Pragathi: ತೆಲುಗು ಚಿತ್ರರಂಗದ ಹಾಸ್ಯ ಕಲಾವಿದನ ಕರಾಳ ಮುಖ ಬಿಚ್ಚಿಟ್ಟ ಪ್ರಗತಿ- ಆ ಟಾಪ್ ಕಲಾವಿದ ಅಂದು ಏನು ಮಾಡಿದ್ದನಂತೆ ಗೊತ್ತೇ??
Pragathi: ತೆಲುಗು ಚಿತ್ರರಂಗದಲ್ಲಿ ಈಗ ಬಹುಬೇಡಿಕೆಯ ಕ್ಯಾರೆಕ್ಟರ್ ಆರ್ಟಿಸ್ಟ್ ಗಳಲ್ಲಿ ಒಬ್ಬರು ನಟಿ ಪ್ರಗತಿ. 90ರ ದಶಕದಲ್ಲಿ ಹೀರೋಯಿನ್ ಆಗಿಯೂ ನಟಿಸಿರುವ ಪ್ರಗತಿ ಅವರು ಮದುವೆ ನಂತರ ನಟನೆಗೆ ಗುಡ್ ಬೈ ಹೇಳಿದ್ದರು. ಗಂಡನಿಂದ ವಿಚ್ಚೇದನ ಪಡೆದ ಬಳಿಕ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದರು. ಈಗ ಇವರು ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ.
ಅಕ್ಕ, ಅತ್ತೆ, ಅಮ್ಮ ಈ ಥರದ ಪಾತ್ರಗಳ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ. ಪ್ರಗತಿ ಅವರು ಸೋಷಿಯಲ್ ಮೀಡಿಯಾ ಹಾಗೂ ಯೂಟ್ಯೂಬ್ ಚಾನೆಲ್ ನಲ್ಲಿ ಹೆಚ್ಚು ಆಕ್ಟಿವ್ ಆಗಿರುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಇತ್ತೀಚೆಗೆ ಪ್ರಗತಿ ಅವರು ಒಂದು ಸಂದರ್ಶನದಲ್ಲಿ ಮಾತನಾಡಿ, ತಮಗೆ ಆಗಿರುವ ಕ್ಯಾಸ್ಟಿಂಗ್ ಕೌಚ್ ಅನುಭವವನ್ನು ತಿಳಿಸಿದ್ದಾರೆ. ತೆಲುಗಿನ ಒಬ್ಬ ಖ್ಯಾತ ಕಾಮಿಡಿಯನ್ ತಮ್ಮ ಜೊತೆಗೆ ಅಸಭ್ಯವಾಗಿ ವರ್ತಿಸಿದ ಬಗ್ಗೆ ಮಾತನಾಡಿದ್ದಾರೆ.. “ತೆಲುಗಿನಲ್ಲಿ ಖ್ಯಾತ ಹಾಸ್ಯ ನಟನಾಗಿ ಗುರುತಿಸಿಕೊಂಡಿರುವ ಅವರು, ಶೂಟಿಂಗ್ ಸೆಟ್ ನಲ್ಲಿ ನನ್ನ ಜೊತೆಗೆ ತುಂಬಾ ಚೆನ್ನಾಗಿ, ಸಭ್ಯವಾಗಿ ಮಾತನಾಡುತ್ತಿದ್ದರು. ಇದನ್ನು ಓದಿ..RaviChandran: ರವಿಚಂದ್ರನ್ ರವರು ಯಾರಿಗೂ ಕಾಯುತ್ತಿರಲಿಲ್ಲ, ಆದರೆ ಆ ನಟಿಗೆ ಮಾತ್ರ ಕಾಯ್ದು, ಸಿನಿಮಾ ಮಾಡಿದ್ದರು, ಆ ನಟಿ ಯಾರು ಗೊತ್ತೇ??
ಆದರೆ ಒಂದು ದಿನ, ನನ್ನ ಜೊತೆ ಅವರ ವರ್ತನೆ ಅಸಭ್ಯವಾಗಿತ್ತು, ಅವರು ಆ ಥರ ಬಿಹೇವ್ ಮಾಡಿದ್ದನ್ನು ನನ್ನಿಂದ ಜೀರ್ಣಿಸಿಕೊಳ್ಳಲು ಸಾಧ್ಯ ಆಗಲಿಲ್ಲ. ಆ ದಿನ ನನಗೆ ಊಟ ಮಾಡಲು ಅಥವಾ ಇನ್ಯಾವುದೇ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಟೀ ಕುಡಿಯುವುದಕ್ಕೂ ಆಗಲಿಲ್ಲ, ಅಂದು ಶೂಟಿಂಗ್ ಇನ್ನು ಮುಗಿದಿರಲಿಲ್ಲ.. ಅವರು ಪ್ಯಾಕಪ್ ಮಾಡಿಕೊಂಡು ಹೊರಟಿದ್ದರು.. ಆಗ ನಾನು ಅವರ ಹತ್ತಿರ ಹೋಗಿ, ನಿಮ್ಮ ಜೊತೆ ನಾನು ಸ್ವಲ್ಪ ಮಾತನಾಡಬೇಕು ಎಂದು ಹೇಳಿ.. ಕ್ಯಾರವಾನ್ ಗೆ ಕರೆದುಕೊಂಡು ಹೋಗಿ ಕೇಳಿದೆ..ನಾನು ಎಂದಾದರೂ ನಿಮ್ಮ ಜೊತೆಗೆ ಬೇರೆ ಥರ ನಡೆದುಕೊಂಡಿದ್ದೀನಾ. ನನ್ನ ವರ್ತನೆ, ನನ್ನ ಕಣ್ಣು ಏನಾದರೂ ಬೇರೆ ಥರ ನನಗೆ ಗೊತ್ತಿಲ್ಲದೆ ನಿಮಗೆ ಆಹ್ವಾನ ನೀಡಿದೆಯಾ..
ಕೆಟ್ಟದಾಗಿ ಸಿಗ್ನಲ್ ಕೊಟ್ಟಿದ್ದೀನಾ..? ಎಂದು ಹೇಳಿದ್ ತಕ್ಷಣ ಅವರು, ಅಯ್ಯಯ್ಯೋ ಯಾಕಮ್ಮ ಈ ಥರ ಹೇಳ್ತಿದ್ದೀಯಾ.. ಹಾಗೆಲ್ಲ ಏನು ಇಲ್ಲ.. ಅಂದ್ರು.. ಹಾಗಿದ್ರೆ ಆ ಥರ ಯಾಕೆ ಹೇಳಿದ್ರಿ, ಅದು ಸರೀನಾ..? ನೀವು ಹೀಗೆ ಮಾಡ್ತೀರಾ ಅಂತ ನಾನು ಅಂದುಕೊಂಡಿರಲಿಲ್ಲ, ಒಂದು ವೇಳೆ ನಾನು ಅಲ್ಲೇ ಪ್ರತಿಕ್ರಿಯೆ ಕೊಟ್ಟಿದ್ರೆ ನಿಮ್ಮ ಕಥೆ ಏನಾಗ್ತಿತ್ತು ಗೊತ್ತಾ? ಅಂತ ಪ್ರಶ್ನೆ ಮಾಡಿದೆ..ನೀವು ಅಂತ ನಾನು ಸೈಲೆಂಟ್ ಆದೇ, ನೀವು ಆ ಥರ ಮಾಡಲ್ಲ ಅನ್ನೋ ನಂಬಿಕೆ ಇಂದ.. ನನ್ನಿಂದ ಏನಾದರೂ ಗೊತ್ತಿಲ್ಲದೆ ತಪ್ಪಾಯ್ತಾ ಎಂದು ಕೇಳಿದೆ.. ಅದಕ್ಕೆ ಅವರು ಓಕೆ ಓಕೆ ಅಂತ ಹೇಳಿ.. ಹೊರಟುಬಿಟ್ಟರು ಎಂದು ಹೇಳಿದ್ದಾರೆ ನಟಿ ಪ್ರಗತಿ. ಇದನ್ನು ಓದಿ..Balakrishna: ಸಾವಿರಾರು ಕೋತಿ ಒಡೆಯ- ದೇಶವನ್ನೇ ನಿಲ್ಲಿಸುವಷ್ಟು ಶಕ್ತಿ- ಆದರೂ ಬಾಲಯ್ಯರವರಿಗೆ ತೀರಿಲ್ಲ ಅದೊಂದು ಆಸೆ. ಏನು ಗೊತ್ತೇ??
Comments are closed.