Neer Dose Karnataka
Take a fresh look at your lifestyle.

Nayanthara: ಇವೆಲ್ಲ ಬಾಳು ಹೇಗಿದೆ ಗೊತ್ತೇ?? ಗಂಡ ಮಾಡಿದ ಕೆಲಸ ನೋಡಿ, ಕಣ್ಣೀರು ಹಾಕಿದ ನಯನತಾರ- ಆದರೆ ಅಭಿಮಾನಿಗಳು ಮಾತ್ರ ಕುಶ್. ಯಾಕೆ ಗೊತ್ತೇ??

138

Nayanthara: ನಟಿ ನಯನತಾರ ಅವರು ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎನ್ನಿಸಿಕೊಂಡಿದ್ದಾರೆ. ಇವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟಿ. ಈಗ ಜವಾನ್ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಶಾರುಖ್ ಖಾನ್ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ ನಯನ್. ನಯನತಾರ ಅವರ ಪರ್ಸನಲ್ ಲೈಫ್ ಬಗ್ಗೆ ಹೇಳೋದಾದರೆ..

ಕಳೆದ ವರ್ಷ ಜೂನ್ 9ರಂದು ನಯನತಾರ ಅವರು ತಾವು ಪ್ರೀತಿಸುತ್ತಿದ್ದ ನಿರ್ದೇಶಕ ವಿಘ್ನೇಶ್ ಶಿವನ್ ಅವರೊಡನೆ ಮದುವೆಯಾದರು. ಸರೋಗಸಿ ಮೂಲಕ ಇಬ್ಬರು ಮುದ್ದಾದ ಅವಳಿ ಮಕ್ಕಳನ್ನು ಪಡೆದಿದ್ದಾರೆ. ವೈವಾಹಿಕ ಜೀವನವನ್ನು ಮತ್ತು ತಾಯ್ತನವನ್ನು ಆನಂದಿಸುತ್ತಿದ್ದಾರೆ ನಯನತಾರ. ಇದೀಗ ಇವರ ಮದುವೆಯ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದಾರೆ. ಇದನ್ನು ಓದಿ..Business Idea: ನಿಮ್ಮ ಮನೆಯಲ್ಲಿರುವ ಅಲ್ಲಲ್ಲಿ ಖಾಲಿ ಇರುವ ಜಾಗದಲ್ಲಿ ಈ ಬಿಸಿನೆಸ್ ಮಾಡಿ, ಕೈ ತುಂಬಾ ಕಾಸು, ನಿಮಗೆ ನೀವೇ ಬಾಸ್. ಲಕ್ಷ ಲಕ್ಷ ಆದಾಯ ಫಿಕ್ಸ್. ಏನು ಗೊತ್ತೇ?

ಈ ಸ್ಪೆಷಲ್ ದಿನದಂದು ನಯನತಾರ ಅವರ ಪತಿ ವಿಘ್ನೇಶ್ ಶಿವನ್ ತಮ್ಮ ಪ್ರೀತಿಯ ಹೆಂಡತಿಗೆ ವಿಶೇಷವಾದ ಸರ್ಪ್ರೈಸ್ ನೀಡಿದ್ದಾರೆ. ನಯನತಾರ ಅವರಿಗಾಗಿ ತಮ್ಮ ಫ್ರೆಂಡ್ ನವೀನ್ ಅವರನ್ನು ಕರೆಸಿ, ನವೀನ್ ಅವರು ಮದುವೆ ವಾರ್ಷಿಕೋತ್ಸವದ ದಿನ ನಯನತಾರ ವಿಘ್ನೇಶ್ ಅವರ ಮನೆಗೆ ಬಂದು, ಕೊಳಲಿನಲ್ಲಿ ನಯನತಾರ ಅವರ ನಾನುಂ ರೌಡಿ ಧಾನ್ ಸಿನಿಮಾ ಹಾಡು, ಕಣ್ಣಾನ ಕಣ್ಣೆ ಹಾಡು ಹಾಗೂ ಕಾತುವಾಕುಲ ರೆಂಡು ಕಾದಲ್ ಸಿನಿಮಾದ ಹಾಡನ್ನು ನುಡಿಸಿದ್ದಾರೆ.

ಇದನ್ನು ಕೇಳುತ್ತಿದ್ದ ಹಾಗೆ ಭಾವುಕರಾದ ನಯನತಾರ ಅವರು ಪತಿ ವಿಘ್ನೇಶ್ ಶಿವನ್ ಅವರನ್ನು ಹಿಡಿದು ಸಂತೋಷದ ಕಣ್ಣೀರು ಹಾಕಿದ್ದಾರೆ. ನಯನತಾರ ಅವರ ಜೊತೆಗಿನ ಈ ಭಾವನಾತ್ಮಕ ವಿಡಿಯೋ ಶೇರ್ ಮಾಡಿ ವಿಘ್ನೇಶ್ ಶಿವನ್ ಅವರು ಪ್ರೀತಿಯ ಸಾಲುಗಳನ್ನು ಬರೆದು ವಿಶ್ ಮಾಡಿ, ಐ ಲವ್ ಯೂ ಎಂದು ಹೇಳಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನಯನತಾರ ಹಾಗೂ ವಿಘ್ನೇಶ್ ಶಿವನ್ ದಂಪತಿಗೆ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ. ಇದನ್ನು ಓದಿ..Prabhu Deva: ಎರಡನೇ ಮಗುವಿಗೆ ತಂದೆಯಾದ ಪ್ರಭು ದೇವ- ಅಭಿಮಾನಿಗಳು ಕುಶ್. ಆದರೆ ಇವರ ನಿಜವಾದ ವಯಸ್ಸು ಎಷ್ಟು ಗೊತ್ತೆ??

 

 
 
 
 
 
View this post on Instagram
 
 
 
 
 
 
 
 
 
 
 

 

A post shared by Vignesh Shivan (@wikkiofficial)

Leave A Reply

Your email address will not be published.