Neer Dose Karnataka
Take a fresh look at your lifestyle.

Cricket News: ರಾಹುಲ್ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಕನ್ನಡಿಗ ವೆಂಕಟೇಶ್ ಪ್ರಸಾದ್. ಮತ್ತೊಬ್ಬ ಕನ್ನಡಿಗನ ಬಗ್ಗೆ ಹೇಳಿದ್ದೇನು ಗೊತ್ತೇ??

Cricket News: ಟೀಮ್ ಇಂಡಿಯಾ ಈಗ ಆಡುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿ, ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದೆ. ಈ ಪಂದ್ಯದಲ್ಲಿ ರವೀಂದ್ರ ಜಡೇಜಾ ಅವರು ಅತ್ಯುತ್ತಮ ಪ್ರದರ್ಶನ ನೀಡಿದರು, ಆದರೆ ಕೆ.ಎಲ್.ರಾಹುಲ್ ಅವರು ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿದರು. ಇದರಿಂದ ಹಲವರಿಗೆ ಅಸಮಾಧಾನ ಇರುವುದಂತೂ ನಿಜ, ಆದರೆ ಕರ್ನಾಟಕದವರೆ ಆದ ಮತ್ತೊಬ್ಬ ಆಟಗಾರ ವೆಂಕಟೇಶ್ ಪ್ರಸಾದ್ ಅವರು ಪದೇ ಪದೇ ಕೆ.ಎಲ್.ರಾಹುಲ್ ಅವರಿಗೆ ಅವಕಾಶ ಕೊಡುತ್ತಿರುವುದಕ್ಕೆ ಅಸಮಾಧಾನ ಹೊರಹಾಕಿದ್ದಾರೆ.

ಟ್ವೀಟ್ ಮಾಡುವ ಮೂಲಕ ವೆಂಕಟೇಶ್ ಪ್ರಸಾದ್ ಅವರು ಬೇಸರ ಹೊರಹಾಕಿದ್ದಾರೆ. “ಕೆ.ಎಲ್.ರಾಹುಲ್ ಮತ್ತು ಅವರ ಟ್ಯಾಲೆಂಟ್ ಮೇಲೆ ನನಗೆ ಗೌರವ ಇದೆ. ಆದರೆ ಅವರ ಹಿಂದಿನ ಕೆಲವು ಪರ್ಫಾರ್ಮೆನ್ಸ್ ಗಳು ಕಳಪೆ ಆಗಿದೆ. 8 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ನಲ್ಲಿ ಕಳೆದ 46 ಟೆಸ್ಟ್ ಪಂದ್ಯಗಳನ್ನಾಡಿದ್ದರು ಕೂಡ, ಅವರ ಆವರೇಜ್ ಸ್ಕೋರ್ ಕೇವಲ 34. ಬೇರೆ ಯಾವ ಆಟಗಾರರಿಗೂ ಇಷ್ಟು ಚಾನ್ಸ್ ಕೊಡಲಾಗಿದ್ಯಾ ಅಂತ ನನಗೆ ಗೊತ್ತಿಲ್ಲ. ಈ ಲಿಸ್ಟ್ ನಲ್ಲಿ ಬಹಳಷ್ಟು ಆಟಗಾರರು ಇದ್ದಾರೆ, ಶುಬ್ಮನ್ ಗಿಲ್ ಅವರು ಅದ್ಭುತ ಫಾರ್ಮ್ ನಲ್ಲಿದ್ದಾರೆ, ಸರ್ಫಾರಾಜ್ ಅವರು ಒಳ್ಳೆಯ ಫಾರ್ಮ್ ನಲ್ಲಿದ್ದಾರೆ, ರಾಹುಲ್ ಅವರಿಗಿಂತ ಸೂಕ್ತವಾಗಿರುವ ಸಾಕಷ್ಟು ಆಟಗಾರರಿದ್ದಾರೆ. ಕೆಲವರಿಗೆ ಅದೃಷ್ಟದಿಂದ ಹೆಚ್ಚು ಯಶಸ್ಸು ಸಿಗುತ್ತಿದೆ, ಇನ್ನು ಕೆಲವರಿಗೆ ಯಶಸ್ಸು ಸಿಗುತ್ತಿಲ್ಲ. ಇದನ್ನು ಓದಿ..Cricket News: ಒಂದು ಸಾಲದು ಎಂದು ಎರೆಡು ಅಥವಾ ಮೂರು ಬಾರಿ ಮದುವೆಯಾದ ಟಾಪ್ ಕ್ರಿಕೆಟಿಗರು ಯಾರ್ಯಾರು ಗೊತ್ತೇ??

ಈ ವಿಚಾರ ಇನ್ನಷ್ಟು ಕೆಟ್ಟದಾಗಿ ಕಾಣುವುದಕ್ಕೆ ಕಾರಣ ರಾಹುಲ್ ಅವರನ್ನು ವೈಸ್ ಕ್ಯಾಪ್ಟನ್ ಆಗಿರುವುದು. ಟೆಸ್ಟ್ ಕ್ರಿಕೆಟ್ ಗೆ ವೈಸ್ ಕ್ಯಾಪ್ಟನ್ ಆಗುವುದಕ್ಕೆ ಅಶ್ವಿನ್ ಅವರ ಬುದ್ಧಿಶಕ್ತಿ ಚೆನ್ನಾಗಿದೆ. ಅವರಲ್ಲದೆ ಹೋದರೆ, ಪೂಜಾರ ಅಥವಾ ಜಡೇಜಾ ಕೂಡ ಇದ್ದಾರೆ. ರಾಹುಲ್ ಗಿಂತ ಮಯಾಂಕ್ ಅಗರ್ವಾಲ್ ಅವರ ಪ್ರದರ್ಶನ ಕೂಡ ಚೆನ್ನಾಗಿದೆ. ರಾಹುಲ್ ಅವರನ್ನು ಅವರ ಪ್ರತಿಭೆಗಿಂತ ಹೆಚ್ಚಾಗಿ ಫೇವರಿಸಂ ಇಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಕಳೆದ 8 ವರ್ಷಗಳಿಂದ ಆಡುತ್ತಿದ್ದರು ಕೂಡ ರಾಹುಲ್ ಅವರು ಸತತವಾಗಿ ಕಳಪೆ ಫಾರ್ಮ್ ನಲ್ಲೇ ಇದ್ದಾರೆ, ಆದರೆ ಹಿರಿಯ ಆಟಗಾರರು ಇದರ ಬಗ್ಗೆ ಧ್ವನಿ ಎತ್ತುತ್ತಿಲ್ಲ. ರಾಹುಲ್ ಐಪಿಎಲ್ ಟೀಮ್ ಕ್ಯಾಪ್ಟನ್ ಆಗಿರುವುದರಿಂದ ಹೀಗೆ ನಡೆಯುತ್ತಿದೆ..” ಎಂದು ಇದ್ದಿದ್ದನ್ನು ಇದ್ದ ಹಾಗೆ ನೇರವಾಗಿ ಆಯ್ಕೆ ಸಮಿತಿಯ ವಿರುದ್ಧ ಕರ್ನಾಟಕದ ಆಟಗಾರನ ಬಗ್ಗೆಯೇ ಅಸಮಾಧಾನ ಹೊರಹಾಕಿದ್ದಾರೆ ವೆಂಕಟೇಶ್ ಪ್ರಸಾದ್. ಇದನ್ನು ಓದಿ..Cricket News: ಏನು ಪ್ರಯೋಜನಕ್ಕೆ ಬಾರದೆ ಇದ್ದರೂ ಸ್ಥಾನ ಪಡೆಯುತ್ತಿದ್ದ ರಾಹುಲ್ ಗೆ ಕೊನೆಗೂ ಬ್ರೇಕ್: ಷಾಕಿಂಗ್ ಹೇಳಿಕೆ ಕೊಟ್ಟ ಬಿಸಿಸಿಐ ಅಧಿಕಾರಿ. ಹೇಳಿದ್ದೇನು ಗೊತ್ತೇ?

Comments are closed.