Siraj:ಪರ್ಪಲ್ ಕ್ಯಾಪ್ ವಿನ್ ಆದ ಸಿರಾಜ್: ಒಂದು ಕಡೆ ಚೆನ್ನೈ, ಮುಂಬೈ ಗೆ ಬೇಸರ ಆಗಿದ್ದರೆ, ಟ್ವಿಟ್ಟರ್ ನಲ್ಲಿ ಏನಾಗಿದೆ ಗೊತ್ತೇ??
Siraj: ಐಪಿಎಲ್ ನಲ್ಲಿ ನಮ್ಮ ಆರ್ಸಿಬಿ (RCB) ತಂಡ ಮೂರು ಪಂದ್ಯಗಳನ್ನು ಸೋತರು ಸಹ, ಮುಂದಿನ ಪಂದ್ಯದಲ್ಲಿ ಗೆದ್ದು ಎರಡು ಪಾಯಿಂಟ್ಸ್ ಗಳನ್ನು ಗಳಿಸಿ, ಪಾಯಿಂಟ್ಸ್ ಟೇಬಲ್ ನಲ್ಲಿ 5ನೇ ಸ್ಥಾನದಲ್ಲಿದೆ. ಆರ್ಸಿಬಿ ತಂಡದ ಬೌಲಿಂಗ್ ಪ್ರದರ್ಶನ ಚೆನ್ನಾಗಿಲ್ಲ ಎನ್ನುವುದು ಎಲ್ಲರ ಅಭಿಪ್ರಾಯ ಆಗಿತ್ತು, ಆದರೆ ಪಂಜಾಬ್ ವಿರುದ್ಧ ನಡೆದ ಕಳೆದ ಪಂದ್ಯದಲ್ಲಿ ಅದೆಲ್ಲವನ್ನು ಆರ್ಸಿಬಿ ತಂಡ ಸುಳ್ಳು ಮಾಡಿದೆ..
ಅದ್ಭುತವಾದ ಬೌಲಿಂಗ್ ಪ್ರದರ್ಶನ ನೀಡಿದೆ. ಅದರಲ್ಲೂ ಮೊಹಮ್ಮದ್ ಸಿರಾಜ್ (Mohammad Siraj) ಅವರ ಬೌಲಿಂಗ್ ಪ್ರದರ್ಶನಕ್ಕೆ ಎಲ್ಲರೂ ಫಿದಾ ಆಗಿದ್ದಾರೆ ಎಂದು ಹೇಳಬಹುದು. ಆರ್ಸಿಬಿ ತಂಡದ ಪ್ರಮುಖ ಬೌಲರ್ ಆಗಿರುವ ಇವರ ಬೌಲಿಂಗ್ ಪರ್ಫಾರ್ಮೆನ್ಸ್ ಅದ್ಭುತವಾಗಿದೆ, ಎಲ್ಲಾ ಸ್ಕಿಲ್ ಗಳ ಜೊತೆಗೆ, ಎದುರಾಳಿ ತಂಡಕ್ಕೆ ಭಯ ಬರುವಂತೆ ಮಾಡುವ ಹಾಗಿದೆ ಸಿರಾಜ್ ಅವರ ಪರ್ಫಾರ್ಮೆನ್ಸ್.
ಅಟ್ಯಾಕ್ ಮಾಡುವುದು, ಯಾರ್ಕರ್ ಹಾಕುವುದು, ಫಾಸ್ಟ್ ಬೌಲಿಂಗ್ ಎಲ್ಲವನ್ನು ಸಹ ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುತ್ತಿದ್ದಾರೆ. ಈಗ ಪರ್ಪಲ್ ಕ್ಯಾಪ್ ಗೆ ಲೀಡಿಂಗ್ ನಲ್ಲಿ ಇರುವುದು ಕೂಡ ಸಿರಾಜ್ ಅವರೇ ಆಗಿದ್ದಾರೆ. ಹೈದರಾಬಾದ್ ನವರಾದ ಸಿರಾಜ್ ಇಂದು, ಐಪಿಎಲ್ ನ ಅತ್ಯುತ್ತಮ ಪ್ರದರ್ಶನದಿಂದ, ಮುಂದೆ ಟೀಮ್ ಇಂಡಿಯಾಗೆ ಸಹ ಪ್ರಬಲವಾದ ಆಟಗಾರ ಆಗುತ್ತಾರೆ ಎನ್ನುವ ಭರವಸೆ ಮೂಡಿಸಿದ್ದಾರೆ. ಆರ್ಸಿಬಿ ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಸಿರಾಜ್ ಅವರನ್ನು ಚೆನ್ನೈ ಮತ್ತು ಮುಂಬೈ ತಂಡ ಬೇಸರವಾಗಿದ್ದರೆ, ಸಿರಾಜ್ ಅವರು ಹೇಳಿದ್ದೇನು ಗೊತ್ತಾ?
ಪರ್ಪಲ್ ಕ್ಯಾಪ್ ಬಗ್ಗೆ ಮಾತನಾಡಿರುವ ಸಿರಾಜ್ ಅವರು, 2016ರಲ್ಲಿ ಭುವನೇಶ್ವರ್ ಕುಮಾರ್ ಪರ್ಪಲ್ ಕ್ಯಾಪ್ ಗೆದ್ದಾಗ, ಅವರ ಪರವಾಗಿ ನಾನು ಅದನ್ನು ಸ್ವೀಕರಿಸಲು ಹೋಗಿದ್ದೆ, ಅದನ್ನು ಕೈಯಲ್ಲಿ ಹಿಡಿಯುವ ಅನುಭವ ತುಂಬಾ ಚೆನ್ನಾಗಿತ್ತು. ನನಗೂ ಆಗ ಪರ್ಪಲ್ ಕ್ಯಾಪ್ ಹೋಲ್ಡರ್ ಆಗಬೇಕು ಎಂದು ಆಸೆ ಇತ್ತು. ಈಗ ಕೊನೆಗೂ ಅದನ್ನು ಹಿಡಿಯಲು ಸಂತೋಷವಾಗಿದೆ..ಎಂದು ಸಿರಾಜ್ ಅವರು ಹೇಳಿದ್ದು, ಈ ಮಾತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಸಿರಾಜ್ ಅವರನ್ನು ಇನ್ನು ಹೆಚ್ಚು ಇಷ್ಟಪಡುತ್ತಿದ್ದೀವಿ..ಎನ್ನುತ್ತಿದ್ದಾರೆ.
Damn! I am beginning to like Siraj more and more. https://t.co/tWurCehGnI
— Ashwin Kumar (@ashwin_kumarV) April 21, 2023
Comments are closed.