Neer Dose Karnataka
Take a fresh look at your lifestyle.

Chiranjeevi: ಮೊದಲ ಬಾರಿಗೆ ಮದುವೆ ಮದುವೆ ಮೇಲೆ ಆಗುತ್ತಿರುವ ಮಗಳ ಜೀವನ ಕುರಿತು ಮಾತನಾಡಿದ ಚಿರಂಜೀವಿ- ಹೇಳಿದ್ದೇನು ಗೊತ್ತೇ??

Chiranjeevi: ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಅವರು ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಚಿತ್ರರಂಗಕ್ಕೆ ಬಂದು, ಬಹಳ ಕಷ್ಟಪಟ್ಟು ಸ್ಟಾರ್ ಹೀರೋ ಆಗಿ ಬೆಳೆದು ಮೆಗಾಸ್ಟಾರ್ ಎಂದು ಅನ್ನಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಒಂದೊಂದೇ ಸಾಧನೆಯ ಮೆಟ್ಟಿಲುಗಳನ್ನು ಹತ್ತುತ್ತಾ, ತೆಲುಗಿನ ಶ್ರೇಷ್ಠ ನಟರಲ್ಲಿ ಒಬ್ಬರಾಗಿ ಬೆಳೆದು ನಿಂತರು. ಈಗ 60ರ ಹರೆಯದಲ್ಲಿ ಕೂಡ ಚಿರಂಜೀವಿ ಅವರು ಬಹಳ ಆಕ್ಟಿವ್ ಆಗಿದ್ದಾರೆ.

ಚಿರಂಜೀವಿ ಅವರ ಮಗ ರಾಮ್ ಚರಣ್ ಅವರು RRR ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದು, ಗ್ಲೋಬಲ್ ಹೀರೋ ಅನ್ನಿಸಿಕೊಂಡಿದ್ದಾರೆ. ಇನ್ನು ಚಿರಂಜೀವಿ ಅವರ ಹಿರಿಯ ಮಗಳು ಸುಶ್ಮಿತಾ ಕೊನಿಡೇಲಾ ಅವರು ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ, ಹಾಗೆಯೇ ನಿರ್ಮಾಪಕಿ ಕೂಡ ಆಗಿದ್ದಾರೆ. ಇವರಿಬ್ಬರ ವಿಚಾರದಲ್ಲಿ ಚಿರಂಜೀವಿ ಅವರು ಯಾವುದೇ ಸಮಸ್ಯೆ ಎದುರಿಸಿಲ್ಲ. ಆದರೆ ಕೊನೆಯ ಮಗಳು ಶ್ರೀಜಾ, ಮೊದಲು ಮನೆಯವರನ್ನೆಲ್ಲಾ ಎದುರು ಹಾಕಿಕೊಂಡು ಬ್ರಾಹ್ಮಣ ವ್ಯಕ್ತಿಯೊಬ್ಬರನ್ನು ಮದುವೆಯಾಗಿದ್ದಾರೆ. ಆದರೆ ಒಂದು ಮಗು ಜನಿಸಿದ ನಂತರ ಆಕೆ ಗಂಡನನ್ನು ಬಿಟ್ಟು ತಂದೆ ಮನೆಗೆ ಬಂದರು. ಇದನ್ನು ಓದಿ..Ram Charan: ರಾಮ್ ಚರಣ್ ರವರ ಪತ್ನಿ ಉಪಾಸನಾ ರವರ ಶ್ರೀಮಂತ ಕ್ಯಾನ್ಸಲ್ ಆಗಲು ಕಾರಣವೇನು ಗೊತ್ತೇ?? ಕೊನೆ ಕ್ಷಣದಲಿ ಪಾಪ ಏನಾಗಿದೆ ಗೊತ್ತೇ??

ಬಳಿಕ ಕಲ್ಯಾಣ್ ದೇವ್ ಅವರ ಜೊತೆಗೆ ಮದುವೆಯಾದರು. ಆದರೆ ಈ ಮದುವೆ ಕೂಡ ಮುರಿದು ಬಿದ್ದ ಹಾಗೆ ತೋರುತ್ತಿದೆ. ಕಲ್ಯಾಣ್ ದೇವ್ ಅವರೊಡನೆ ಮಗುವಿಗೆ ಜನ್ಮ ನೀಡಿದರು ಶ್ರೀಜಾ, ಆದರೆ ಹೆಚ್ಚು ದಿನ ಈ ಸಂಬಂಧ ಮುಂದುವರೆಯಲು ಆಗುತ್ತಿಲ್ಲ. ಈಗ ಇವರಿಬ್ಬರು ದೂರವಾಗಿ ಶ್ರೀಜಾ ಮತ್ತೆ ಮದುವೆ ಆಗುತ್ತಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಮನೆಯವರು ಯಾರು ಕೂಡ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ಕೊಟ್ಟಿಲ್ಲ. ಆದರೆ ಮೊನ್ನೆ ಇದ್ದ ತಾಯಂದಿರ ದಿನದಂದು ಚಿರಂಜೀವಿ ಅವರು ಮೊದಲ ಸಾರಿ ಚಿಕ್ಕ ಮಗಳ ವಿಷಯ ಮಾತನಾಡಿದ್ದಾರೆ.

“ಇತ್ತೀಚೆಗೆ ಶ್ರೀಜಾ ನನ್ನ ಜೊತೆಗೆ ಒಂದು ವಿಷಯ ಶೇರ್ ಮಾಡಿಕೊಂಡಳು.. ಒಂದು ದಿನ ಅವಳಿ ತನ್ನ ಅಜ್ಜಿ ಹತ್ತಿರ ಹೋಗಿ ಮನಸ್ಸಿಗೆ ನೋವಾಗಿದೆ ಎಂದು ಹೇಳಿದ್ದಾಳೆ..ಆಗ ಅಮ್ಮ, ಒಬ್ಬ ವ್ಯಕ್ತಿಯಿಂದ ಜೀವನ ಮುಗಿಯುವುದಿಲ್ಲ.. ನಿನ್ನನ್ನು ಕಂಟ್ರೋಲ್ ಮಾಡಿ ನೋಯಿಸುವವರಿಂದ ದೂರ ಇರಬೇಕು. ನಿನ್ನ ಮನಸ್ಸಿಗೆ ಒಳ್ಳೆಯದು ಅನ್ನಿಸುವುದನ್ನು ಮದು ಎಂದು ನನ್ನ ತಾಯಿ ಹೇಳಿದ್ದಾರೆ..ತುಂಬಾ ಪಾಸಿಟಿವ್ ಆದ ಮಾತುಗಳು ಇದು.. ಜೀವನದಲ್ಲಿ ಯಶಸ್ಸು ಸಾಧಿಸಲು ಸ್ಫೂರ್ತಿ ನೀಡುವ ಮಾತುಗಳು..” ಎಂದು ತಾಯಿ ಮತ್ತು ಮಗಳ ಬಗ್ಗೆ ಮಾತನಾಡಿದ್ದಾರೆ. ಇದನ್ನು ಓದಿ..Adah Sharma: ಕೇರಳ ಸ್ಟೋರಿ ನಟಿ ಆಧಾ ಶರ್ಮ ರವರಿಗೆ ರಸ್ತೆ ಅಪಘಾತ- ನಿಜಕ್ಕೂ ಅಲ್ಲಿ ನಡೆದದ್ದು ಏನು ಗೊತ್ತೇ?

Comments are closed.