Worldcup 2023: ಭಾರತಕ್ಕೆ ಶಾಕ್ ಮೇಲೆ ಶಾಕ್- ಈ ಬಾರಿಯ ವಿಶ್ವಕಪ್ ನಿಂದ ಹೊರಗುಳಿಯುತ್ತಿರುವ ಟಾಪ್ 3 ಆಟಗಾರರು. ಇವರಿಲ್ಲದೆ ಕಪ್ ಕಥೆ ಅಷ್ಟೇನಾ.
Worldcup 2023: ಈ ವರ್ಷ ಓಡಿಐ ವರ್ಲ್ಡ್ ಕಪ್ (Worldcup 2023) 2023 ಪಂದ್ಯಗಳು ಭಾರತದಲ್ಲಿಯೇ ನಡೆಯಲಿದೆ. ಈಗಷ್ಟೇ ಐಸಿಸಿ ವರ್ಲ್ಡ್ ಕಪ್ (Worldcup 2023) ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ವೇಳಾಪಟ್ಟಿ ಬಂದ ನಂತರ ಭಾರತ ತಂಡದಲ್ಲಿ ಪರಿಸ್ಥಿತಿ ಚುರುಕುಕೊಂಡಿದೆ. ಈ ಸಾಲಿನ ವರ್ಲ್ಡ್ ಕಪ್ ಗೆಲ್ಲಬೇಕು ಎನ್ನುವುದು ಎಲ್ಲರ ಕನಸು ಆಗಿದೆ. 11 ವರ್ಷಗಳಿಂದ ಭಾರತ ತಂಡ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ, ಹಾಗಾಗಿ ಈ ಸಾಲಿನ ವರ್ಲ್ಡ್ ಕಪ್ ಗೆಲ್ಲಲೇಬೇಕು ಎನ್ನುವುದು ಬಿಸಿಸಿಐ ಹಾಗೂ ಅಭಿಮಾನಿಗಳ ಆಶಯ ಆಗಿದೆ..
ಆದರೆ ಭಾರತ ತಂಡಕ್ಕೆ ಒಂದಲ್ಲಾ ಒಂದು ಸಮಸ್ಯೆಗಳು ಎದುರಾಗುತ್ತಲೇ ಇದೆ. ಭಾರತ ತಂಡದ ಮೊದಲ ಲಿಸ್ಟ್ ನಲ್ಲಿದ್ದ ಕೆಲವು ಗಾಯಗೊಂಡಿರುವ ಆಟಗಾರರು ಇನ್ನು ಪೂರ್ತಿಯಾಗಿ ಗುಣಮುಖರಾಗಿಲ್ಲ, ಟೂರ್ನಿ ಶುರುವಾಗುವುದಕ್ಕೆ ಇನ್ನು 3ತಿಂಗಳ ಸಮಯವಿದೆ. ಆದರೆ ಆ ವೇಳೆಗೆ ಎಲ್ಲಾ ಆಟಗಾರರು ಹುಷಾರಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ, ಅದರಲ್ಲೂ 3 ಆಟಗಾರರು ಗಾಯದ ಕಾರಣಕ್ಕೆ ತಂಡದಿಂದ ಹೊರಗುಳಿಯಲಿದ್ದಾರೆ. ಆ ಆಟಗಾರರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Ambati Rayudu: ಫುಲ್ ಬಿಲ್ಡ್ ಅಪ್ ಕೊಟ್ಟು ರಾಜಕೀಯ ಎಂಟ್ರಿ ಸಿದ್ಧವಾಗುತ್ತಿರುವ ರಾಯುಡು- ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.
1.ರಿಷಬ್ ಪಂತ್ :- 2022ರ ಅಂತ್ಯದ ವೇಳೆ ರಿಷಬ್ ಪಂತ್ (Rishab pant) ಅವರು ಭೀಕರ ಅಪಘಾತಕ್ಕೆ ಒಳಗಾದರು. ಆಗಿನಿಂದ ಟೀಮ್ ಇಂಡಿಯಾ ಇಂದ ಹೊರಗುಳಿದಿದ್ದ ರಿಷಬ್ ಪಂತ್ ಅವರು ಈಗ NCA ನಲ್ಲಿ ರಿಹ್ಯಾಬ್ ನಡೆಸುತ್ತಿದ್ದಾರೆ. ಇನ್ನು 3 ತಿಂಗಳ ಸಮಯ ಇರುವುದರಿಂದ ರಿಷಬ್ ಪಂತ್ ಅವರು ಅಷ್ಟರ ಒಳಗೆ ಹುಷಾರಾಗಿ ತಂಡಕ್ಕೆ ಮರಳುತ್ತಾರೆ ಎಂದು ಹೇಳಿದ್ದಾರೆ, ಆದರೆ ರಿಷಬ್ ಅವರು ಈಗಷ್ಟೇ ವಾಕಿಂಗ್ ಸ್ಟಿಕ್ ಸಹಾಯವಿಲ್ಲದೆ ನಡೆಯುವುದಕ್ಕೆ ಶುರು ಮಾಡಿದ್ದು, ಅವರು ವರ್ಲ್ಡ್ ಕಪ್ 2023ರಲ್ಲಿ (Worldcup 2023) ಆಡುವುದು ಕಷ್ಟವೇ ಆಗಿದೆ.
2.ಪ್ರಸಿದ್ಧ್ ಕೃಷ್ಣ :- ಇವರು ಕರ್ನಾಟಕದ ಆಟಗಾರ, ಪ್ರಸಿದ್ಧ್ ಕೃಷ್ಣ (Prasiddh Krishna) ಅವರು ಕೂಡ ಗಾಯಗೊಂಡಿದ್ದು, ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹಾಗಾಗಿ ಆರೋಗ್ಯ ಕೈಕೊಟ್ಟು, ಗಾಯವಾಗಿರುವ ಕಾರಣ ಪ್ರಸಿದ್ಧ್ ಕೃಷ್ಣ ಅವರು ಓಡಿಐ ವರ್ಲ್ಡ್ ಕಪ್ 2023ನಲ್ಲಿ (Worldcup 2023) ಪಾಲ್ಗೊಳ್ಳುವುದು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಇವರು ಒಬ್ಬ ಪ್ರತಿಭಾವಂತ ಆಟಗಾರ ಆಗಿದ್ದು, ಕನ್ನಡಿಗ ಕೂಡ ವರ್ಲ್ಡ್ ಕಪ್ ಆಡುವುದನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಇದನ್ನು ಓದಿ..Amazon Prime Day: ಮತ್ತೆ ಬರುತ್ತಿದೆ ಅಮೆಜಾನ್ ಪ್ರೈಮ್ ಡೇ- ಈ ಬಾರಿಯ ಭರ್ಜರಿ ಆಫರ್, ಹೊಸ ವಸ್ತುಗಳು ಮಾರಾಟಕ್ಕೆ. ವಿಶೇಷತೆ, ಡೀಟೇಲ್ಸ್.
3.ಶ್ರೇಯಸ್ ಅಯ್ಯರ್ :- ಇವರು ಕೂಡ ಬೆನ್ನುನೋವಿಗೆ ಗುರಿಯಾಗಿ ಟೀಮ್ ಇಂಡಿಯಾ (Team India) ಇಂದ ಹೊರಗುಳಿದಿದ್ದಾರೆ. ಬೆನ್ನುನೋವಿನಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಆದರೆ ಇವರ ಆರೋಗ್ಯದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇವರು ಟೀಮ್ ಇಂಡಿಯಾಗೆ ವರ್ಲ್ಡ್ ಕಪ್ ಗಾಗಿ ವಾಪಸ್ ಬರುವ ಬಗ್ಗೆ ಯಾವುದೇ ಸೂಚನೆ ಇಲ್ಲದೆ ಇರುವುದು ಇವರು ಕೂಡ ವರ್ಲ್ಡ್ ಕಪ್ (Worldcup 2023) ಮಿಸ್ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Shakti Yojane: ಶಕ್ತಿ ಯೋಜನೆಯ ಶಕ್ತಿ ಬಹಿರಂಗ- ಮಹಿಳೆಯರಿಗೆ ಉಚಿತ ಬಸ್ ನೀಡಿದ್ದಕೆ ಇದುವರೆಗೂ ಖರ್ಚಾದದ್ದು ಎಷ್ಟು ಕೋಟಿ ಗೊತ್ತೇ? ಸಾರಿಗೆ ಬೊಕ್ಕಸ ಉಡೀಸ್.
Comments are closed.