Kannadati: ಭಾಗ್ಯಲಕ್ಷ್ಮಿ ಧಾರವಾಹಿ ನೋಡಿ, ಕನ್ನಡತಿ ಧಾರವಾಹಿ ಅಭಿಮಾನಿಗಳು ಏನು ಹೇಳಿದ್ದಾರೆ ಗೊತ್ತೇ?? ಕನ್ನಡತಿ ಧಾರವಾಹಿ ಫ್ಯಾನ್ಸ್ ಹೀಗ್ಯಾಕೆ ಹೇಳಿದ್ರು ಗೊತ್ತೇ?
Kannadati: ಕಲರ್ಸ್ ಕನ್ನಡ ವಾಹಿನಿಯಲ್ಲಿ ಕೆಲವು ದಿನಗಳ ಮೊದಲು 7:30ರ ಸ್ಲಾಟ್ ಗೆ ಪ್ರಸಾರವಾಗುತ್ತಿದ್ದ ಧಾರವಾಹಿ ಕನ್ನಡತಿ. ಈ ಧಾರವಾಹಿ ಎಷ್ಟರ ಮಟ್ಟಿಗೆ ಜನರಿಗೆ ಹತ್ತಿರವಾಗಿತ್ತು ಎಂದು ನಮಗೆಲ್ಲ ಗೊತ್ತೇ ಇದೆ. ಈಗ ಈ ಸಮಯಕ್ಕೆ ಲಕ್ಷ್ಮಿ ಬಾರಮ್ಮ ಧಾರವಾಹಿ ಪ್ರಸಾರವಾಗುತ್ತಿದೆ. ಮೊದಲಿಗೆ ಭಾಗ್ಯಲಕ್ಷ್ಮಿ ಧಾರವಾಹಿ ಸಂಜೆ 7ಗಂಟೆಗೆ ಅರ್ಧ ಗಂಟೆಗಳ ಕಾಲ ಪ್ರಸಾರವಾಗುತ್ತಿತ್ತು, ಆದರೆ ಈಗ ಅಕ್ಕ ತಂಗಿಯರ ಕಥೆ ಎರಡು ಧಾರವಾಹಿಗಳಾಗಿ ವೀಕ್ಷಕರ ಎದುರು ಬರುತ್ತಿದೆ.
ಕನ್ನಡತಿ (Kannadati) ಧಾರವಾಹಿಯ ವೀಕ್ಷಕರು ಸಹ ಈ ಧಾರವಾಹಿಯನ್ನು ಮೆಚ್ಚಿಕೊಂಡಿದ್ದಾರೆ, ಕನ್ನಡತಿ ಧಾರವಾಹಿಯನ್ನು ನಿರ್ದೇಶನ ಮಾಡುತ್ತಿದ್ದ ಯಶವಂತ್ ಪಾಂಡು ಅವರೇ ಲಕ್ಷ್ಮೀ ಬಾರಮ್ಮ ಧಾರವಾಹಿಯನ್ನು ಸಹ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡತಿ ಎಪಿಸೋಡ್ ಗಳನ್ನು ಹೇಗೆ ಹೆಚ್ಚಾಗಿ ಎಳೆಯುತ್ತಿರಲಿಲ್ಲವೋ, ಲಕ್ಷ್ಮಿ ಬಾರಮ್ಮ ಕೂಡ ಹಾಗೆ ಫಾಸ್ಟ್ ಆಗಿ ಸಾಗುತ್ತಿದೆ. ಹಾಗೆಯೇ ಕನ್ನಡತಿ (Kannadati) ಧಾರವಾಹಿಯಲ್ಲಿ ಜನರಿಗೆ ತುಂಬಾ ಇಷ್ಟವಾಗಿದ್ದು, ಧಾರವಾಹಿಯ ಅಪ್ಪಟ ಕನ್ನಡ ಸಂಭಾಷಣೆ, ಲಕ್ಷ್ಮಿ ಬಾರಮ್ಮ ಹಾಗೂ ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಸಹ ಪದ್ಮಿನಿ ಜೈನ್ ಅವರು ಅಚ್ಚುಕಟ್ಟಾಗಿ ಸಂಭಾಷಣೆ ಬರೆಯುತ್ತಿದ್ದಾರೆ.. ಕೆಂಡ ಸಂಪಿಗೆಯಲ್ಲಿ ಎಲ್ಲರ ಮನಗೆದ್ದಿರುವ ಸುಮನಾ ರವರ ಲೈಫ್ ಹೇಗಿದೆ ಗೊತ್ತೇ?? ಇವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ??
ಇನ್ನು ಧಾರವಾಹಿಯ ಕಥೆ ಎಲ್ಲಿಯು ಲ್ಯಾಗ್ ಎನ್ನಿಸದೆ, ಜನರ ಜೀವನದ ಜೊತೆಗೆ ಕನೆಕ್ಟ್ ಆಗುತ್ತಿರುವುದರಿಂದ, ಕನ್ನಡತಿ ವೀಕ್ಷಕರಿಗೂ ಸಹ ಬಹಳ ಸಂತೋಷವಾಗಿದೆ. ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಓದನ್ನು ಅರ್ಧಕ್ಕೆ ನಿಲ್ಲಿಸಿದ ಭಾಗ್ಯಳಿಗೆ ತಾಂಡವ್ ಜೊತೆಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ, ತಾಂಡವ್ ಗೆ ಹೆಂಡತಿಯನ್ನು ಕಂಡರೆ ಆಗುವುದಿಲ್ಲ, ಯಾವಾಗಲೂ ಹೆಂಡತಿಗೆ ಹೀಯಾಳಿಸುತ್ತಲೇ ಇರುತ್ತಾನೆ. ಅತ್ತೆ ಕುಸುಮ ಸ್ವಲ್ಪ ಸ್ಟ್ರಿಕ್ಟ್ ಆಗಿದ್ದರು, ಸೊಸೆಯ ಪರವಾಗಿ ಇದ್ದಾರೆ, ಈ ಪಾತ್ರ ಜನರಿಗೂ ತುಂಬಾ ಇಷ್ಟವಾಗಿದೆ..
ಭಾಗ್ಯ ಸಂಸಾರ ಒಂದು ರೀತಿಯಾದರೆ, ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ವೈಷ್ಣವ್ ಮತ್ತು ಲಕ್ಷ್ಮಿ ಇಬ್ಬರು ಸಹ ಮನಸ್ಸಿನಲ್ಲಿ ಭಾವನೆ ಇಲ್ಲದೆ ಹೋದರು, ಮನೆಯವರಿಗೋಸ್ಕರ ಮದುವೆಯಾಗಿ, ಹೊಂದಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇತ್ತ ಕೀರ್ತಿ ಮತ್ತೆ ವೈಷ್ಣವ್ ಜೀವನದಲ್ಲಿ ಬರುವ ಪ್ರಯತ್ನ ಮಾಡುತ್ತಿದ್ದಾಳೆ, ಕಾವೇರಿನೆ ಈ ಎಲ್ಲಾ ಪ್ಲಾನ್ ಮಾಡಿದ್ದು ಎನ್ನುವ ವಿಷಯ, ಇನ್ನು ದೊಡ್ಡ ಶಾಕ್ ಅನ್ನು ವೀಕ್ಷಕರಿಗೆ ನೀಡಿದ್ದು, ಮುಂದಿನ ಎಪಿಸೋಡ್ ಗಳಲ್ಲಿ ಏನಾಗುತ್ತದೆ ಎಂದು ವೀಕ್ಷಕರು ಕಾತುರರಾಗಿದ್ದಾರೆ. ವಿಚ್ಚೇದನ ಪಡೆದಿರುವ ಸ್ಟಾರ್ ನಟನ ಜೊತೆ ಬಹಿರಂಗವಾಗಿಯೇ ಯುವ ನಟಿ ಸುತ್ತಾಟ: ಒಂದೇ ಮನೆಯಲ್ಲಿ ಕೂಡ ವಾಸ. ತೆರೆ ಹಿಂದೆ ಏನಾಗುತ್ತಿದೆ ಗೊತ್ತೇ?
Comments are closed.