Adipurush: ನೀವು ಅಧಿಪುರುಷ್ ಸಿನಿಮಾ ನೋಡುವ ಆಲೋಚನೆಯಲ್ಲಿ ಇದ್ದೀರಾ?? ಹಾಗಿದ್ದರೆ ಈ ವಿಷಯ ತಿಳಿದು ಮುಂದೆ ಹೋಗಿ .
Adipurush: ನಟ ಪ್ರಭಾಸ್ (Prabhas) ಅವರು ಇಂದು ಆದಿಪುರುಷ್ (Adipurush) ಸಿನಿಮಾ ಮೂಲಕ ರಾಮನ ಅವತಾರದಲ್ಲಿ ಅಭಿಮಾನಿಗಳ ಎದುರು ಬರಲಿದ್ದಾರೆ. ಇದು ರಾಮಾಯಣ ಆಧಾರಿತ ಕತೆ ಆಗಿದ್ದು, ಪ್ರಭಾಸ್ ಅವರು ರಾಮನಾಗಿ, ಕೃತಿ ಸನೊನ್ (Kriti Sanon) ಅವರು ಸೀತೆಯಾಗಿ, ಸೈಫ್ ಅಲಿ ಖಾನ್ (Saif ali khan) ಅವರು ರಾವಣನಾಗಿ ನಟಿಸಿದ್ದಾರೆ. ಓಂ ರಾವತ್ (Om Raut) ಅವರು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅಭಿಮಾನಿಗಳೆಲ್ಲಾ ಕಾದು ಕುಳಿತಿರುವ ಈ ಸಿನಿಮಾದ ಟಿಕೆಟ್ ದರವನ್ನು ಈಗ ಜಾಸ್ತಿ ಮಾಡಲಾಗಿದೆ.
ತೆಲಂಗಾಣ ಸರ್ಕಾರವು ಸಿಂಗಲ್ ಸ್ಕ್ರೀನ್ ಗಳಲ್ಲಿ ಟಿಕೆಟ್ ದರ ಹೆಚ್ಚಿಸಲು ಅನುಮತಿ ನೀಡಿದೆ. ಹಾಗೆಯೇ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲಿ ದಿನಕ್ಕೆ 6 ಶೋ ಪ್ರದರ್ಶಿಸಲು ಕೂಡ ಅನುಮತಿ ನೀಡಲಾಗಿದೆ. ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲಿ ಒಂದು ಟಿಕೆಟ್ ಗೆ 50 ರೂಪಾಯಿ ಹೆಚ್ಚಿಸಲು ಅನುಮತಿ ನೀಡಲಾಗಿದೆ. ಆದರೆ ಆಂಧ್ರಪ್ರದೇಶ ಸರ್ಕಾರ ಈ ಬಗ್ಗೆ ಯಾವುದೇ ಆದೇಶ ನೀಡಿಲ್ಲ. ಸಿನಿಮಾದ ಫಸ್ಟ್ ವೀಕ್ ಕಲೆಕ್ಷನ್ ಅದ್ಭುತವಾಗಿರುತ್ತದೆ ಎನ್ನುವ ಮಾತು ಕೇಳಿಬರುತ್ತಿದೆ. ಇದನ್ನು ಓದಿ..Pratham: ಪ್ರಥಮ್ ಕಿಲಾಡಿ ಅದು ಗೊತ್ತು ಆದರೆ, ಮದುವೆಯಾಗುತ್ತಿರುವ ಮಂಡ್ಯದ ಹುಡುಗಿಯ ಬ್ಯಾಕ್ ಗ್ರೌಂಡ್ ಏನು ಗೊತ್ತೇ?? ಇವರು ನಿಜಕ್ಕೂ ಯಾರು ಗೊತ್ತೇ??
ಆದಿಪುರುಷ್ ಸಿನಿಮಾ ಈಗಾಗಗೇ ಟ್ರೈಲರ್ ಮೂಲಕ ಸೆನ್ಸೇಷನ್ ಸೃಷ್ಟಿಸಿದೆ. ಪ್ರಭಾಸ್ ಅವರ ಅಭಿಮಾನಿಗಳಂತೂ ಥಿಯೇಟರ್ ನಲ್ಲಿ ಸಿನಿಮಾ ನೋಡಲು ಕಾದು ಕುಳಿತಿದ್ದಾರೆ. ಫಸ್ಟ್ ಲುಕ್ ಟೀಸರ್ ಬಿಡುಗಡೆ ಆದಾಗ ಟ್ರೋಲ್ ಆಗಿದ್ದು ಉಂಟು. ಅಡ್ವಾನ್ಸ್ ಬುಕಿಂಗ್ ಶುರುವಾಗಿ, ಒಂದು ಮಟ್ಟದಲ್ಲಿ ಟಿಕೆಟ್ ಸೇಲ್ ಆಗುತ್ತಿದೆ. ಸಿನಿಮಾ ಮೇಲೆ ಪಾಸಿಟಿವ್ ಬಜ್ ಇದ್ದು, ಸೆಲೆಬ್ರಿಟಿಗಳಿಂದ ಕೂಡ ಉತ್ತಮವಾದ ಸಪೋಎಟ್ ಸಿಗುತ್ತಿದೆ. ಈ ಸಿನಿಮಾವನ್ನು 500 ಕೋಟಿ ಬಜೆಟ್ ನಲ್ಲಿ ತಯಾರಿಸಲಾಗಿದೆ.
ಸಿನಿಮಾ ಇಂದು ಬಿಡುಗಡೆ ಆಗುತ್ತಿದ್ದು, ಈಗಾಗಲೇ ಸೌತ್ ಇಂಡಿಯಾದ ಥಿಯೇಟ್ರಿಕಲ್ ರೈಟ್ಸ್, ನಾನ್ ಥಿಯೇಟ್ರಿಕಲ್ ರೈಟ್ಸ್ ಇಂದಲೇ ನಿರ್ಮಾಪಕರಿಗೆ ₹400 ಕೋಟಿ ರೂಪಾಯಿಗಿಂತ ಹೆಚ್ಚು ಹಣ ಬಂದಿದೆ ಎಂದು ಬಾಲಿವುಡ್ ಮೂಲಗಳ ಪ್ರಕಾರ ತಿಳಿದುಬಂದಿದೆ. ಸಿನಿಮಾ ಕಲೆಕ್ಷನ್ 1000 ಕೋಟಿ ದಾಟುವ ನಿರೀಕ್ಷೆ ಏನೋ ಇದೆ.. ಆದರೆ ಬಿಡುಗಡೆಯಾದ ಮೇಲೆ ಯಾವ ಥರದ ಫಲಿತಾಂಶ ಸಿಗುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Varun Lavanya: ವರುಣ್ – ಲಾವಣ್ಯ ಎಂಗೇಜ್ಮೆಂಟ್ ಉಂಗುರದ ಬೆಲೆ ಕೇಳಿದರೆ, ದೇಶಾನೇ ನಿಂತು ಹೋಗುತ್ತೆ. ಎಷ್ಟು ಗೊತ್ತೇ? ಒಂದು ಉಂಗುರಕ್ಕೆ ಇಷ್ಟೊಂದಾ?
Comments are closed.