CSK: ಚೆನ್ನೈ ತಂಡದ ಮೇಲೆ ಮತ್ತೊಮ್ಮೆ ಕಳ್ಳಾಟದ ಆರೋಪ: ಬ್ಯಾನ್ ಆಗಿದ್ದ ತಂಡಕ್ಕೆ ಅಂಪೈರ್ ಬೆಂಬಲವಾಗಿ ನಿಂತರೆ?? ಕೊನೆಗೂ ಬಯಲಾಯ್ತು ಸತ್ಯ.
CSK: ಐಪಿಎಲ್ (IPL) ಪಂದ್ಯಗಳು ಭರ್ಜರಿಯಾಗಿ ನಡೆಯುತ್ತಿದ್ದು, ಇತ್ತೀಚೆಗೆ ನಡೆದ 41ನೇ ಪಂದ್ಯ ಸಿ.ಎಸ್.ಕೆ ವರ್ಸಸ್ ಪಂಜಾಬ್ (CSK vs Punjab) ತಂಡದ ವಿರುದ್ಧ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದು ಸಿ.ಎಸ್.ಕೆ (CSK)ತಂಡ ಮೊದಲ ಇನ್ನಿಂಗ್ಸ್ ನಲ್ಲಿ 20 ಓವರ್ ಗಳಲ್ಲಿ ಸಿ.ಎಸ್.ಕೆ ತಂಡ 200 ರನ್ಸ್ ಗಳಿಸಿತು. ಎರಡನೇ ಇನ್ನಿಂಗ್ಸ್ ನಲ್ಲಿ ಪಂಜಾಬ್ ತಂಡ ಕೂಡ ಉತ್ತಮವಾಗಿ ಆಡುವ ಮೂಲಕ, ಗೆಲುವಿನ ಹಾದಿಯಲ್ಲಿತ್ತು..
ಕೊನೆಯ 2 ಓವರ್ ಗಳಲ್ಲಿ ಪಂಜಾಬ್ ತಂಡ ಗೆಲ್ಲಲು ಬೇಕಿದ್ದು 22 ರನ್ಸ್. ಆ ವೇಳೆ ಸಿ.ಎಸ್.ಕೆ ತಂಡದ ತುಷಾರ್ ದೇಶಪಾಂಡೆ (Tushar Deshapande) ಅವರು 19 ಓವರ್ ನ 3ನೇ ಎಸೆತ ಹಾಕಿದಾಗ, ಜಿತೇಶ್ ಶರ್ಮ (Jitesh Sharma) ಭರ್ಜರಿಯಾಗಿ ಭಾರಿಸಿದರು, ಗಾಳಿಯಲ್ಲಿ ಹಾರಿದ ಚೆಂಡು ಸಿಕ್ಸರ್ ಆಗುವ ಹಂತದಲ್ಲಿದ್ದು, ಆದರೆ ಬೌಂಡರಿ ಲೈನ್ ಹತ್ತಿರವಿದ್ದ ಫೀಲ್ಡರ್ ಶೇಕ್ ರಶೀದ್ (Sheik Rasheed) ಅವರು ಕ್ಯಾಚ್ ಹಿಡಿದರು, ಆದರೆ ಈ ಕ್ಯಾಚ್ ಈಗ ಭಾರಿ ಚರ್ಚೆಗೆ ಕಾರಣವಾಗಿದೆ..
ರಶೀದ್ ಅವರು ಬಾಲ್ ಹಿಡಿದಾಗ, ಅವರ ಕಾಲು ಬೌಂಡರಿ ಲೈನ್ ಗೆ ತಾಕಿದ ಹಾಗಿತ್ತು, ಅದನ್ನು ಔಟ್ ಕೊಡಬೇಕೋ ಅಥವಾ ಸಿಕ್ಸರ್ ಕೊಡಬೇಕೋ ಎಂದು ಗೊಂದದಲ್ಲಿದ್ದ ಅಂಪೈರ್, ಥರ್ಡ್ ಅಂಪೈರ್ ಮೊರೆ ಹೋದರು. ಅವರು ಎರಡು ಆಂಗಲ್ ಗಳನ್ನು ಪರಿಶೀಲಿಸಿ, ಕಾಲು ಬೌಂಡರಿ ಲೈನ್ ಗೆ ತಾಗಿದೆ, ಆದರೆ ಬೌಂಡರಿ ಲೈನ್ ನಲ್ಲಿ ಯಾವುದೇ ಅಲುಗಾಟ ಇಲ್ಲ ಎಂದು ಅಂಪೈರ್ ಔಟ್ ಕೊಟ್ಟಿದ್ದಾರೆ.. ಆದರೆ ಬೌಂಡರಿ ಲೈನ್ ಗೆ ಕಾಲು ತಾಗಿದರೆ ಸಿಕ್ಸರ್ ಕೊಡಬೇಕು ಎಂದು ಕ್ರಿಕೆಟ್ ಪ್ರಿಯರು ವಾದ ಮಾಡುತ್ತಿದ್ದಾರೆ..
ಕೆಲವರು ಈ ಕ್ಯಾಚ್ ಅದ್ಭುತವಾಗಿದೆ ಎನ್ನುತ್ತಿದ್ದು, ಇನ್ನು ಕೆಲವರು ಇದು ಮೋಸ, ಥರ್ಡ್ ಅಂಪೈರ್ ಎಲ್ಲಾ ಆಂಗಲ್ ಗಳಲ್ಲೂ ಪರಿಶೀಲಿಸಬೇಕು ಅದು ಬಿಟ್ಟು ಹೀಗೆ ಮಾಡಬಾರದು ಎನ್ನುತ್ತಿದ್ದಾರೆ. ಸಿ.ಎಸ್.ಕೆ ಮೇಲೆ ಮತ್ತೊಮ್ಮೆ ಕಳ್ಳಾಟದ ಆರೋಪ ಬರುತ್ತಿದ್ದು, ಅಂಪೈರ್ ಅವರ ಪರವಾಗಿಯೇ ತೀರ್ಪು ಕೊಟ್ಟಿದ್ದಾರಾ ಎನ್ನುವ ಮಾತು ಕೇಳಿಬರುತ್ತಿದೆ.. ಒಟ್ಟಿನಲ್ಲಿ ಕೊನೆಯ ಬಾಲ್ ನಲ್ಲಿ ಸಿಖಂದರ್ ರಾಝಾ ಅವರು 3 ರನ್ಸ್ ಗಳಿಸಿ ಪಂಜಾಬ್ ತಂಡ ಸಿ.ಎಸ್.ಕೆ ವಿರುದ್ಧ ಗೆದ್ದಿತು.
Comments are closed.