Astrology: ನಿಮಗೆ ಶನಿ ದೇವನ ಕೃಪೆ ಬೇಕು ಎಂದರೆ, ಇದೊಂದು ಚಿಕ್ಕ ಗಿಡ ನೆಡಿ ಸಾಕು- ಶನಿ ದೇವ ಖುಷಿಯಾಗಿ ನಿಮ್ಮನ್ನು ಕಾಯುತ್ತಾನೆ. ಏನು ಮಾಡಬೇಕು ಗೊತ್ತೇ??
Astrology: ಶನಿದೇವರಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷವಾದ ಸ್ಥಾನವಿದೆ. ಶನಿದೇವರು ಪ್ರತಿಯೊಬ್ಬ ವ್ಯಕ್ತಿ ಮಾಡುಬ ಕರ್ಮದ ಅನುಸಾರ ಫಲ ನೀಡುವ ಕಾರಣ ಅವರನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಒಳ್ಳೆಯ ಕೆಲಸ ಮಾಡುವವರಿಗೆ ಶುಭಫಲ, ಕೆಟ್ಟ ಕೆಲಸ ಮಾಡುವವರಿಗೆ ಅಶುಭ ಫಲ ಸಿಗುತ್ತದೆ. ಆದರೆ ಶನಿದೇವರ ಕೃಪೆ ಯಾರ ಮೇಲಿರುತ್ತದೆಯೋ ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ, ಶನಿದೇವರೇ ಅವರನ್ನು ಕಾಯುತ್ತಾರೆ. ಹೀಗೆ ಶನಿದೇವರ ಕೃಪೆ ಪಡೆಯಬೇಕು ಎಂದರೆ ತಪ್ಪದೇ ಈ ಗಿಡವನ್ನು ಮನೆಯಲ್ಲಿ ನೆಡಿ..
ಶನಿದೇವರಿಗೆ ಅದೊಂದು ಗಿಡದ ಮೇಲೆ ಬಹಳ ಪ್ರೀತಿ, ಆ ಗಿಡವನ್ನು ಮನೆಯಲ್ಲಿ ನೆಡುವುದರಿಂದ ನಿಮಗೆ ಶನಿದೇವರ ಕೃಪೆ ಸಿಗುತ್ತದೆ. ಹಾಗೆಯೇ ಒಳ್ಳೆಯದು ಆಗುತ್ತದೆ. ಶನಿದೇವರ ಕೃಪೆ ಪಡೆಯಲು ನೀವು ಮನೆಯಲ್ಲಿ ನೆಡಬೇಕಿರುವುದು ಶಮಿ ಗಿಡವನ್ನು. ಇದರಿಂದ ಶನಿದೇವರಿಗೆ ಸಂತೋಷವಾಗುತ್ತದೆ. ಶನಿದೇವರು ಈ ಗಿಡದಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ಇದನ್ನು ಓದಿ..Horoscope: ದಿಡೀರ್ ಎಂದು ಯಶಸ್ಸು ಪಡೆಯಲಿರುವ ರಾಶಿಗಳು ಯಾವ್ಯಾವು ಗೊತ್ತೇ?? ಇನ್ನು ಮುಂದಿದೆ ಈ ರಾಶಿಗಳಿಗೆ ಹಬ್ಬ.
ಹಾಗೆಯೇ ಶಮಿ ಗಿಡದ ಆರಾಧನೆ ಮಾಡಿ ಪೂಜೆ ಮಾಡುವುದರಿಂದ ನಿಮ್ಮ ಎಲ್ಲಾ ತೊಂದರೆಗಳು ದೂರವಾಗುತ್ತದೆ. ಶಮಿ ಗಿಡವು ಯಶಸ್ಸು ಮತ್ತು ಸಮೃದ್ಧಿಯನ್ನು ತರುತ್ತದೆ. ಶಮಿ ಗಿಡವನ್ನು ಮನೆಯಲ್ಲಿ ನೆಡುವುದರಿಂದ ನಿಮ್ಮ ಮನೆಯ ನೆಗಟಿವ್ ಎನರ್ಜಿ ಕಡಿಮೆ ಆಗುತ್ತದೆ. ಹಾಗೆಯೇ ಈ ಗಿಡ ಪಾಪಗಳನ್ನು ಕಡಿಮೆ ಮಾಡುತ್ತದೆ. ಮಂತ್ರ ಹಾಗೂ ತಂತ್ರಗಳ ತೊಂದರೆಯನ್ನು ಕಡಿಮೆ ಮಾಡುತ್ತದೆ.
ಶಮಿ ಗಿಡವು ಮನೆಯಲ್ಲಿ ಸಮೃದ್ಧಿ ಮತ್ತು ನೆಮ್ಮದಿ ತರುತ್ತದೆ, ಇದು ಶನಿ ದೇವರಿಂದ ದಶಾ, ಧೈಯಾ ಮತ್ತು ಸಾಡೇಸಾತಿಯಿಂದ ಪರಿಹಾರ ಸಿಗುತ್ತದೆ. ಶಮಿ ಗಿಡದ ಒಂದು ಸಣ್ಣ ಕಡ್ಡಿಯನ್ನು ಬಟ್ಟೆಯಲ್ಲಿ ಸುತ್ತಿ ಧರಿಸಿಕೊಂಡರೆ, ಜಾತಕದಲ್ಲಿ ನಿಮಗೆ ನಡೆಯುವ ಅಪವಾದ, ಅಪಘಾತ, ಅನಾರೋಗ್ಯ ಇದೆಲ್ಲವೂ ದೂರವಾಗುತ್ತದೆ. ಕೆಟ್ಟ ಪರಿಸ್ಥಿತಿಗಳಿಂದ ಮುಕ್ತಿ ಸಿಗುತ್ತದೆ. ಇದನ್ನು ಓದಿ..Health Tips: ದೇಹದಲ್ಲಿ ಇರುವ ಅನಗತ್ಯ ಕೊಬ್ಬನ್ನು ಕಡಿಮೆ ಮಾಡುವುದು ಹೇಗೆ ಗೊತ್ತೇ?? ಅದು ಕೇವಲ ಆಹಾರಗಳನ್ನು ತಿಂದು. ಯಾವುದನ್ನೂ ತಿನ್ನಬೇಕು ಗೊತ್ತೇ??
Comments are closed.