Neer Dose Karnataka
Take a fresh look at your lifestyle.

Haripriya: ಬಿಗ್ ನ್ಯೂಸ್: ಮದುವೆಯಾದ ಮೇಲೆ ತನ್ನ ಮೊದಲನೇ ಪ್ರೀತಿಯ ಬಗ್ಗೆ ಬಹಿರಂಗವಾಗಿ ಬಾಯ್ಬಿಟ್ಟ ಹರಿಪ್ರಿಯಾ. ಏನು ಗೊತ್ತೇ ಮ್ಯಾಟರ್??

Haripriya: ಚಂದನವನದ ಹುಡುಗಿ ಹರಿಪ್ರಿಯಾ (Haripriya) ಅವರು ಈ ವರ್ಷ ಜನವರಿ ತಿಂಗಳಿನಲ್ಲಿ ಖ್ಯಾತ ನಟ ವಸಿಷ್ಠ ಸಿಂಹ (Vasishta Simha) ಅವರೊಡನೆ ಮದುವೆಯಾದರು. ಇವರಿಬ್ಬರ ಮದುವೆ ಆಗಿದ್ದು ಎಲ್ಲರಿಗೂ ಒಂದು ರೀತಿ ಶಾಕ್ ಆಗಿತ್ತು. ಯಾಕಂದ್ರೆ ಈ ಜೋಡಿ ಪ್ರೀತಿಸುತ್ತಿರುವ ವಿಚಾರವನ್ನು ಎಲ್ಲಿಯು ಬಿಟ್ಟುಕೊಟ್ಟಿರಲಿಲ್ಲ. ಹಾಗಾಗಿ ಇದ್ದಕ್ಕಿದ್ದ ಹಾಗೆ ಎಂಗೇಜ್ಮೆಂಟ್ ಮಾಡಿಕೊಂಡು, ಈ ಜೋಡಿ ಮದುವೆಯಾದಾಗ ಎಲ್ಲರಿಗೂ ದೊಡ್ಡದಾಗಿಯೇ ಶಾಕ್ ಆಗಿತ್ತು. ಸಿಂಹಪ್ರಿಯ ಜೋಡಿಯದ್ದು ಲವ್ ಮ್ಯಾರೇಜ್ ಆಗಿದ್ದರು ಸಹ ಹರಿಪ್ರಿಯಾ ಅವರ ಫಸ್ಟ್ ಲವ್ ವಸಿಷ್ಠ ಅವರಲ್ಲ. ಹಾಗಿದ್ರೆ ಯಾರು ಗೊತ್ತಾ?

ಹರಿಪ್ರಿಯಾ ಅವರು ಬಹಳ ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಂದವರು. ಕನ್ನಡ ಮತ್ತು ತೆಲುಗು ಭಾಷೆಯ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಬಹುಬೇಡಿಕೆಯ ನಟಿಯರಲ್ಲಿ ಇವರು ಕೂಡ ಒಬ್ಬರು. ಕನ್ನಡದ ಬಹಳಷ್ಟು ಸ್ಟಾರ್ ಗಳ ಜೊತೆಗೆ ಹರಿಪ್ರಿಯಾ ಅವರು ನಟಿಸಿದ್ದು, ಈಗಷ್ಟೇ ಮದುವೆಯಾಗಿ ದಾಂಪತ್ಯ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಇದರ ನಡುವೆಯೇ ತಮ್ಮದೇ ಆದ ಹೊಸ ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದಾರೆ. ಇದನ್ನು ಓದಿ..Film News: 45 ವರ್ಷದಲ್ಲಿಯೂ ಕೂಡ ಮುಲಾಜಿಲ್ಲದೆ ಮದುವೆಯಾಗಲು ಮುಂದಾದ ಖ್ಯಾತ ನಟಿ; ಈ ಬಾರಿ ಎಷ್ಟನೇ ಮದುವೆ ಗೊತ್ತೇ?? ನಿಮಗೆ ಇವೆಲ್ಲ ಬೇಕಿತ್ತಾ ಎಂದ ಫ್ಯಾನ್ಸ್.

ಆ ಯೂಟ್ಯೂಬ್ ಚಾನೆಲ್ ನಲ್ಲಿ ಹರಿಪ್ರಿಯಾ ಅವರು ಆಗಾಗ ಹೊಸ ವಿಡಿಯೋಗಳನ್ನು ಶೇರ್ ಮಾಡುತ್ತಾ, ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಹರಿಪ್ರಿಯಾ ಅವರಿಗೆ ನಟನೆಗೆ ಬರಬೇಕು ಎಂದು ಆಸಕ್ತಿ ಇರಲಿಲ್ಲವಂತೆ, ಚೆನ್ನಾಗಿ ಓದುತ್ತಿದ್ದ ಹುಡುಗಿ ಬ್ಯುಸಿನೆಸ್ ಮಾಡಬೇಕು ಎಂದುಕೊಂಡಿದ್ದರಂತೆ ಹರಿಪ್ರಿಯಾ. ಆದರೆ ಬಹಳ ಚಿಕ್ಕವರಾಗಿದ್ದಾಗಲೇ, ತುಳು ಸಿನಿಮಾ ಒಂದರಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು, ನಟನೆ ಶುರು ಮಾಡಿದ ಮೇಲೆ ಹರಿಪ್ರಿಯಾ ಅವರಿಗೆ ಇಷ್ಟವಾಗಿದೆ..

ಹಾಗಾಗಿ ನಟನೆ ಶುರು ಮಾಡಿದ್ದಾರೆ. ಹಾಗೆಯೇ ಫಸ್ಟ್ ಲವ್ ಬಗ್ಗೆ ಮಾತನಾಡಿರುವ ಹರಿಪ್ರಿಯಾ ಅವರು, ಎಲ್ಲರಿಗೂ ಆಗುವ ಹಾಗೆ ಟೀನೇಜ್ ನಲ್ಲಿ ನನಗೂ ಲವ್ ಆಗಿತ್ತು ಎಂದಿದ್ದಾರೆ ಹರಿಪ್ರಿಯಾ. 17 ವರ್ಷದವರಿದ್ದಾಗ, ಹರಿಪ್ರಿಯಾ ಅವರಿಗೆ ಒಬ್ಬ ಹುಡುಗನ ಮೇಲೆ ಲವ್ ಆಗಿತ್ತಂತೆ. ಅದೇ ಅವರ ಫಸ್ಟ್ ಲವ್ ಎಂದು ಹೇಳಿಕೊಂಡಿದ್ದಾರೆ. ಹರಿಪ್ರಿಯಾ ಅವರ ಫಸ್ಟ್ ಲವ್ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ಓದಿ..Business Idea: ನೀವು ಕೂಡ ಅಮುಲ್ ಅಂಗಡಿ ತೆರೆದು, 5 ಲಕ್ಷ ಲಾಭ ಮಾಡಿಕೊಳ್ಳಬೇಕು ಎಂದು ಕೊಂಡರೆ, ಹೇಗೆ ಆರಂಭಿಸುವುದು ಗೊತ್ತೇ? ಕಡಿಮೆ ಬಂಡವಾಳ

Comments are closed.