Neer Dose Karnataka
Take a fresh look at your lifestyle.

Cricket News: ಒಂದು ಹೇಳಿಕೆಯ ಮೂಲಕ ವಿರಾಟ್ ಕೊಹ್ಲಿ ಗೆ ಶಾಕ್ ಕೊಟ್ಟ ಎಬಿಡಿ: ಇಷ್ಟು ದಿವಸ ದೋಸ್ತಿನೆ ಬೆಸ್ಟ್ ಎನ್ನುತ್ತಿದ್ದ ಎಬಿಡಿ ಉಲ್ಟಾ ಹೊಡೆದದ್ದು ಯಾಕೆ ಗೊತ್ತೇ??

Cricket News: ದಕ್ಷಿಣ ಆಫ್ರಿಕಾ ತಂಡದ ಆಟಗಾರ ಎಬಿಡಿ ಅವರು ನಮ್ಮ ಬೆಂಗಳೂರಿನ ಐಪಿಎಲ್ ಟೀಮ್ ಆರ್ಸಿಬಿ ತಂಡದ ಆಪತ್ಬಾಂಧವ ಎಂದೇ ಕರೆಸಿಕೊಳ್ಳುತ್ತಿದ್ದರು. ಮಿಸ್ಟರ್ 360 ಎಂದೇ ಇವರನ್ನು ವಿಶ್ವಕ್ರಿಕೆಟ್ ಅಭಿಮಾನಿಗಳು ಕರೆಯುತ್ತಾರೆ. ಎಬಿಡಿ ಮತ್ತು ವಿರಾಟ್ ಕೊಹ್ಲಿ ಅವರ ಕಾಂಬಿನೇಷನ್ ಆರ್ಸಿಬಿ ತಂಡದಲ್ಲಿ 10 ವರ್ಷಕ್ಕಿಂತ ಸಮಯ ಮ್ಯಾಜಿಕ್ ಮಾಡಿದೆ ಎಂದೇ ಹೇಳಬಹುದು. ಇವರಿಬ್ಬರ ಜೊತೆಯಾಟ ಆರ್ಸಿಬಿ ಅಭಿಮಾನಿಗಳಿಗೆ ರಸದೌತಣ ಕೊಡುತ್ತಿತ್ತು, ಇಬ್ಬರು ಜೊತೆಯಾಗಿ ಸೇರಿ ಬಹಳಷ್ಟು ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದಾರೆ.

ಅಷ್ಟೇ ಅಲ್ಲದೆ, ವಿರಾಟ್ ಮತ್ತು ಎಬಿಡಿ ಸಹೋದರರು ಎನ್ನುವ ಹಾಗಿದ್ದರು, ಇವರಿಬ್ಬರು ಬೆಸ್ಟ್ ಫ್ರೆಂಡ್ಸ್ ಕೂಡ ಹೌದು. ಎಬಿಡಿ ಅವರು 2021ರ ಡಿಸೆಂಬರ್ ತಿಂಗಳಿನಲ್ಲಿ ಎಲ್ಲ ಮಾದರಿಯ ಕ್ರಿಕೆಟ್ ಇಂದ ರಿಟೈರ್ಮೆಂಟ್ ಪಡೆದುಕೊಂಡರು, ಈಗ ಆರ್ಸಿಬಿ ತಂಡದಲ್ಲಿ ಅವರು ಇಲ್ಲ, ಆದರೆ ವಿರಾಟ್ ಕೊಹ್ಲಿ ಅವರು ಆರ್ಸಿಬಿ ತಂಡದಲ್ಲಿ ಮುಂದುವರೆದಿದ್ದಾರೆ, ವಿರಾಟ್ ಅವರು ಕೂಡ ಕ್ಯಾಪ್ಟನ್ಸಿಯಿಂದ ಹೊರಬಂದಿದ್ದು ಈಗ ಆಟಗಾರನಾಗಿ ಆರ್ಸಿಬಿ ತಂಡದಲ್ಲಿ ಇದ್ದಾರೆ. ಇನ್ನೇನು ಐಪಿಎಲ್ ಶುರುವಾಗಲಿದ್ದು, ಈ ವೇಳೆ ಎಬಿಡಿ ಅವರಿಗೆ ಒಂದು ಪ್ರಶ್ನೆ ಕೇಳಲಾಗಿದೆ, ಅದೇನೆಂದರೆ.. ಟಿ20 ಕ್ರಿಕೆಟ್ ನಲ್ಲಿ ಶ್ರೇಷ್ಠ ಆಟಗಾರ ಯಾರು ಎಂದು ಪ್ರಶ್ನೆ ಕೇಳಲಾಗಿದೆ.. ಇದನ್ನು ಓದಿ..Cricket News: ಕ್ರಿಕೆಟ್ ನಲ್ಲಿ ಮಿಂಚಿ ದೇಶವನ್ನೇ ಗಡ ಗಡ ನಡುಗುವಂತೆ ಮಾಡಿರುವ ಸ್ಮೃತಿ ಮಂದಣ್ಣ ರವರ ವಯಸ್ಸು ತಿಳಿದರೆ ನೀವು ನಂಬೋದೇ ಇಲ್ಲ.

ಅದಕ್ಕೆ ಉತ್ತರ ಕೊಟ್ಟಿರುವ ಎಬಿಡಿ ಅವರು, ತಮ್ಮ ಬೆಸ್ಟ್ ಫ್ರೆಂಡ್ ವಿರಾಟ್ ಕೊಹ್ಲಿ ಅವರ ಹೆಸರನ್ನು ತೆಗೆದುಕೊಳ್ಳದೆ, ಅಫ್ಘಾನಿಸ್ತಾನ್ ತಂಡದ ಆಟಗಾರನ ಹೆಸರು ಸೂಚಿಸಿದ್ದಾರೆ. “ಟಿ20 ಕ್ರಿಕೆಟ್ ನಲ್ಲಿ ಶ್ರೇಷ್ಠ ಆಟಗಾರ ರಶೀದ್ ಖಾನ್, ಅವರಿಗಿಂತ ಶ್ರೇಷ್ಠ ಆಟಗಾರನನ್ನು ನಾನು ನೋಡಿಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡು ವಿಭಾಗಗಳಲ್ಲೂ ಪಂದ್ಯವನ್ನು ಬದಲಿಸುವ ಶಕ್ತಿ ಅವರಿಗೆ ಇದೆ. ರಶೀದ್ ಖಾನ್ ಅವರು ಹಲವು ಸಾರಿ ಮ್ಯಾಚ್ ವಿನ್ನರ್ ಆಗಿದ್ದಾರೆ. ಪಂದ್ಯ ಗೆಲ್ಲಲು ಆಡುವ ಅವರು, ವಿಶ್ವದಲ್ಲಿ ಎಲ್ಲೇ ಟಿ20 ಮ್ಯಾಚ್ ಇದ್ದರು ಕೂಡ, ಗೆಲ್ಲಲೇಬೇಕು ಎಂದು ಹೋರಾಡುತ್ತಾರೆ. ಯಾವುದೋ ಒಂದು ಅಂಶದಲ್ಲಿ ಮಾತ್ರವಲ್ಲ, ಎಲ್ಲದರಲ್ಲೂ ಅವರು ಶ್ರೇಷ್ಠ ಟಿ20 ಆಟಗಾರ ಆಗಿದ್ದಾರೆ..” ಎಂದು ಉತ್ತರ ಕೊಟ್ಟಿದ್ದಾರೆ ಎಬಿಡಿ. ಆದರೆ ಇದರ ಬಗ್ಗೆ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳಲ್ಲಿ ಅಸಮಾಧಾನ ಶುರುವಾಗಿದೆ. ಇದನ್ನು ಓದಿ..Cricket News: ಮದುವೆಯಾಗಿರುವ ಶಾರ್ದುಲ್ ಹಾಗೂ ಪತ್ನಿ ಮಿಥಾಲಿ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ?? ಇಷ್ಟಕ್ಕೂ ಯಾರು ದೊಡ್ಡವರು ಗೊತ್ತೇ?

Comments are closed.