ಕರ್ನಾಟಕದವರೆ, ಈ ಜೋಡಿ ಕೆಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಆಗಾಗ ಹೊರಗಡೆ ಕಾಣಿಸಿಕೊಳ್ಳುತ್ತಿದ್ದರು. ರಾಹುಲ್ ಅವರು ಟೂರ್ನಿಗಳಿಗಾಗಿ ಹೊರದೇಶಕ್ಕೆ ಹೋದಾಗ, ಅಥಿಯಾ ಸಹ ಜೊತೆಗೆ ಹೋಗುತ್ತಿದ್ದರು. ಅಥಿಯಾ ಶೆಟ್ಟಿ ಮಂಗಳೂರು ಮೂಲದ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಮಗಳು. ಈ ಸೋಮವಾರ ಜನವರಿ 23ರಂದು ಈ ಜೋಡಿ ಮದುವೆಯಾದರು.
ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ :- ಈ ಜೋಡಿ ಸುಮಾರು ಐದು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಖಾಸಗಿಯಾಗಿ 2017ರಲ್ಲಿ ಇಟಲಿಯಲ್ಲಿ ಮದುವೆಯಾದರು. ಇವರಿಬ್ಬರು ಎಲ್ಲರ ಫೇವರೆಟ್ ಜೋಡಿ ಎನ್ನುವುದು ನಿಜ. ಈ ಜೋಡಿಗೆ ವಮಿಕ ಹೆಸರಿನ ಮುದ್ದಾದ ಹೆಣ್ಣುಮಗು ಇದೆ. ಇದನ್ನು ಓದಿ..Cricket News: ಕೊಹ್ಲಿ ದಾಖಲೆಯನ್ನು ಕುಟ್ಟಿ ಪುಡಿ ಪುಡಿ ಮಾಡಿದ ಶುಭ್ಮಂ ಗಿಲ್, ಈತನ ಕಂಡು ಕೊಹ್ಲಿ ಗೆ ಶಾಕ್. ಏನಾಗಿದೆ ಗೊತ್ತೇ??

ಹರ್ಭಜನ್ ಸಿಂಗ್ ಗೀತಾ ಬಸ್ರ :- ಭಾರತ ತಂಡದ ಖ್ಯಾತ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಅವರು ಬ್ರಿಟಿಷ್ ಮೂಲದವರಾದ ಬಾಲಿವುಡ್ ನಲ್ಲಿ ಸಕ್ರಿಯವಾಗಿದ್ದ ನಟಿ ಗೀತಾ ಬಸ್ರ ಅವರನ್ನು ಮದುವೆಯಾಗಿದ್ದಾರೆ. ಇವರು ಹಿಂದಿಯ ದಿಲ್ ದಿಯಾ ಹೈ, ದಿ ಟ್ರೈನ್ ಹಾಗೂ ಇನ್ನಿತರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ದಂಪತಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು ಇದ್ದಾರೆ..
ಯುವರಾಜ್ ಸಿಂಗ್ ಹೇಜಲ್ ಕೀಚ್ :- ಟೀಮ್ ಇಂಡಿಯಾದ ಮತ್ತೊಬ್ಬ ಖ್ಯಾತ ಆಟಗಾರ ಯುವರಾಜ್ ಸಿಂಗ್ ಅವರು ಬ್ರಿಟನ್ ಮೂಲದ ನಟಿ ಹೇಜಲ್ ಕೀಚ್ ಅವರೊಡನೆ ಮದುವೆಯಾಗಿದ್ದಾರೆ. ಇವರು ಹಲವು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರೆ, ಬಾದಿಗಾರ್ಡ್, ಮ್ಯಾಕ್ಸಿಮಂ ಹಾಗೂ ಇನ್ನಿತರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಬ್ಬರು 2016ರಲ್ಲಿ ಮದುವೆಯಾದರು.

ಮೊಹಮ್ಮದ್ ಅಜರುದ್ದೀನ್ ಸಂಗೀತ ಬಿಜಲಾನಿ :- ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಅಜರುದ್ದೀನ್ ಅವರು ಬಾಲಿವುಡ್ ನಟಿ ಸಂಗೀತಾ ಬಿಜ್ಲಾನಿ ಅವರ ಜೊತೆಗೆ 1996ರಲ್ಲಿ ಮದುವೆಯಾದರು. ಇವರಿಬ್ಬರ ಮದುವೆ ಭಾರತ ದೇಶದಲ್ಲಿ ದೊಡ್ಡದಾಗಿ ಸುದ್ದಿಯಾಗಿತ್ತು. ಮೊಹಮ್ಮದ್ ಅಜರುದ್ದೀನ್ ಅವರಿಗೆ ಇದು ಎರಡನೇ ಮದುವೆ ಆಗಿತ್ತು. ಆದರೆ ಸಂಗೀತ ಅವರಿಗು ವಿಚ್ಛೇದನ ನೀಡಿದರು. ಇದನ್ನು ಓದಿ.. Cricket News: ಕೊನೆಗೂ ವರ್ಷಗಳಿಂದ ಕಾಯುತ್ತಿದ್ದ ಖಡಕ್ ಆಟಗಾರ ವಾಪಾಸ್ ಬಂದೆ ಬಿಟ್ಟ: ಭಾರತವನ್ನು ಟಚ್ ಮಾಡೋಕೆ ಆಗಲ್ಲ. ಯಾರು ಗೊತ್ತೇ??

Comments are closed.