Pratap Simha: ಖಡಕ್ ಆಗಿ ಮಾತನಾಡುತ್ತಿದ್ದ ಪ್ರತಾಪ್ ಸಿಂಹ ಗೆ ಖಡಕ್ ಎಚ್ಚರಿಕೆ- ಸೈಲೆಂಟ್ ಆದ ಪ್ರತಾಪ್ ಸಿಂಹ- ಕೊಟ್ಟದ್ದು ಯಾರು ಗೊತ್ತೇ??
Pratap Simha: ಸಂಸದ ಪ್ರತಾಪ್ ಸಿಂಹ ಒಂದಲ್ಲ ಒಂದು ವಿಷಯಗಳಿಂದ ಸುದ್ದಿಯಾಗುತ್ತಲೇ ಇದ್ದಾರೆ. ಕಳೆದ ಒಂದೆರಡು ದಿನಗಳ ಹಿಂದೆಯಷ್ಟೇ ಪ್ರತಾಪ್ ಸಿಂಹ ಅವರು ಹೊಂದಾಣಿಕೆ ರಾಜಕಾರಣದ ಬಗ್ಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ದೊಡ್ಡದಾಗಿಯೇ ಚರ್ಚೆಯಾಗಿತ್ತು. ಪ್ರತಾಪ್ ಸಿಂಹ ಈ ಹೇಳಿಕೆ ಕೊಟ್ಟಿದ್ದು ಯಾರ ಎನ್ನುವ ಮಾತು ಕೇಳಿಬಂದಿತ್ತು.

ಅಷ್ಟಕ್ಕೂ ಪ್ರತಾಪ್ ಸಿಂಹ ತಮ್ಮ ಪಕ್ಷದ ಹಿರಿಯ ಮುಖಂಡರ ಬಗ್ಗೆ ಈ ರೀತಿಯ ಹೇಳಿಕೆ ನೀಡಿದ್ರಾ ಎಂದು ಕೂಡ ಚರ್ಚೆಗಳು ನಡೆದಿದ್ದವು. ಈ ಹೇಳಿಕೆಗೆ ಈಗ ಪ್ರತಾಪ್ ಸಿಂಹ ಅವರಿಗೆ ಒಂದು ಖಡಕ್ ವಾರ್ನಿಂಗ್ ಬಂದಿದೆ.. ಈ ಹೇಳಿಕೆಯನ್ನೇ ತೆಗೆದುಕೊಂಡು ಕಾಂಗ್ರೆಸ್ ನವರು ಹೊಂದಾಣಿಕೆ ರಾಜಕೀಯ ಮಾಡಿದ್ದು ಯಾರು ಎಂದು ಪ್ರತಾಪ್ ಸಿಂಹ ಉತ್ತರ ಕೊಡಬೇಕು ಎಂದಿದ್ದರು. ಇದನ್ನು ಓದಿ..Elon Musk: ದಿಡೀರ್ ಎಂದು ಮೋದಿ ರವರನ್ನು ಭೇಟಿಯಾದ ಬಳಿಕ ಎಲಾನ್ ಮಸ್ಕ್ ಹೇಳಿದ್ದೇನು ಗೊತ್ತೇ??
ಆದರೆ ಈಗ RSS ನಾಯಕರು ಪ್ರತಾಪ್ ಸಿಂಹ ಅವರಿಗೆ ಖಡಕ್ ಆಗಿ, ನೇರವಾಗಿಯೇ ಎಚ್ಚರಿಕೆ ನೀಡಿದ್ದಾರೆ. ವಿಷಯ ಏನೇ ಇದ್ದರೂ ನೇರವಾಗಿ, ಬಹಿರಂಗವಾಗಿ ಮಾತನಾಡಬೇಕು, ನಮ್ಮ ಪಕ್ಷಕ್ಕೆ ಮುಜುಗರ ಆಗುವ ಹಾಗೆ ಮಾಡಿದ್ದು ಸರಿಯಲ್ಲ, ಈ ಥರ ಮಾತನಾಡಬಾರದು ಎಚ್ಚರಿಕೆಯಿಂದ ಇರಬೇಕು ಎಂದು ವಾರ್ನಿಂಗ್ ನೀಡಿದ್ದಾರೆ. ಪ್ರತಾಪ್ ಸಿಂಹ ಅವರು ಕೊಟ್ಟ ಹೇಳಿಕೆ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಹ ಅಸಮಾಧಾನಗೊಂಡಿದ್ದರು.
ಅವರು ಕೂಡ ಪಕ್ಷದಲ್ಲಿ ಗೊಂದಲ ಮೂಡಿಸಿದ್ದು ಸರಿಯಲ್ಲ ಎಂದು ಹೇಳಿದರಂತೆ. ಈ ಹೇಳಿಕೆ ಬಗ್ಗೆ ರಾಜ್ಯದ ಬಿಜೆಪಿ ನಾಯಕರು ಪ್ರತಾಪ್ ಸಿಂಹ ಅವರಿಗೆ ಈ ಸಂದೇಶ ನೀಡಿದ್ದಾರಂತೆ. ಈ ರೀತಿ ರಾಜ್ಯ ನಾಯಕರಿಂದ ಸಂದೇಶ ಬಂದ ನಂತರ ಪ್ರತಾಪ್ ಸಿಂಹ ಅವರು ಮೌನವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..KJ George: ಬಿಟ್ಟಿ ಕರೆಂಟ್ ಘೋಷಣೆಯ ಬೆನ್ನಲ್ಲೇ ಬಿಗ್ ಶಾಕ್ ಕೊಟ್ಟ ಸಚಿವ ಜಾರ್ಜ್- ಉಚಿತ ಎಂದು ಖುಷಿ ಪಡುವವರ ನಡುವೆ, ಜನರಿಗೆ ಏನಾಗಿದೆ ಗೊತ್ತೇ?