Neer Dose Karnataka
Take a fresh look at your lifestyle.

Health Tips in Kannada: ನಿಮಗೆ ಹೃದಯಾಗಾತ ಆಗುವ ಮೊದಲು ಈ ಸೂಚನೆಗಳು ಸಿಗುತ್ತವೆ, ಅರಿತುಕೊಂಡರೆ ಜೀವ ಸೇಫ್. ಏನೇನು ಗೊತ್ತೇ?? ಏನು ಮಾಡಬೇಕು ಗೊತ್ತೇ?

Health Tips in Kannada: ಹಾರ್ಟ್ ಅಟ್ಯಾಕ್ ಇದು ಈಗಿನ ಕಾಲದಲ್ಲಿ ಯಾರಿಗೆ ಯಾವಾಗ ಹೇಗೆ ಬರುತ್ತದೆ ಎಂದು ಹೇಳುವುದಕ್ಕೆ ಆಗೋದಿಲ್ಲ. ವಯಸ್ಸಿನ ಮಿತಿ ಇಲ್ಲದೆ, ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರಲ್ಲೂ ಹಾರ್ಟ್ ಅಟ್ಯಾಕ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಅನುಭವಿ ವೈದ್ಯರು ಹೇಳುವ ಹಾಗೆ, ಹಾರ್ಟ್ ಅಟ್ಯಾಕ್ ಆಗುವುದಕ್ಕೂ ಮೊದಲು ಕೆಲವು ಸೂಚನೆಗಳು ಸಿಗುತ್ತದೆ, ಅದನ್ನು ಅರ್ಥ ಮಾಡಿಕೊಂಡರೆ ನಿಮ್ಮ ಪ್ರಾಣವನ್ನು ಸೇಫ್ ಆಗಿ ಇರಿಸಿಕೊಳ್ಳಬಹುದು. ಹಾಗಿದ್ದಲ್ಲಿ, ವೈದ್ಯರು ತಿಳಿಸಿರುವ ಆ ಸೂಚನೆಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

*ನಮ್ಮ ಹೃದಯಕ್ಕೆ ಸಂಬಂಧಿಸಿದ ಹಾಗೆ ಯಾವುದೇ ಥರದ ಸಮಸ್ಯೆ ಆಗುತ್ತದೆ ಎನ್ನುವ ಮೊದಲು ಎದೆ ನೋವು ಬರುವುದಕ್ಕೆ ಶುರುವಾಗುತ್ತದೆ. ಪದೇ ಪದೇ ಎದೆ ನೋವು ಬರುತ್ತಿರುತ್ತದೆ, ಈ ರೀತಿ ಬರುವ ನೋವು ಹಾರ್ಟ್ ಅಟ್ಯಾಕ್ ಗೆ ಕಾರಣವಾಗಬಹುದು. ಹಾಗಾಗಿ ನಿಮಗೆ ಪದೇ ಪದೇ ಎದೆ ನೋವು ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡಬೇಡಿ.
*ನೀವು ಫಿಸಿಕಲ್ ಆಕ್ಟಿವಿಟಿಗಳಲ್ಲಿ ಭಾಗವಹಿಸಿದಾಗ ದೇಹಕ್ಕೆ ಸುಸ್ತು ಆಯಾಸ ಆಗುತ್ತದೆ. ಇದು ತುಂಬಾ ಕಾಮನ್, ಆದರೆ ನೀವು ಏನು ಮಾಡದೆಯೇ ಇದ್ದರು ಕೂಡ, ನಿಮ್ಮ ದೇಹಕ್ಕೆ ಆಯಾಸ ಆಗುತ್ತಿದ್ದರೆ, ಅದರಿಂದ ನಿಮಗೆ ಸುಸ್ತಾಗುತ್ತಿದ್ದರೆ ಕೂಡಲೇ ಆಸ್ಪತ್ರೆಗೆ ಹೋಗುವುದು ಒಳ್ಳೆಯದು. ಇದನ್ನು ಓದಿ..Health Tips: ಯಪ್ಪಾ ನೀವು ಯಾವಾಗಲು ಲಟಕ್ ಲಟಕ್ ಅಂತ ನಟ್ಟಿಗೆ ತೆಗೆಯುತ್ತೀರಾ? ಹೀಗೆ ಮಾಡಿದರೆ ಏನಾಗುತ್ತದೆ ಗೊತ್ತೇ??

*ಈಗಿನ ಕಾಲದಲ್ಲಿ ಎಲ್ಲರಲ್ಲೂ ಒತ್ತಡ ಇದೆ, ಅದರಿಂದ ಆತಂಕ ಕೂಡ ಆಗುತ್ತದೆ. ಆದರೆ ಯಾವುದೇ ಸಮಸ್ಯೆ ಇಲ್ಲದೆ ನಿಮಗೆ ಆತಂಕ ಆಗುತ್ತಿದ್ದರೆ, ನಿಮ್ಮ ಮನಸ್ಸಿನಲ್ಲಿ ಭಯ ಶುರುವಾಗಿದ್ದರೆ, ಅದನ್ನು ಅಸಡ್ಡೆ ಮಾಡದೆ ಕೂಡಲೇ ವೈದ್ಯರ ಬಳಿ ಹೋಗಿ.
*ಕಾಲು ನೋವು ಸಾಮಾನ್ಯವಾಗಿ ಬರುವ ನೋವು, ಆದರೆ ನಿಮಗೆ ಪದೇ ಪದೇ ಕಾಲು ನೋವು ಬಂದರೆ, ಬ್ಲಡ್ ನಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿರುವುದರಿಂದ ಕೂಡ ಕಾಲು ನೋವು ಬರಬಹುದು. ಯಾವುದೇ ಕಾರಣ ಇದ್ದರು, ನಿಮಗೆ ಪದೇ ಪದೇ ಪಾದ ನೋವು ಬರುತ್ತಿದ್ದರೆ, ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.
*ಕೆಲವು ಸಾರಿ ನೀವು ಏನು ಮಾಡದೆಯೇ ಇದ್ದರು, ಬೆವರು ಬರುವುದಕ್ಕೆ ಶುರುವಾಗಬಹುದು. ಇದು ಸಹ ಹೃದಯಕ್ಕೆ ಸಂಬಂಧಿಸಿದ ತೊಂದರೆಯ ಮುನ್ಸೂಚನೆ ಆಗಿರುತ್ತದೆ, ಹಾಗಾಗಿ ನೀವು ತಪ್ಪದೇ ವೈದ್ಯರನ್ನು ಸಂಪರ್ಕಿಸಬೇಕು. ಇದನ್ನು ಓದಿ..Health Tips: ಹೃದಯದ ಸಮಸ್ಯೆಗಳು ಬರಬರಾದು ಎಂದರೆ, ಅಡುಗೆ ಎಣ್ಣೆಯಲ್ಲಿ ಬದಲಾವಣೆ ಮಾಡಿ. ಈ ಎಣ್ಣೆಯನ್ನು ಬಳಸಿದರೆ ಹೃದಯದ ಸಮಸ್ಯೆ ಬರಲ್ಲ.

Comments are closed.