Kannada News: 2 ಲಕ್ಷ ಸಾಲ ಕೊಟ್ಟ: ಮಹಿಳೆ ತೀರಿಸಲು ಕಷ್ಟ ಪಡುತ್ತಿದ್ದಾಗ, ಆಕೆಗೆ 11 ವರ್ಷದ ಮಗಳು ಇದ್ದಾಳೆ ಎಂದ ತಕ್ಷಣ 40 ವರ್ಷದವನು ಏನು ಮಾಡಿದ್ದಾನೆ ಗೊತ್ತೇ? ಇಂತವರು ಇರ್ತಾರ?
Kannada News: ಪ್ರಪಂಚದಲ್ಲಿ ಕೆಲವೊಮ್ಮೆ ನಮಗೆ ನಂಬಲು ಅಸಾಧ್ಯ ಎನ್ನಿಸುವಂಥ ಘಟನೆ ನಡೆದು ಹೋಗುತ್ತವೆ. ಅವುಗಳನ್ನು ನೋಡಿದರೆ ನಮಗೆ ಶಾಕ್ ಆಗುವುದು ಖಂಡಿತ. ಇಂಥದ್ದೊಂದು ಘಟನೆ ಇತ್ತೀಚೆಗೆ ಬಿಹಾರದಲ್ಲಿ ನಡೆದಿದೆ. ಮಹೇಂದ್ರ ಪಾಂಡೆ ಎನ್ನುವ 40 ವರ್ಷದ ವ್ಯಕ್ತಿಯೊಬ್ಬ, ಒಬ್ಬ ಮಹಿಳೆಗೆ 2 ಲಕ್ಷ ಸಾಲ ಕೊಟ್ಟಿದ್ದು, ಆಕೆ ಅದನ್ನು ಮರುಪಾವತಿ ಮಾಡಲು ಸಾಧ್ಯವಾಗದೆ ಇದ್ದಾಗ, ಆಕೆಯ 11 ವರ್ಷದ ಮಗಳನ್ನು ಏನು ಮಾಡಿದ್ದಾನೆ ಗೊತ್ತಾ? ಈ ಘಟನೆ ಈಗ ಎಲ್ಲೆಡೆ ವೈರಲ್ ಆಗಿದೆ..
ಮಹೇಂದ್ರ ಪಾಂಡೆ ಎನ್ನುವ ಈ ವ್ಯಕ್ತಿ 2 ಲಕ್ಷ ಸಾಲವನ್ನು ಮಹಿಳೆಗೆ ಕೊಟ್ಟಿದ್ದ, ಆಕೆಗೆ ಕಷ್ಟವಿದ್ದ ಕಾರಣ ಹಣವನ್ನು ವಾಪಸ್ ನೀಡಲು ಸಾಧ್ಯವಾಗದೆ ಇರುವುದಕ್ಕೆ, ಆಕೆಯ 11 ವರ್ಷದ ಮಗಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆ. 11 ವರ್ಷದ ಅಪ್ರಾಪ್ತ ಬಾಲಕಿಯನ್ನು ತನ್ನ ಮನೆಯಲ್ಲೇ ಇಟ್ಟುಕೊಂಡಿದ್ದಾನೆ. ಈ ಬಗ್ಗೆ ಬಾಲಕಿಯ ತಾಯಿ ಮಾತನಾಡಿ ಕಣ್ಣೀರು ಹಾಕಿದ್ದಾರೆ. 2 ಲಕ್ಷ ಸಾಲದ ಹಣ ಕೊಡದೆ ಇರುವುದಕ್ಕೆ, ತನ್ನ ಮಗಳನ್ನು ಮನೆಗೆ ಕರೆದುಕೊಂಡು ಹೋಗಿ ಇಟ್ಟುಕೊಂಡಿದ್ದಾರೆ ನನ್ನ ಮಗಳನ್ನು ನನಗೆ ವಾಪಸ್ ಕೊಡಿಸಿ ಎಂದು ಆಕೆ ಕಣ್ಣೀರು ಹಾಕಿದ್ದಾರೆ.
ಮಗಳನ್ನು ಮುಂದಕ್ಕೆ ಓದಿಸುತ್ತೇನೆ ಎಂದು ಕರೆದುಕೊಂಡು ಹೋಗಿ ಮದುವೆ ಆಗಿರುವುದಾಗಿ ಬಾಲಿಕಿಯ ತಾಯಿ ಹೇಳಿದ್ದಾರೆ. ಆದರೆ ಮಹೇಂದ್ರ ಪಾಂಡೆ ಬೇರೆಯ ಮಾತನ್ನೇ ಹೇಳುತ್ತಿದ್ದಾನೆ. ತಾನು ಕೆಲವು ತಪ್ಪು ಮಾಡಿರುವುದಾಗಿಯೂ, ಆಕೆಯನ್ನು ತನ್ನ ಮಗಳ ಹಾಗೆ ನೋಡಿಕೊಳ್ಳುತ್ತಿರುವುದಾಗಿ ಹೇಳಿದ್ದಾನೆ. ಈ ವ್ಯಕ್ತಿಗೆ ಅದಾಗಲೇ ಮದುವೆಯಾಗಿ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆತನ ಮನೆಯಲ್ಲಿರುವ ಅಪ್ರಾಪ್ತ ಬಾಲಕಿ ಕೂಡ ಕಣ್ಣೀರು ಹಾಕಿ ಈ ವಿಷವ ಹೇಳಿದ್ದಾಳೆ.
ನನ್ನ ತಾಯಿ ಇವರ ಹತ್ತಿರ ಎಷ್ಟು ಸಾಲ ಮಾಡಿದ್ದಾರೆ ಅಂತ ನನಗೆ ಗೊತ್ತಿಲ್ಲ. ನನ್ನ ತಾಯಿ ನನ್ನನ್ನು ಇಲ್ಲಿ ಬಿಟ್ಟು ಹೋದರು ಎಂದು ಬಾಲಕಿ ಕಣ್ಣೀರು ಹಾಕಿದ್ದಾಳೆ. ಇನ್ನು ಆಕೆಯ ತಾಯಿಗೆ ಕರೆ ಮಾಡಿರುವ ಮಹೇಂದ್ರ ಪಾಂಡ್ಯ ಈ ವಿಷಯವನ್ನು ಹಬ್ಬಿಸಿದರೆ ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿದ್ದಾನೆ. ಒಟ್ಟಿನಲ್ಲಿ ಈ ತಾಯಿ ಮಗಳು ಈಗ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು, ಇವರಿಗೆ ಪೊಲೀಸರು ಅಥವಾ ಯಾರು ಸಹಾಯ ಮಾಡುತ್ತಾರೆ ಎಂದು ನೋಡಬೇಕಿದೆ.
Comments are closed.