Jagan Mohan Reddy: ಮತ್ತೊಂದು ಭೇಟೆಯಾಡಿದ ಜಗನ್ ಮೋಹನ್ ರೆಡ್ಡಿ- ಈ ಬಾರಿ ದೇಶವೇ ಮೆಚ್ಚಿದ ಕ್ರಿಕೆಟಿಗ- ಪಕ್ಷ ಸೇರಿದ ಕಿಲಾಡಿ ಕಿಂಗ್ ಯಾರು ಗೊತ್ತೇ?
Jagan Mohan Reddy: ರಾಜಕೀಯ ಎನ್ನುವುದು ಒಂದು ಸಮುದ್ರದ ಹಾಗೆ, ಒಂದು ಸಾರಿ ಇದಕ್ಕೆ ಧುಮುಕಿದವರು, ಇಲ್ಲಿ ಉಳಿಯಲು ಹರಸಾಹಸಗಳನ್ನು ಪಡುತ್ತಾರೆ. ಹೀಗೆ ದೊಡ್ಡದಾಗಿ ಹೆಸರು ಮಾಡಬೇಕು ಎಂದು ಹಲವಾರು ಜನರು ರಾಜಕೀಯಕ್ಕೆ ಬರುತ್ತಾರೆ. ಚಿತ್ರರಂಗದವರು, ಕ್ರೀಡಾಕ್ಷೇತ್ರದಲ್ಲಿ ಇರುವವರು ಕೂಡ ರಾಜಕೀಯಕ್ಕೆ ಬಂದು ಜನಸೇವೆ ಮಾಡಬೇಕು ಎಂದು ಬರುವುದು ಉಂಟು. ಇದೀಗ ಮತ್ತೊಬ್ಬ ಖ್ಯಾತ ಕ್ರಿಕೆಟಿಗ ರಾಜಕೀಯಕ್ಕೆ ಬರುವ ಸುಳಿವು ನೀಡಿದ್ದಾರೆ.
ಆ ಕ್ರಿಕೆಟಿಗ ಮತ್ಯಾರು ಅಲ್ಲ, ಭಾರತ ತಂಡದ ಪರವಾಗಿ ಹಲವು ಒಳ್ಳೆಯ ಇನ್ನಿಂಗ್ಸ್ ನೀಡಿರುವ ಅಂಬಾಟಿ ರಾಯುಡು ಅವರು. ಇವರು ಇತ್ತೀಚೆಗೆ ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ಅವರನ್ನು ಭೇಟಿಯಾಗಿದ್ದಾರೆ. ಪದೇ ಪದೇ ಹೀಗೆ ಭೇಟಿ ಆಗುವುದು ಹಾಗೆಯೇ ವೈಸಿಸಿಯನ್ನು ಹೊಗಳಿ ಟ್ವೀಟ್ ಸಹ ಮಾಡಿದ್ದರು. ಇದರಿಂದ ಈಗ ರಾಯುಡು ಅವರು ರಾಜಕೀಯಕ್ಕೆ ಬರುವುದು ಬಹುತೇಕ ಖಚಿತ ಎನ್ನಲಾಗಿದೆ. ಇದನ್ನು ಓದಿ..Transport Minister: ಈಗಾಗಲೇ ಹೆಣಗಾಡುತ್ತಿರುವ ಸಾರಿಗೆ ಇಲಾಖೆಯ ನಷ್ಟದ ಬಗ್ಗೆ ಕೇಳಿದಕ್ಕೆ ಸಚಿವರು ಹೇಳಿದ್ದೇನು ಗೊತ್ತೇ? ಟ್ರೊಲ್ ಮಾಡಿದ ನೆಟ್ಟಿಗರು, ಇವರು ಸಚಿವರು.
ಆಂಧ್ರಪ್ರದೇಶದ ಮುಂದಿನ ಚುನಾವಣೆಯಲ್ಲಿ ರಾಯುಡು ಅವರನ್ನು ಸ್ಪರ್ಧೆಗೆ ಇಳಿಸುವ ಪ್ಲಾನ್ ನಡೆಯುತ್ತಿದ್ದು, ಆದರೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಸುತ್ತಾರಾ ಅಥವಾ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಸುತ್ತಾರಾ ಎನ್ನುವ ಬಗ್ಗೆ ಇನ್ನೂ ಕ್ಲಾರಿಟಿ ಸಿಕ್ಕಿಲ್ಲ. ಕೃಷ್ಣ ಅಥವಾ ಗುಂಟೂರು ಜಿಲ್ಲೆಯಿಂದ ಇವರನ್ನು ಲೋಕಸಭಾ ಎಲೆಕ್ಷನ್ ಗೆ ನಿಲ್ಲಿಸಬಹುದು ಎಂದು ಮತ್ತೊಂದು ಸುದ್ದಿ ಹೇಳಿದೆ.
ರಾಯುಡು ಅವರು ಹಿಂದಿನ ವಾರ ಎರಡು ಸಾರಿ ಗುಂಟೂರಿನಿಂದ ಬಂದು ಜಗನ್ ಮೋಹನ್ ರೆಡ್ಡಿ ಅವರನ್ನು ಭೇಟಿಯಾಗಿದ್ದಾರೆ. ಜಗನ್ ಮೋಹನ್ ರೆಡ್ಡಿ ಅವರು ಸಹ ರಾಯುಡು ಅವರನ್ನು ಎಲೆಕ್ಷನ್ ನಲ್ಲಿ ನಿಲ್ಲಿಸಬೇಕು ಎಂದು ಆಸಕ್ತಿ ತೋರಿಸಿದ್ದಾರೆ. ರಾಯುಡು ಅವರನ್ನು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದಿಸಲು ಬಯಸಿದರೆ ಪೊನ್ನೂರು ಅಥವಾ ಗುಂಟೂರು ಪಶ್ಚಿಮ ಕ್ಷೇತ್ರದಲ್ಲಿ ಒಂದು ಕಡೆ ಇವರನ್ನು ಎಲೆಕ್ಷನ್ ಗೆ ನಿಲ್ಲಿಸಬಹುದು ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಮತ್ತೊಬ್ಬ ಕ್ರಿಕೆಟಿಗ ರಾಜಕೀಯಕ್ಕೆ ಬರುವುದು ಪಕ್ಕಾ ಎನ್ನಲಾಗುತ್ತಿದೆ. ಇದನ್ನು ಓದಿ..Siddeshwara Swamy: ಅವರದ್ದು ಇವರದ್ದು ಅಲ್ಲ, ಮೊದಲು ಸಿದ್ದೇಶ್ವರ ಸ್ವಾಮೀಜಿ ರವರ ಬಗ್ಗೆ ಮಕ್ಕಳ ಪುಸ್ತಕದಲ್ಲಿ ಸೇರಿಸಿ- ಈ ಬೇಡಿಕೆ ಇಟ್ಟದ್ದು ಯಾರಿಗೆ ಗೊತ್ತೇ?
Comments are closed.