Neer Dose Karnataka
Take a fresh look at your lifestyle.

Shakti Yojane: ಶಕ್ತಿ ಯೋಜನೆಯ ಶಕ್ತಿ ಬಹಿರಂಗ- ಮಹಿಳೆಯರಿಗೆ ಉಚಿತ ಬಸ್ ನೀಡಿದ್ದಕೆ ಇದುವರೆಗೂ ಖರ್ಚಾದದ್ದು ಎಷ್ಟು ಕೋಟಿ ಗೊತ್ತೇ? ಸಾರಿಗೆ ಬೊಕ್ಕಸ ಉಡೀಸ್.

Shakti Yojane: ಕಾಂಗ್ರೆಸ್ ಸರ್ಕಾರ ಚುನಾವಣೆಗಿಂತ ಮೊದಲು ನೀಡಿದ್ದ ಪ್ರಣಾಳಿಕೆಯ ಐದು ಗ್ಯಾರಂಟಿ ಯೋಜನೆಗಳ ಪೈಕಿ ಒಂದೊಂದಾಗಿ ಎಲ್ಲಾ ಯೋಜನೆಗಳನ್ನು ಜಾರಿಗೆ ತರುತ್ತಿದೆ. ರಾಜ್ಯದ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಈಗ ಹೆಚ್ಚಿನ ಸಮಯವನ್ನು ಯೋಜನೆಗಳನ್ನು ಜಾರಿಗೆ ತರುವ ಬಗ್ಗೆಯೇ ನೀಡುತ್ತಿದ್ದಾರೆ. ಈ ಯೋಜನೆಗಳ ಫೈಕಿ ಶಕ್ತಿ ಯೋಜನೆ (Shakti Yojane) ಜೂನ್ 11ರಂದು ರಾಜ್ಯಾದ್ಯಂತ ಜಾರಿಗೆ ಬಂದಿತು.

ಶಕ್ತಿ ಯೋಜನೆಯ (Shakti Yojane) ಅಡಿಯಲ್ಲಿ ರಾಜ್ಯದ ಎಲ್ಲಾ ಮಹಿಳೆಯರು, ರಾಜ್ಯದ ಎಲ್ಲೆಡೆ ಬೇಕಾದರು ಉಚಿತವಾಗಿ ಬಸ್ ಗಳಲ್ಲಿ ಪ್ರಯಾಣ ಮಾಡುವ ಯೋಜನೆ ಇದಾಗಿದೆ. ಶಕ್ತಿ ಯೋಜನೆಗೆ (Shakti Yojane) ಶಕ್ತಿ ಕಾರ್ಡ್ ಮಾಡಿಸಿಕೊಳ್ಳಬೇಕು, ಅದಕ್ಕಾಗಿ 3 ತಿಂಗಳು ಕಾಲಾವಕಾಶ ನೀಡಲಾಗಿದೆ. ಕಾರ್ಡ್ ಮಾಡಿಸುವವರೆಗೂ ಮಹಿಳೆಯರು ಯಾವುದಾದರೂ ಒಂದು ಪ್ರೂಫ್ ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಬಳಸಿ ರಾಜ್ಯದ ಎಲ್ಲೆಡೆ ಬೇಕಾದರೂ ಪ್ರಯಾಣ ಮಾಡಬಹುದು. ಈ ಯೋಜನೆ ಜಾರಿಗೆ ಬರುತ್ತಿದ್ದ ಹಾಗೆಯೇ ಮಹಿಳೆಯರು ಗುಂಪು ಗುಂಪಾಗಿ ಪ್ರಯಾಣ ಮಾಡುವುದಕ್ಕೆ ಶುರು ಮಾಡಿದ್ದಾರೆ. ಇದನ್ನು ಓದಿ..Anna Bhagya Money: ಅಕ್ಕಿ ನಂಬಿಕೊಂಡಿದ್ದವರಿಗೆ ದುಡ್ಡು- ಆದರೆ ಅವರ ಎಲ್ಲವೂ ಕಟ್ ಆಗಿ, ಜನರ ಕೈ ಸೇರುವುದು ಎಷ್ಟು ಗೊತ್ತೇ? ಇಷ್ಟೇನಾ?

ಎಲ್ಲರೂ ತೀರ್ಥಕ್ಷೇತ್ರಗಳು, ದೇವಸ್ಥಾನಗಳು, ಪುಣ್ಯಕ್ಷೇತ್ರಗಳು ಎಲ್ಲಾ ಕಡೆಗಳಿಗೆ ಭೇಟಿ ನೀಡುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪ್ರಯಾಣ ಮಾಡುತ್ತಿರುವುದರಿಂದ ಬಸ್ ಗಳು ತುಂಬಿ ತುಳುಕುತ್ತಿದೆ. ಇದರಿಂದ ಕೆಲವು ಸಾರಿ ತೊಂದರೆ ಸಹ ಸಂಭವಿಸಿದೆ. ಇದೀಗ ಶಕ್ತಿ ಯೋಜನೆ (Shakti Yojane) ಬಗ್ಗೆ ಶಾಕಿಂಗ್ ಮಾಹಿತಿ ಸಿಕ್ಕಿದೆ. ಶಕ್ತಿ ಯೋಜನೆ (Shakti Yojane) ಶುರುವಾದ ಜೂನ್ 11ರಿಂದ ಈಗಿನವರೆಗೂ ಎಷ್ಟು ಮಹಿಳೆಯರು ಪ್ರಯಾಣ ಮಾಡಿದ್ದಾರೆ, ಖರ್ಚಾಗಿರುವ ಹಣ ಎಷ್ಟು ಎನ್ನುವ ಅಂಕಿ ಅಂಶ ಹೊರಬಂದಿದೆ.

ಇದರಿಂದ ಸರ್ಕಾರಕ್ಕೆ ಖರ್ಚಾಗಿರುವ ಹಣ ಎಷ್ಟು ಎಂದು ತಿಳಿದರೆ ನೀವು ಶಾಕ್ ಆಗುತ್ತೀರಿ. ಈಗ ಸಿಕ್ಕಿರುವ ಮಾಹಿತಿ ಪ್ರಕಾರ, ಪ್ರತಿದಿನ KSRTC, NWKRTC, BMTC ಮತ್ತು KKRTC ಈ ನಾಲ್ಕು ನಿಗಮಗಳಲ್ಲಿ ದಿನಕ್ಕೆ 50 ರಿಂದ 60 ಲಕ್ಷ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಈ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
19 ದಿನಗಳಲ್ಲಿ ರಾಜ್ಯಾದ್ಯಂತ ಖರ್ಚಾಗಿರುವುದು ಎಷ್ಟು ಎಂದರೆ, KSRTC ಯಲ್ಲಿ ಪ್ರಯಾಣ ಮಾಡಿರುವ ಒಟ್ಟು ಮಹಿಳೆಯರ ಸಂಖ್ಯೆ 17,97,487, ಮಹಿಳೆಯರ ಪ್ರಯಾಣದ ಟಿಕೆಟ್ ಮೌಲ್ಯ ₹4,88,17,069. ಇದನ್ನು ಓದಿ..Financial tips: ನೀವು ಕೋಟಿಗಟ್ಟಲೆ ಹಣ ಸಂಪಾದನೆ ಮಾಡಬೇಕು ಎಂದರೆ, ಫಾಲೋ ಮಾಡಬೇಕಾದ ಸಲಹೆಗಳು.

BMTC ಯಲ್ಲಿ ಪ್ರಯಾಣ ಮಾಡಿರುವ ಮಹಿಳೆಯರ ಸಂಖ್ಯೆ 19,85,022, ಪ್ರಯಾಣದ ಒಟ್ಟು ಟಿಕೆಟ್‌ ಮೌಲ್ಯ ₹2,52,51,690. NWKRTC ಯಲ್ಲಿ ಪ್ರಯಾಣ ಮಾಡಿರುವ ಒಟ್ಟು ಮಹಿಳೆಯರ ಸಂಖ್ಯೆ 14,61,168, ಒಟ್ಟು ಟಿಕೆಟ್‌ ಮೌಲ್ಯ ₹2,66,22,130. KKRTC ಯಲ್ಲಿ ಪ್ರಯಾಣ ಮಾಡುವ ಒಟ್ಟು ಮಹಿಳೆಯರ ಸಂಖ್ಯೆ 8,34,562, ಒಟ್ಟು ಟಿಕೆಟ್‌ ಮೌಲ್ಯ ₹2,66,22,130. ಜೂನ್ 11 ರಿಂದ ಜೂನ್ 28ರ ವರೆಗು ಈ 4 ನಿಗಮದ ಬಸ್ ಗಳಲ್ಲಿ 9,46,35,508 ಮಹಿಳೆಯರು ಪ್ರಯಾಣ ಮಾಡಿದ್ದಾರೆ, ಇಷ್ಟು ಜನರ ಪ್ರಯಾಣದ ಒಟ್ಟು ಮೊತ್ತ ₹222,00,79,232 ರೂಪಾಯಿ ಆಗಿದೆ ಎಂದು ಸರ್ಕಾರದಿಂದ ಮಾಹಿತಿ ಸಿಕ್ಕಿದೆ. ಇದನ್ನು ಓದಿ..Insta 360: ಸೋಶಿಯಲ್ ಮೀಡಿಯಾ ಗೆ ಅದ್ಭುತ ವಿಡಿಯೋ ಮಾಡಲು ಬಳಸುವ ಈ Insta360 ಕ್ಯಾಮೆರಾ ಬಗ್ಗೆ ಸಂಪೂರ್ಣ ವಿವರ- ಬೆಲೆ, ವಿಶೇಷತೆ ಎಲ್ಲಾ ತಿಳಿಯಿರಿ.

Comments are closed.