Pratham: ಪ್ರಥಮ್ ಕಿಲಾಡಿ ಅದು ಗೊತ್ತು ಆದರೆ, ಮದುವೆಯಾಗುತ್ತಿರುವ ಮಂಡ್ಯದ ಹುಡುಗಿಯ ಬ್ಯಾಕ್ ಗ್ರೌಂಡ್ ಏನು ಗೊತ್ತೇ?? ಇವರು ನಿಜಕ್ಕೂ ಯಾರು ಗೊತ್ತೇ??
Pratham: ಬಿಗ್ ಬಾಸ್ ಕನ್ನಡ ಸೀಸನ್ 4ರಲ್ಲಿ ಅತಿಹೆಚ್ಚು ಫೇಮಸ್ ಆದ ಅದೊಂದು ಹೆಸರು ಒಳ್ಳೆ ಹುಡುಗ ಪ್ರಥಮ್, ವಿಭಿನ್ನವಾದ ಪರ್ಸನಾಲಿಟಿ ಮೂಲಕ ಪ್ರಥಮ್ ಅವರು ಮನೆಮಾತಾಗಿದ್ದರು. ಇವರು ಮಾತಿನಿಂದಲೇ ಹೆಚ್ಚು ಫೇಮಸ್ ಆಗಿ, ಕೊನೆಗೆ ಬಿಗ್ ಬಾಸ್ ಟ್ರೋಫಿಯನ್ನು ಸಹ ಗೆದ್ದರು. ಈಗ ದಿಢೀರ್ ಎಂದು ಎಂಗೇಜ್ಮೆಂಟ್ ಮಾಡಿಕೊಂಡು ಸುದ್ದಿಯಾಗಿದ್ದಾರೆ..

ಪ್ರಥಮ್ ಅವರು ಬಿಗ್ ಬಾಸ್ ನಂತರ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಪ್ರಥಮ್ ಅವರು ಕರ್ನಾಟಕದ ಅಳಿಯ ಎನ್ನುವ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾ ಪೂರ್ತಿಯಾಗಿ ಮದುವೆ ಆಗುವುದಕ್ಕಿಂತ ಮೊದಲೇ ಪ್ರಥಮ್ ಅವರು ದಿಢೀರ್ ಎಂದು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಮಂಡ್ಯದ ಪಕ್ಕದ ಹಳ್ಳಿಯ ಹುಡುಗಿ ಭಾನುಶ್ರೀ ಜೊತೆಗೆ ಪ್ರಥಮ್ ಅವರ ಎಂಗೇಜ್ಮೆಂಟ್ ನಡೆದಿದೆ. ಇದನ್ನು ಓದಿ..Prakruthi Mishra: ಚಾನ್ಸ್ ಕೊಡುತ್ತೇನೆ ಎಂದು ವಯಸ್ಸಾದ ವಯಸ್ಸಾದ ನಿರ್ದೇಶಕ ಯುವ ನಟಿಯನ್ನು ಏನು ಮಾಡಿದ್ದಾನೆ ಗೊತ್ತೇ? ಕೊನೆಗೂ ಆಕೆ ಬಾಯ್ಬಿಟ್ಟ ಸತ್ಯ ಏನು ಗೊತ್ತೇ?
ಪ್ರಥಮ್ ಅವರು ಮೊದಲಿನಿಂದಲೂ ಹಳ್ಳಿಹುಡುಗಿಯನ್ನೇ ಮದುವೆ ಆಗ್ತೀನಿ ಎಂದು ಹೇಳುತ್ತಿದ್ದರು. ಇದೀಗ ಆ ಮಾತು ನಿಜವಾಗಿದೆ. ಭಾನುಶ್ರೀ ಅವರ ಬಗ್ಗೆ ಹೇಳುವುದಾದರೆ, ಇವರು ಡಿಗ್ರಿ ಮುಗಿಸಿ, ಮಾಸ್ಟರ್ ಡಿಗ್ರಿ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಎಂಗೇಜ್ಮೆಂಟ್ ಆಗಿರುವ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕ ಶೇರ್ ಮಾಡಿಕೊಂಡಿದ್ದಾರೆ.. “ಒಂದು ಸುಂದರ ಕ್ಷಣ.ಇವತ್ತು ನನ್ನ ಎಂಗೇಜ್ಮೆಂಟ್ ಆಯ್ತು. ಯಾವ ಆಡಂಬರ, ಸಂಭ್ರಮ, ತೋರ್ಪಡಿಕೆ ಇಲ್ಲದೇ ಬಹಳ ಸರಳವಾಗಿ ಕುಟುಂಬದವರು ಮೆಚ್ಚಿದವರ ಜೊತೆಯಾದೆ;
ನಾನು ತುಂಬಾ ಸರಳವಾಗಿಯೇ ಬದುಕಿದವನು; ಹಾಗೇ ಇರೋಕೆ ಇಷ್ಟ. ನನ್ನ ಎಂಗೇಜ್ಮೆಂಟ್ ಈ ದೇಶದ ದೊಡ್ಡ ಸುದ್ಧಿಯಲ್ಲ. ಆದರೆ ನನ್ನ ಇಷ್ಟಪಡುವ ಸ್ಬೇಹಿತರು ಆತ್ಮೀಯರಿಗೆ ವಿಚಾರ ಹಂಚಿಕೊಳ್ಳೋಣ ಅನ್ನೋ ಕಾರಣಕ್ಕೆ ನಿಮ್ಗೆ ತಿಳಿಸಿದ್ದೇನೆ ಅಷ್ಟೇ. ಮದುವೆ ಎಷ್ಟು ಅದ್ಧೂರಿಯಾಗಿ ಆದೇ ಅನ್ನೋದಕ್ಕಿಂತ ಎಷ್ಟು ಚೆನ್ನಾಗಿ ಬದುಕು ಕಟ್ಟಿಕೊಂಡ್ವಿ ಅನ್ನೋದೇ ನಿಜವಾದ ಸಾಧನೆ. ನನಗೆ ಹಾಗಿರೋಕೆ ಇಷ್ಟ; ಹೀಗೇ ಇದ್ದು ಬಿಡ್ತೀನಿ.. ಹರಸುವವರು ಅಲ್ಲಿಂದಲೇ ಹರಸಿ…ಅದೇ ಆಶೀರ್ವಾದ..” ಎಂದು ಬರೆದುಕೊಂಡಿದ್ದಾರೆ ಪ್ರಥಮ್. ಇದನ್ನು ಓದಿ..Balakrishna: ಸಾವಿರಾರು ಕೋತಿ ಒಡೆಯ- ದೇಶವನ್ನೇ ನಿಲ್ಲಿಸುವಷ್ಟು ಶಕ್ತಿ- ಆದರೂ ಬಾಲಯ್ಯರವರಿಗೆ ತೀರಿಲ್ಲ ಅದೊಂದು ಆಸೆ. ಏನು ಗೊತ್ತೇ??