Neer Dose Karnataka
Take a fresh look at your lifestyle.

Cricket: ರೋಹಿತ್ ಶರ್ಮ ರವರ ಸ್ಥಾನವನ್ನು ತುಂಬಬಲ್ಲ ಆಟಗಾರ ಸಿಕ್ಕೇ ಬಿಟ್ಟ- ಯಾರು ಗೊತ್ತೇ ಆ ಕಿಲಾಡಿ ಟಾಪ್ ಬ್ಯಾಟ್ಸ್ ಮ್ಯಾನ್.

5,339

Cricket News: ಪ್ರಸ್ತುತ ಟೀಮ್ ಇಂಡಿಯಾ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿ ಕಾರ್ಯ ನಿರ್ವಹಿಸುತ್ತಿರುವವರು ರೋಹಿತ್ ಶರ್ಮ. ಇವರ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ರೋಹಿತ್ ಶರ್ಮಾ (Rohit Sharma) ಅವರ ಕ್ಯಾಪ್ಟನ್ಸಿಯಲ್ಲಿ ಭಾರತ ತಂಡ ಹಲವು ಟ್ರೋಫಿಗಳನ್ನು ಗೆದ್ದಿದೆ, ಆದರೆ ಇತ್ತೀಚೆಗೆ ರೋಹಿತ್ ಅವರು ಆಟಗಾರನಾಗಿ ಮತ್ತು ಕ್ಯಾಪ್ಟನ್ ಆಗಿ ಒಳ್ಳೆಯ ಫಾರ್ಮ್ ನಲ್ಲಿಲ್ಲ. ಹೀಗಿರುವಾಗ ರೋಹಿತ್ ಶರ್ಮಾ ಅವರ ತಮ್ಮ ಕ್ಯಾಪ್ಟನ್ಸಿ ಪ್ರೂವ್ ಮಾಡಿಕೊಳ್ಳಲು ಹೆಚ್ಚಿನ ಸಮಯ ಇಲ್ಲ.

ಏಕೆಂದರೆ ರೋಹಿತ್ ಶರ್ಮಾ ಅವರಿಗೆ ಈಗ 36 ವರ್ಷ ವಯಸ್ಸಾಗಿದೆ. ಈ ವರ್ಷ ಭಾರತದಲ್ಲಿ ಓಡಿಐ ವಿಶ್ವಕಪ್ (ODI Worldcup) ನಡೆದ ನಂತರ ರೋಹಿತ್ ಅವರು ಕ್ಯಾಪ್ಟನ್ಸಿ ಮುಂದುವರಿಸುವುದು ಕಷ್ಟಕರವಾಗುತ್ತದೆ. ಹಾಗಿದ್ದಾಗ ರೋಹಿತ್ ಶರ್ಮ ಅವರ ನಂತರ ಭಾರತ ತಂಡದ ಟೆಸ್ಟ್ ಮತ್ತು ಟಿ20 ತಂಡದ ಕ್ಯಾಪ್ಟನ್ ಆಗಿ ಹೊಸ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿ ಬಿಸಿಸಿಐ (BCCI) ಮೇಲಿದೆ. ಈ ವೇಳೆ, ಆ ಒಬ್ಬ ಆಟಗಾರನ ಹೆಸರು ಕ್ಯಾಪ್ಟನ್ ಸ್ಥಾನಕ್ಕೆ ಕೇಳಿಬರುತ್ತಿದೆ. ಇದನ್ನು ಓದಿ..Business Idea: ಅಲ್ಲಲ್ಲಿ ಇರುವ ಖಾಲಿ ಜಾಗದಲ್ಲಿ ಈ ಚಿಕ್ಕ ಕೆಲಸ ಮಾಡಿ, ತಿಂಗಳಿಗೆ 1 ಲಕ್ಷಕ್ಕೂ ಹೆಚ್ಚು ಆದಾಯ. ಹೇಗೆ ಗೊತ್ತೇ??

ಟೀಮ್ ಇಂಡಿಯಾ ಮುಂದಿನ ಕ್ಯಾಪ್ಟನ್ ಆಗಿ ಯಶಸ್ವಿಯಾಗಬಲ್ಲ ಆಟಗಾರ ರಿಷಬ್ ಪಂತ್ (Rishab Pant). ಇವರು ಮೂರು ಸ್ವರೂಪದ ಕ್ರಿಕೆಟ್ ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ಯಾಪ್ಟನ್ ಆಗಿ ಉತ್ತಮವಾಗಿ ತಂಡವನ್ನು ಮುನ್ನಡೆಸಿದ್ದಾರೆ. ಹಾಗೆಯೇ, ವಿಕೆಟ್ ಕೀಪಿಂಗ್ ಅನ್ನು ಕೂಡ ಬಹಳ ಚೆನ್ನಾಗಿ ಮಾಡುತ್ತಾರೆ. ಸ್ಫೋಟಕವಾಗಿ ಬ್ಯಾಟ್ ಬೀಸಿ, ಮ್ಯಾಚ್ ವಿನ್ನರ್ ಆಗುವ ಸಾಮರ್ಥ್ಯ ಹೊಂದಿದ್ದಾರೆ..

ಪ್ರಸ್ತುತ ಇವರಿಗೆ ಆಕ್ಸಿಡೆಂಟ್ ಆಗಿರುವುದರಿಂದ ತಂಡದಿಂದ ಹೊರಗಿದ್ದು, ಚಿಕಿತ್ಸೆ ಮತ್ತು ವಿಶ್ರಾಂತಿಯಲ್ಲಿ ಸಮಯ ಕಳೆಯುತ್ತಿದ್ದಾರೆ. ಶೀಘ್ರದಲ್ಲೇ ರಿಷಬ್ ಅವರು ತಂಡಕ್ಕೆ ಕಂಬ್ಯಾಕ್ ಮಾಡುವ ಸಾಧ್ಯತೆ ಇದೆ. ಈ ಹಿಂದೆ ವಿರಾಟ್ ಅವರು 27ನೇ ವಯಸ್ಸಿಗೆ ಟೆಸ್ಟ್ ತಂಡದ ಕ್ಯಾಪ್ಟನ್ ಅದರು, 29ನೇ ವಯಸ್ಸಿನಲ್ಲಿ ಓಡಿಐ ಮತ್ತು ಟಿ20 ತಂಡದ ಕ್ಯಾಪ್ಟನ್ ಆದರು. ಈಗ ಹೆಚ್ಚು ವಯಸ್ಸಾಗಿರುವ ಕ್ಯಾಪ್ಟನ್ ಅನ್ನು ತಂಡಕ್ಕೆ ಆಯ್ಕೆ ಮಾಡುವ ಯೋಜನೆ ಬಿಸಿಸಿಐ ಗೆ ಇಲ್ಲ, ಹಾಗಾಗಿ ರಿಷಬ್ ಪಂತ್ ಅವರನ್ನು ಆಯ್ಕೆ ಮಾಡಬಹುದು ಎನ್ನಲಾಗುತ್ತಿದೆ. ಇದನ್ನು ಓದಿ..Nita Ambani: ನೀತಾ ಅಂಬಾನಿ ಬಳಸುವ ಈ ಫೋನ್ ಗಳ ಬೆಲೆ ಕೇಳಿದರೆ, ನಿಜಕ್ಕೂ ಜೀವನ ಬೇಕಾ ಎನಿಸುತ್ತದೆ. ಯಪ್ಪಾ ಏನು ಫೋನ್ ಬೆಲೆ ಇಷ್ಟೊಂದಾ??

Leave A Reply

Your email address will not be published.