Janhvi Kapoor: ಹಿಂದಿ ಸಿನೆಮಾಗಳಲ್ಲಿ ಅವಕಾಶ ಸಿಗದೇ ಇದ್ದರೂ ಶ್ರೀದೇವಿ ಮಗಳು ಜಾಹ್ನವಿ ಗೆ ಕುಲಾಯಿಸಿದ ಅದೃಷ್ಟ. ಇನ್ನು ಲೈಫ್ ಸೆಟ್ಲ್ ಎಂದ ನೆಟ್ಟಿಗರು. ಏನಾಗಿದೆ ಗೊತ್ತೇ?
Janhvi Kapoor: ಬಾಲಿವುಡ್ (Bollywood) ಬೆಡಗಿ ಖ್ಯಾತ ನಟಿ ಶ್ರೀದೇವಿ (Sridevi) ಅವರ ಮಗಳು ಜಾನ್ವಿ ಕಪೂರ್ ಅವರು ಬಾಲಿವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕಮರ್ಷಿಯಲ್ ಬೋಲ್ಡ್ ಪಾತ್ರಗಳು ಹಾಗೆಯೇ ಪರ್ಫಾರ್ಮೆನ್ಸ್ ಇರುವ ಪಾತ್ರಗಳು ಎರಡು ರೀತಿಯ ಪಾತ್ರಗಳಲ್ಲಿ ನಟಿಸಿ ಆಲ್ ರೌಂಡರ್ ಎನ್ನಿಸಿಕೊಂಡಿರುವ ಜಾನ್ವಿ ಕಪೂರ್ ಇದೀಗ ಸೌತ್ ಇಂಡಿಯನ್ ಸಿನಿಮಾಗೆ ಎಂಟ್ರಿ ಕೊಡುತ್ತಿದ್ದಾರೆ. ಜ್ಯೂನಿಯರ್ ಎನ್ಟಿಆರ್ (Jr NTR) ಅವರ 30ನೇ ಸಿನಿಮಾಗೆ ಜಾನ್ವಿ ಕಪೂರ್ ನಾಯಕಿಯಾಗಿದ್ದು, ಅವರ ಹುಟ್ಟುಹಬ್ಬದ ದಿನ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿತ್ತು.
ಈ ಸಿನಿಮಾವನ್ನು ಕೊರಟಾಲ ಶಿವ (Koratala Shiva) ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಘೋಷಣೆಯಾದ ಬೆನ್ನಲ್ಲೇ ಜಾನ್ವಿ ಅವರು ಮತ್ತೊಂದು ತೆಲುಗು ಸಿನಿಮಾ ಒಪ್ಪಿಕೊಂಡಿದ್ದಾರೆ ಎಂದು ಸುದ್ದಿಯಾಗಿದೆ. ಮೊದಲೆಲ್ಲಾ ಬಾಲಿವುಡ್ ನಟಿಯರು ಸೌತ್ ಕಡೆಗೆ ಹೆಚ್ಚಾಗಿ ಬರುತ್ತಿರಲಿಲ್ಲ, ಇಲ್ಲಿನ ಸಿನಿಮಾಗಳನ್ನು ಕಡೆಗಣಿಸುತ್ತಿದ್ದರು. ದೊಡ್ಡ ಸಂಭಾವನೆ ಕೊಟ್ಟರೆ ಮಾತ್ರ ಬರುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ, ಹಿಂದಿಗಿಂತ ಸೌತ್ ಸಿನಿಮಾಗಳೇ ಹೆಚ್ಚು ಸದ್ದು ಮಾಡುತ್ತಿದೆ.
ಈಗ ಬಾಲಿವುಡ್ ತಾರೆಯರು ಇಲ್ಲಿನ ಸಿನಿಮಾಗಳಲ್ಲಿ ನಟಿಸಬೇಕು ಎಂದು ಆಸೆ ಪಡುತ್ತಿದ್ದಾರೆ. ಅದೇ ರೀತಿ ಜಾನ್ವಿ ಕಪೂರ್ ಅವರು ಸಹ ಬಾಲಿವುಡ್ ಇಂದ ಈಗ ಸೌತ್ ಗೆ ಬಂದಿದ್ದಾರೆ. ಜಾನ್ವಿ ಕಪೂರ್ ಅವರು ಇದೀಗ ಎರಡನೇ ಸಿನಿಮಾ ಕೂಡ ಒಪ್ಪಿಕೊಂಡಿದ್ದು, ಅದು ಅಕ್ಕಿನೇನಿ ಕುಟುಂಬದ ಯಂಗ್ ಹೀರೋ, ನಾಗಾರ್ಜುನ (Nagarjuna) ಹಾಗು ಅಮಲಾ (Amala) ಅವರ ಮಗ ಅಖಿಲ್ ಅಕ್ಕಿನೇನಿ (Akhil Akkineni) ಅವರ ಮುಂದಿನ ಸಿನಿಮಾಗೆ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರಂತೆ. ಈ ಸಿನಿಮಾವನ್ನು ಯುವ ಪ್ರತಿಭೆ ಅನಿಲ್ ಕುಮಾರ್ ನಿರ್ದೇಶನ ಮಾಡಲಿದ್ದಾರಂತೆ.
ಸಾಹೋ (Saaho) ಸಿನಿಮಾಗೆ ಅಸಿಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ ಅನಿಲ್ ಕುಮಾರ್ (Anil Kumar) ಅವರು ಈಗ ಡೈರೆಕ್ಟರ್ ಆಗಿ ಮೊದಲ ಸಿನಿಮಾ ಮಾಡುತ್ತಿದ್ದು, ಜಾನ್ವಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ. ಎನ್ಟಿಆರ್ 30 ಸಿನಿಮಾಗೆ ಜಾನ್ವಿ ಅವರು 4 ಕೋಟಿ ದುಬಾರಿ ಸಂಭಾವನೆ ಪಡೆದಿದ್ದಾರೆ ಎಂದು ಸುದ್ದಿಯಾಗಿದೆ. ಇನ್ನು ಈ ಸಿನಿಮಾಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವ ಕುತೂಹಲ ಸಹ ಜನರಲ್ಲಿದೆ. ತಾಯಿಯ ಹಾಗೆ ಜಾನ್ವಿ ಅವರು ಕೂಡ ಸೌತ್ ನಾರ್ತ್ ಎರಡು ಕಡೆ ಮಿಂಚಲು ಸಿದ್ಧವಾಗಿದ್ದಾರೆ.
Comments are closed.