Pressure Cooker: ಕಡಿಮೆ ಬೆಲೆ ಕುಕ್ಕರ್ ಆದರೂ ಪರವಾಗಿಲ್ಲ, ಬೆಲೆ ಜಾಸ್ತಿ ಆದರೂ ಪರವಾಗಿಲ್ಲ- ಇವುಗಳನ್ನು ಫಾಲೋ ಮಾಡಿದರೆ, ಏನು ಆಗಲ್ಲ ಸೇಫ್ ಆಗಿ ಇರುತ್ತೆ
Pressure Cooker: ಒಂದು ಮನೆ ಎಂದಮೇಲೆ ಅಡುಗೆ ಮನೆಯಲ್ಲಿ ಕುಕ್ಕರ್ ಬಳಸುವುದು ಸಾಮಾನ್ಯ ಆಗಿದೆ. ಅನ್ನ ಮಾಡಲು, ತರಕಾರಿಗಳನ್ನು ಬೇಯಿಸಲು ಹೀಗೆ ಸಾಕಷ್ಟು ಕೆಲಸಕ್ಕೆ ಕುಕ್ಕರ್ ಬೇಕೇ ಬೇಕು. ಕುಕ್ಕರ್ ಬಳಸುವುದರಿಂದ ಸಮಯ ಉಳಿತಾಯ ಆಗುತ್ತದೆ ಹಾಗೂ ಗ್ಯಾಸ್ ಕೂಡ ಉಳಿತಾಯ ಆಗುತ್ತದೆ. ಆದರೆ ಪ್ರೆಶರ್ ಕುಕ್ಕರ್ ಬಳಸುವಾಗ ನೀವು ಕೆಲವು ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಸಣ್ಣ ತಪ್ಪಾದರು ಕುಕ್ಕರ್ ಸ್ಫೋಟಗೊಳ್ಳಬಹುದು, ಹಾಗಾಗಿ ನೀವು ಹೇಗೆ ಕಾಳಜಿ ವಹಿಸಬೇಕು ಎಂದು ಇಂದು ನಿಮಗೆ ತಿಳಿಸಿಕೊಡುತ್ತೇವೆ. ಈ ಟಿಪ್ಸ್ ಗಳನ್ನು ತಪ್ಪದೇ ಫಾಲೋ ಮಾಡಿ..
ಅಗ್ಗದ ಬೆಲೆಗೆ ಮಾರುಹೋಗಬೇಡಿ :- ಪ್ರೆಶರ್ ಕುಕ್ಕರ್ ಖರೀದಿ ಮಾಡುವಾಗ ಕಡಿಮೆ ಬೆಲೆ ಎಂದು ಮಾರುಹೋಗಬೇಡಿ, ಕಂಪನಿ ಚೆನ್ನಾಗಿದೆಯಾ ಎನ್ನುವುದನ್ನು ನೆನಪಿನಲ್ಲಿಡಿ..ಹಾಗೆಯೇ ವಾರಂಟಿ, ಗ್ಯಾರಂಟಿಗಳ ಬಗ್ಗೆ ಕೂಡ ತಿಳಿದುಕೊಳ್ಳಿ. ಕಡಿಮೆ ಬೆಲೆ ಎಂದು ಕೊಂಡುಕೊಳ್ಳುವ ಕುಕ್ಕರ್ ಗಳು ಸ್ಫೋಟವಾಗುವುದು ಹೆಚ್ಚು. ಹಾಗಾಗಿ ಒಳ್ಳೆ ಕಂಪೆನಿಯ ಕುಕ್ಕೆರ್ ಖರೀದಿ ಮಾಡುವುದು ಒಳ್ಳೆಯದು. ಇದನ್ನು ಓದಿ..Investment Ideas: ಬ್ಯಾಂಕ್ ನಲ್ಲಿ FD ಇಡುವ ಬದಲು ನಿಮ್ಮ ಹಣವನ್ನು ಇಲ್ಲಿ ಹಾಕಿ- ಅದಕ್ಕಿಂತ ಹೆಚ್ಚಿನ ಲಾಭ ಸಿಗುವುದು ಖಚಿತ. ಏನು ಮಾಡಬೇಕು ಗೊತ್ತೇ??
ನೀರಿನ ಬಗ್ಗೆ ಗಮನ ಇಡಿ :- ಕುಕ್ಕರ್ ನಲ್ಲಿ ಬೇಳೆ, ಅಕ್ಕಿ, ಆಲೂಗಡ್ಡೆ ಹಾಗೂ ಬೇರೆ ಏನಾದರೂ ಅಡುಗೆ ಮಾಡುವಾಗ ನೀರಿನ ಪ್ರಮಾಣ ಎಷ್ಟು ಇರಬೇಕು ಎನ್ನುವುದನ್ನು ನೋಡಿಕೊಳ್ಳಿ. ಕುಕ್ಕರ್ ನಲ್ಲಿ ನೀರಿಲ್ಲದೆ , ಹಾಗೆಯೇ ಕುಕ್ಕರ್ ಅನ್ನು ಸ್ಟವ್ ಮೇಲೆ ಇಟ್ಟು ಬೇಯಿಸಿದರೆ, ಅದು ಸ್ಟೀಮ್ ಉತ್ಪಾದಿಸಿ ಇಡೀ ಕುಕ್ಕಷ್ಟೇ ಬ್ಲಾಸ್ಟ್ ಆಗುವ ಅಪಾಯ ಹೆಚ್ಚಾಗಿರುತ್ತದೆ.
ಆಗಾಗ ರಬ್ಬರ್ ಬದಲಾಯಿಸಿ :- ಪ್ರೆಶರ್ ಕುಕ್ಕರ್ ಹ್ಯಾಂಡಲ್ ನಲ್ಲಿ ರಬ್ಬರ್ ಬ್ಯಾಂಡ್ ಇರುತ್ತದೆ.ಸದು ನೀರು ಹೊರಬರುವುದನ್ನು ತಡೆಯುತ್ತದೆ..ಆದರೆ ರಬ್ಬರ್ ನಲ್ಲಿ ತೂತು ಆಗಿದ್ದರೆ ಅಥವಾ ಕಟ್ ಆಗಿದ್ದರೆ ಅಥವಾ ಲೂಸ್ ಆಗಿದ್ದರೆ ತಕ್ಷಣವೇ ಅದನ್ನು ಬದಲಾಯಿಸಿ. ಇಲ್ಲದೆ ಹೋದರೆ ಕುಕ್ಕರ್ ಸ್ಫೋಟಕ್ಕೆ ಒಳಗಾಗಬಹುದು. ಇದನ್ನು ಓದಿ..News: 2000 ರೂಪಾಯಿ ನಂತರ 500 ರೂಪಾಯಿ ನೋಟ್ ಕೂಡ ರದ್ದು ಆಗುತ್ತದೆಯೇ?? ಸ್ವತಃ RBI ಗೌವರ್ನರ್ ಹೇಳಿದ್ದೇನು ಗೊತ್ತೇ?
ವಿಶಲ್ ಅನ್ನು ಕ್ಲೀನ್ ಮಾಡಿ :- ಕುಕ್ಕರ್ ಅನ್ನು ನೀವು ಚೆನ್ನಾಗಿ ಕ್ಲೀನ್ ಮಾಡಬೇಕು. ಕುಕ್ಕರ್ ನ ಹ್ಯಾಂಡಲ್ ಮೇಲೆ ಬರುವ ವಿಶಲ್ ನೀಟ್ ಆಗಿ ಕ್ಲೀನ್ ಮಾಡುವುದನ್ನು ಮಿಸ್ ಮಾಡಬೇಕು. ದ್ವಿದಳ ಧಾನ್ಯಗಳು, ಅಕ್ಕಿ ಕಾಳುಗಳು ಹಾಗೂ ಇನ್ನಿತರ ವಸ್ತುಗಳನ್ನು ವಿಶಲ್ ಒಳಗೆ ಸಿಲಿಕಿಕೊಳ್ಳಬಹುದು. ಹಾಗಾಗಿ ಇದನ್ನು ಕ್ಲೀನ್ ಮಾಡುವುದನ್ನು ಮಿಸ್ ಮಾಡಬೇಡಿ.
Comments are closed.