Neer Dose Karnataka
Take a fresh look at your lifestyle.

WPL 2023: ಮೊದಲ ಪಂದ್ಯದಲ್ಲಿಯೇ ಹೀನಾಯ ಸೋಲು: ಆರ್ಸಿಬಿ ಸೋಲಿಗೆ ನೇರವಾಗಿ ಕಾರಣ ತಿಳಿಸಿದ ನಾಯಕಿ ಸ್ಮೃತಿ. ಏನು ಅಂತೇ ಗೊತ್ತೇ??

WPL 2023: ವುಮನ್ಸ್ ಪ್ರೀಮಿಯರ್ ಲೀಗ್ ನಲ್ಲಿ ಆರ್ಸಿಬಿ ತಂಡದ ಮೊದಲ ಪಂದ್ಯ ನಿನ್ನೆ ನಡೆಯಿತು, ಆರ್ಸಿಬಿ ವರ್ಸಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್ಸಿಬಿ ತಂಡ 60 ರನ್ ಗಳ ಅಂತರದಲ್ಲಿ ಸೋಲು ಕಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಡಿಸಿ ತಂಡದಲ್ಲಿ ಮೆಗ್ ಮ್ಯಾಲಿನ್ 72 ರನ್ಸ್ ಗಳಿಸಿ, ಶೆಫಾಲಿ ವರ್ಮಾ 84 ರನ್ಸ್ ಗಳಿಸುವ ಮೂಲಕ, 20 ಓವರ್ ಗಳಲ್ಲಿ 2 ವಿಕೆಟ್ಸ್ ನಷ್ಟಕ್ಕೆ 223 ರನ್ಸ್ ಗಳಿಸಿತು. ಈ ಬಿಗ್ ಸ್ಕೋರ್ ಚೇಸ್ ಮಾಡಿದ ಆರ್ಸಿಬಿ ನಿರೀಕ್ಷೆಯ ಮಟ್ಟದ ಪ್ರದರ್ಶನ ನೀಡಲಿಲ್ಲ. 20 ಓವರ್ ಗಳಲ್ಲಿ 8 ವಿಕೆಟ್ಸ್ ನಷ್ಟಕ್ಕೆ, 163 ರನ್ಸ್ ಗಳನ್ನಷ್ಟೇ ಗಳಿಸಿತು.

ಆರ್ಸಿಬಿ ತಂಡ ಮೊದಲ ಮ್ಯಾಚ್ ಸೋತಿದ್ದಕ್ಕೆ ಅಭಿಮಾನಿಗಳಿಗೂ ನಿರಾಶೆಯಾಗಿದೆ. ತಂಡದ ಸೋಲಿಗೆ ಕಾರಣ ಏನು ಎಂದು ಕ್ಯಾಪ್ಟನ್ ಸ್ಮೃತಿ ಮಂಧನ ಅವರು ತಿಳಿಸಿದ್ದಾರೆ, “ನಾವು ಅಂದುಕೊಂಡ ಹಾಗೆ ಬಿಗಿನಿಂಗ್ ನಮಗೆ ಸಿಗಲಿಲ್ಲ, ಆಪೋಸಿಟ್ ತಂಡಕ್ಕೆ 20 ರಿಂದ 30 ರನ್ಸ್ ಜಾಸ್ತಿ ಬಿಟ್ಟುಕೊಟ್ಟೆವು. ನಮ್ಮ ಗೇಮ್ ಪ್ಲಾನ್ ಬಗ್ಗೆ ಯೋಚಿಸಿ, ಮುಂದಿನ ಪಂದ್ಯದಲ್ಲಿ ಇನ್ನು ಸ್ಟ್ರಾಂಗ್ ಆಗಿ ಕಂಬ್ಯಾಕ್ ಮಾಡುತ್ತೇವೆ. ಬೌಲಿಂಗ್ ಬಗ್ಗೆ ಹೇಳೋದಾದರೆ, ಡೆಲ್ಲಿ ತಂಡದ ಹಾಗೆ ನಮ್ಮ ಪ್ರದರ್ಶನ ಇರಲಿಲ್ಲ. ಈ ಅಂಶವನ್ನು ಗಣನೆಗೆ ತೆಗೆದುಕೊಂಡು ಇದರ ಬಗ್ಗೆ ಹೆಚ್ಚು ಚಿಂತನೆ ಮತ್ತು ವರ್ಕ್ ಮಾಡಬೇಕು..” ಎಂದು ಸ್ಮೃತಿ ಮಂಧನ ಹೇಳಿದ್ದಾರೆ. ಇದನ್ನು ಓದಿ..Cricket News: ವಿಶ್ವಕಪ್ ಸೋತ ಬಳಿಕ ಹೆಚ್ಚಾಯ್ತು ಟೀಕೆ: ನೇರವಾಗಿ ಸ್ಮೃತಿ ಮಂದಣ್ಣ ವಿರುದ್ಧ ಅಂಜುಮ್ ಚೋಪ್ರಾ ಹೇಳಿದ್ದೇನು ಗೊತ್ತೇ??

“ಇನ್ನುಳಿದ ಫ್ರಾಂಚೈಸಿಗಳ ವಿರುದ್ಧ ನಾವು ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನು ಆಡಲಿದ್ದೇವೆ. ಈ ಪಂದ್ಯದಲ್ಲಿ ಆದ ಸೋಲನ್ನು ನಾವು ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತೇವೆ. ಈ ಪಂದ್ಯ ನಮ್ಮ ಪರವಾಗಿ ಇರಲಿಲ್ಲ. ನಡೆದದ್ದರ ಬಗ್ಗೆ ಆಲೋಚನೆ ಮಾಡಲು ಕೆಲವು ಘಂಟೆ ಕಾಲಾವಕಾಶ ಇದೆ. ಮುಂದಿನ ಪಂದ್ಯಕ್ಕೆ ಪಾಸಿಟಿವ್ ಆಗಿ ಕಂಬ್ಯಾಕ್ ಮಾಡುತ್ತೇವೆ. ಪಿಚ್ ಬದಲಾವಣೆ ಬಗ್ಗೆ ನಾವು ಯೋಚನೆ ಮಾಡೋದಿಲ್ಲ. ನಮ್ಮ ತಂಡದ ಬ್ಯಾಟ್ಸ್ ವುಮನ್ ಗಳಿಗೆ ಉತ್ತಮ ಶುರುವಾತ್ ಸಿಕ್ಕಿತು, ನಾನು ಮತ್ತು ಹೀದರ್ ಆಡಿದ ಹಾಗೆ ಶುರು ಮಾಡಿದರು ಕೂಡ ಅದನ್ನು ಮುಂದುವರೆಸಲು ಆಗಲಿಲ್ಲ..” ಎಂದು ತಂಡದಲ್ಲಿ ಆದದ್ದನ್ನು ತಿಳಿಸಿರುವ ಸ್ಮೃತಿ ಅವರು ಮುಂದಿನ ಪಂದ್ಯವನ್ನು ಗೆಲ್ಲುವ ಭರವಸೆ ನೀಡಿದ್ದಾರೆ. ಇದನ್ನು ಓದಿ..Cricket News: ಕ್ರಿಕೆಟ್ ನಲ್ಲಿ ಮಿಂಚಿ ದೇಶವನ್ನೇ ಗಡ ಗಡ ನಡುಗುವಂತೆ ಮಾಡಿರುವ ಸ್ಮೃತಿ ಮಂದಣ್ಣ ರವರ ವಯಸ್ಸು ತಿಳಿದರೆ ನೀವು ನಂಬೋದೇ ಇಲ್ಲ.

Comments are closed.