IPL 2023:ಚೆನ್ನೈ ತಂಡಕ್ಕೆ ಬಿಗ್ ಶಾಕ್: ಇಬ್ಬರು ಟಾಪ್ ಆಟಗಾರರು ಹೊರಕ್ಕೆ: ಇವರಿಲ್ಲದೆ ಪಂದ್ಯ ಗೆಲ್ಲಲು ಸಾಧ್ಯನಾ?? ಚೆನ್ನೈ ಕಥೆ ಉಡೀಸ್ ಹಾ?
IPL 2023: ಐಪಿಎಲ್ (IPL) ಪಂದ್ಯಗಳು ಶುರುವಾಗಿದ್ದು, ಭರ್ಜರಿಯಾಗಿ ಸಾಗುತ್ತಿದೆ. ಐಪಿಎಲ್ ನ ಪ್ರಬಲ ತಂಡಗಳಲ್ಲಿ ಒಂದಾದ ತಂಡ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings). ಈ ತಂಡವನ್ನು ಎಂ.ಎಸ್.ಧೋನಿ (MS Dhoni) ಅವರು ನಾಯಕನಾಗಿ ಮುನ್ನಡೆಸುತ್ತಿದ್ದರೆ. ಇದು ಧೋನಿ ಅವರು ಐಪಿಎಲ್ ನಲ್ಲಿ ಭಾಗಿಯಾಗುವ ಕೊನೆಯ ಸೀಸನ್ ಆಗಿದ್ದು, ಅಭಿಮಾನಿಗಳಲ್ಲಿ ಬೇಸರ, ಹಾಗೂ ಧೋನಿ ಅವರನ್ನು ಮೈದಾನದಲ್ಲಿ ನೋಡುವುದಕ್ಕೆ ಸಂತೋಷ ಎರಡು ಕೂಡ ಇದೆ..
ಕಳೆದ ವರ್ಷ ಫಾರ್ಮ್ ಕಳೆದುಕೊಂಡು, ಹಿಂದುಳಿದಿದ್ದ ಸಿ.ಎಸ್.ಕೆ (CSK) ತಂಡ ಈ ವರ್ಷ ಫಾರ್ಮ್ ಗೆ ಮರಳಿಬಂದಿದೆ. ಈವರೆಗೂ ಐಪಿಎಲ್ ನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದು, 4 ಪಾಯಿಂಟ್ಸ್ ಗಳ ಜೊತೆಗೆ ಒಳ್ಳೆಯ ಹಂತದಲ್ಲಿ ಸಾಗುತ್ತಿದೆ. ಸಿ.ಎಸ್.ಕೆ ಮುಂದಿನ ಪಂದ್ಯ ನಾಳೆ ರಾಜಸ್ತಾನ್ ರಾಯಲ್ಸ್ (CSK Vs RR) ತಂಡದ ವಿರುದ್ಧ ಚೆನ್ನೈನ (Chennai) ಚೆಪಾಕ್ ಸ್ಟೇಡಿಯಂ ನಲ್ಲಿ ನಡೆಯಲಿದೆ. ಪಂದ್ಯ ನಡೆಯುವುದಕ್ಕಿಂತ ಮೊದಲೇ ಚೆನ್ನೈ ತಂಡಕ್ಕೆ ಒಂದು ಶಾಕ್ ಸಿಕ್ಕಿದೆ.. ಇದನ್ನು ಓದಿ.. Cricket News: ರನ್ ಔಟ್ ಆದರೂ ಔಟಿಲ್ಲ ಎಂದು ಬಿಟ್ಟ ಅಂಪೈರ್: ಇದಕ್ಕೆ ಕಾರಣ ಕೇಳಿದರೆ, ನಿಜಕ್ಕೂ ಕ್ರಿಕೆಟ್ ನಿಮಗೆ ಗೊತ್ತೇ ಇಲ್ಲ ಅಂತೀರಾ.
ಅದೇನೆಂದರೆ, ಚೆನ್ನೈ ತಂಡದ ಇಬ್ಬರು ಆಟಗಾರರು, ಗಾಯದ ಕಾರಣಗಳಿಂದ ನಾಳೆಯ ಮ್ಯಾಚ್ ನಲ್ಲಿ ಪಾಲ್ಗೊಳ್ಳುವುದು ಡೌಟ್ ಎನ್ನುವ ಹಾಗಿದೆ. ಆ ಆಟಗಾರರು ಯಾರ್ಯಾರು ಎಂದು ನೋಡುವುದಾದರೆ, ಒಬ್ಬರು ದೀಪಕ್ ಚಾಹರ್ (Deepak Chahar), ಇವರಿಗೆ ಎಡಗಾಲಿನ ಮಂಡಿಗೆ ಏಟು ಬಿದ್ದು, ಡ್ರೆಸ್ಸಿಂಗ್ ರೂಮ್ ನಲ್ಲಿ ಚಿಕಿತ್ಸೆ ಕೊಡಲಾಗಿತ್ತು,. ಆದರೆ ಈಗ ಸ್ಕ್ಯಾನ್ ಮಾಡಿಸಬೇಕಿದ್ದು, ಜೊತೆಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಕೂಡ ಇರುವುದರಿಂದ, ಮುಂದಿನ ಪಂದ್ಯದಲ್ಲಿ ಇವರು ಆಡುವುದು ಡೌಟ್ ಆಗಿದೆ.
ಮತ್ತೊಬ್ಬ ಆಟಗಾರ ಬೆನ್ ಸ್ಟೋಕ್ಸ್ (Ben Stokes), ಆಲ್ ರೌಂಡರ್ ಆಗಿರುವ ಇವರು ಮೊನ್ನೆ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇವರ ಬಗ್ಗೆ ಅಪ್ಡೇಟ್ ನೀಡಿದ್ದು, ಬೆನ್ ಸ್ಟೋಕ್ಸ್ ಅವರ ಕಾಲಿನ ಬೆರಳಿಗೆ ಗಾಯ ಆಗಿರುವುದರಿಂದ ಅವರಿಗೆ ಚಿಕಿತ್ಸೆ ಅವಶ್ಯಕತೆ ಇದ್ದು, ಆ ಕಾರಣಕ್ಕೆ ಪಂದ್ಯದಲ್ಲಿ ಪಾಲ್ಗೊಳ್ಳುವುದು ಅನುಮಾನ ಆಗಿದೆ. ಇಬ್ಬರು ಪ್ರಮುಖ ಆಟಗಾರರಿಲ್ಲದೆ ಚೆನ್ನೈ ತಂಡ ಮುಂದಿನ ಪಂದ್ಯವನ್ನು ಆಡುತ್ತಾ ಎನ್ನುವುದು ಈಗಿರುವ ಪ್ರಶ್ನೆ ಆಗಿದೆ. ಇದನ್ನು ಓದಿ.. Business Ideas: ಎಷ್ಟು ಜನ ಮಾಡಿದರೂ, ಎಷ್ಟೇ ಮಾಡಿದರೂ, ಈ ಉದ್ಯಮಕ್ಕೆ ಡಿಮ್ಯಾಂಡ್ ಕಡಿಮೆ ಆಗಲ್ಲ. ಹಳ್ಳಿಯಿಂದ ದಿಲ್ಲಿ ವರೆಗೂ ಉತ್ತಮ ವ್ಯಾಪಾರ. ಯಾವುದು ಗೊತ್ತೇ?
Comments are closed.