Health Tips: ನಿಮ್ಮ ಸುತ್ತ ಮುತ್ತ ಯಾರಿಗಾದರೂ ಹೃದಯಾಗಾತವಾದರೆ ಈ ರೀತಿ ಮಾಡಿ ಅವರ ಪ್ರಾಣ ಉಳಿಸಿ. ಏನು ಮಾಡಬೇಕು ಗೊತ್ತೇ??
Health Tips: ಪ್ರಪಂಚದಲ್ಲಿ ಈಗ ಹೃದಯ ಸಂಬಂಧಿ ಸಮಸ್ಯೆಗಳು ಎಲ್ಲಾ ವಯಸ್ಸಿನವರಲ್ಲಿ ಕಂಡು ಬರುತ್ತಿದೆ. ಯುವಕ ಯುವತಿಯರಲ್ಲಿ ಸಹ ಹೃದಯಾಘಾತವಾಗಿ ವಿಧಿವಶರಾಗುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಲೇ ಇದೆ. ಒಂದು ವೇಳೆ ನಿಮ್ಮ ಎದುರು ಯಾರಿಗಾದರೂ ಒಬ್ಬ ವ್ಯಕ್ತಿಗೆ ಹೃದಯಾಘಾತಕ್ಕೆ ಒಳಗಾದರೆ ತಕ್ಷಣ ಏನು ಮಾಡಿದರೆ ಒಳ್ಳೆಯದು ಎಂದು ತಿಳಿಸುತ್ತೇವೆ ನೋಡಿ.. ಒಬ್ಬ ವ್ಯಕ್ತಿಗೆ ಹೃದಯಾಘಾತ ಉಂಟಾದರೆ, ತಕ್ಷಣವೇ ಆ ರೋಗಿಗೆ ಸಿಪಿಆರ್ ಕೊಡಬೇಕು, ಇದರಿಂದ ಅವರ ಪ್ರಾಣ ಉಳಿಸಬಹುದು. ಇತ್ತೀಚೆಗೆ ಚಂಡೀಘಡದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಚೇರ್ ಮೇಲೆ ಕುಳಿತಿದ್ದ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿದೆ.
ಆಗ ಚಂಡೀಘಡದ ಆರೋಗ್ಯ ಕಾರ್ಯದರ್ಶಿ ಯಶಪಾಲ್ ಗಾರ್ಗ್ ಅವರು ಅಲ್ಲೇ ಇದ್ದರು, ತಕ್ಷಣವೇ ಅವರು ಹೃದಯಾಘಾತವಾದ ವ್ಯಕ್ತಿಗೆ ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (ಸಿಪಿಆರ್) ಕೊಟ್ಟರು.. ಅದರಿಂದ ಆ ವ್ಯಕ್ತಿಯ ಜೀಗ ಉಳಿದಿದೆ. ಹಾಗೆಯೇ ಯಶಪಾಲ್ ಅವರು ಮಾಡಿದ ಈ ಕೆಲಸಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ವಿಡಿಯೋ ಅನ್ನು ದೆಹಲಿ ಮಹಿಳಾ ಆರೋಗ್ಯದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಟ್ವೀಟ್ ಮಾಡಿದ್ದಾರೆ. ಒಬ್ಬ ವ್ಯಕ್ತಿಗೆ ಹೃದಯಾಘಾತವಾದಾಗ, ಚಂಡೀಗಢದ ಆರೋಗ್ಯ ಕಾರ್ಯದರ್ಶಿ ಯಶಪಾಲ್ ದರ್ದ್ ಅವರು ತಕ್ಷಣವೇ ಸಿಪಿಆರ್ ನೀಡುವ ಮೂಲಕ ಅವರ ಜೀವವನ್ನು ಉಳಿಸಿದರು ಎಂದು ಕ್ಯಾಪ್ಶನ್ ಬರೆದು ವಿಡಿಯೋ ಶೇರ್ ಮಾಡಿದ್ದಾರೆ.
ಇದೀಗ ಇವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಅದೇ ರೀತಿ ಈಗ ಎಲ್ಲರೂ ಸಿಪಿಆರ್ ಕಳಿತುಕೊಳ್ಳುವುದು ಒಳ್ಳೆಯದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. CPR ಎಂದರೆ ಅದೊಂದು ತುರ್ತು ವೈದ್ಯಕೀಯ ತಂತ್ರ ಆಗಿದೆ. ಒಬ್ಬ ವ್ಯಕ್ತಿಯ ಉಸಿರಾಟ ಅಥವಾ ಹಾರ್ಟ್ ಬೀಟ್ ನಿಂತಾದ ಇದನ್ನು ನೀಡಲಾಗುತ್ತದೆ. ಹೃದಯದ ಬಡಿತ ಇದ್ದಕ್ಕಿದ್ದ ಹಾಗೆ ನಿಂತು ಹೋದಾಗ, ಮೆದುಳು ಶ್ವಾಸಕೋಶ ಇದೆಲ್ಲವೂ ಸೇರಿದ ಹಾಗೆ, ದೇಹದ ಬೇರೆ ಬೇರೆ ಭಾಗಗಳಿಗೆ ರಕ್ತ ಪೂರೈಕೆ ನಿಂತುಹೋಗುತ್ತದೆ.
ಆಗ ವ್ಯಕ್ತಿಗೆ ಸಮಯಕ್ಕೆ ಸರಿಯಾದ ಚಿಕಿತ್ಸೆ ಕೊಡದೆ ಹೋದರೆ, ಆ ವ್ಯಕ್ತಿ ಸಾಯಬಹುದು. ಪರಿಸ್ಥಿತಿ ಹಾಗಿದ್ದಾಗ, ರೋಗಿಗೆ ಸಿಪಿಆರ್ ನೀಡಬೇಕು. CPR ಇಂದ ರೋಗಿಯ ಎದೆಯ ಮೇಲೆ ಪ್ರೆಶರ್ ಹಾಕಲಾಗುತ್ತದೆ, ಇದರಿಂದ ಅವರ ಬ್ಲಡ್ ಸರ್ಕ್ಯುಲೇಶನ್ ಸುಧಾರಿಸಲು ಸಹಾಯ ಮಾಡುತ್ತದೆ. ಒಬ್ಬ ವ್ಯಕ್ತಿಗೆ ಇದ್ದಕ್ಕಿದ್ದ ಹಾಗೆ ಹೃದಯಾಘಾತ ಆದರೆ, ಪ್ರಜ್ಞೆ ಕಳೆದುಕೊಂಡರೆ, ತಕ್ಷಣ ಅವರಿಗೆ ಸಿಪಿಆರ್ ಕೊಡಬೇಕು. ಹೀಗಾದಾಗ ರೋಗಿಯ ಎದೆಯ ಮಧ್ಯ ಭಾಗದಲ್ಲಿ ಎರಡು ಕೈಗಳನ್ನು ಇಟ್ಟು, ಒಂದು ನಿಮಿಷಕ್ಕೆ 100 ರಿಂದ 120 ಸಾರಿ ತಳ್ಳಬೇಕು. ಇದು ಸಿಪಿಆರ್ ಆಗಿದೆ.
Comments are closed.