Bamul: ಅಂದು ಹೋರಾಟ ಮಾಡಿದ್ದವರು ಇಂದು ಕಣ್ಮರೆ – ಗ್ಯಾಪ್ ನಲ್ಲಿ ರೈತರಿಗೆ ಮತ್ತೊಂದು ಶಾಕ್. ಹಾಲನ್ನೇ ನಂಬಿಕೊಂಡಿದ್ದ ರೈತರಿಗೆ ಏನಾಗಿದೆ ಗೊತ್ತೇ?
Bamul: ನಮ್ಮ ರಾಜ್ಯದಲ್ಲಿ ಹೈನುಗಾರಿಕೆಯನ್ನು ನಂಬಿಕೊಂಡು ಬದುಕುತ್ತಿರುವ ಸಾಕಷ್ಟು ರೈತರಿದ್ದಾರೆ. ಆದರೆ ಈಗ ಬಮೂಲ್ (Bamul) ಸಂಸ್ಥೆ ಇವರಿಗೆ ದೊಡ್ಡ ಶಾಕ್ ಒಂದನ್ನೇ ನೀಡಿದೆ. ಬೇಸಿಗೆ ಇದ್ದ ಕಾರಣ ರೈತರಿಗೆ ಪ್ರತಿ ಲೀಟರ್ ಹಾಲಿಗೆ ನೀಡುತ್ತಿದ್ದ ಬೆಲೆಯಲ್ಲಿ 2.85 ರೂಪಾಯಿ ಕಡಿಮೆ ಮಾಡಲಾಗಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ. ಹೈನುಗಾರಿಗೆ ರೈತರಿಗೆ ಸರ್ಕಾರ ಕೊಡುತ್ತಿದ್ದ ಪ್ರೋತ್ಸಾಹ ಧನ ಕೂಡ ಸಿಕ್ಕಿಲ್ಲ, ಈಗ ಬಮೂಲ್ (Bamul) ಜುಲೈ 1ರಿಂದ ಬೆಲೆ ಇಳಿಕೆ ಮಾಡಿದೆ, ಇದರಿಂದಾಗಿ ರೈತರಿಗೆ ವಿಪರೀತ ಕಷ್ಟವಾಗಿದೆ.

ಬಮೂಲ್ (Bamul) ವ್ಯಾಪ್ತಿಗೆ ಸುಮಾರು 2500 ಡೈರಿಗಳು ಬರುತ್ತದೆ. ಈ ವೇಳೆ ಏಪ್ರಿಲ್ ನಲ್ಲಿ ಹಾಲಿನ ದರ (Milk Price) ಕುಸಿದು, ಪಶು ಆಹಾರದ ಬೆಲೆ ಜಾಸ್ತಿಯಾದ ಕಾರಣ ಹೈನುಗಾರಿಕೆ ಚೆನ್ನಾಗಿ ನಡೆಯಬೇಕು ಎಂದು ಬಮೂಲ್ ಸಂಸ್ಥೆಯ ರೈತರಿಗೆ ಕೊಡುವ ಹಣದಲ್ಲಿ 2.85 ರೂಪಾಯಿ ಪ್ರತಿ ಲೀಟರ್ ಗೆ ಜಾಸ್ತಿ ಮಾಡಿ, 32.85 ರೂಪಾಯಿ ಕೊಡುತ್ತಿತ್ತು. ಆದರೆ ಜುಲೈ 1ರಿಂದ ಈ ಹೆಚ್ಚುವರಿ ಹಣ ನೀಡುವುದನ್ನು ಕಡಿತಗೊಳಿಸಿದೆ. ಹಾಲಿನ ದರ ಜಾಸ್ತಿ ಮಾಡಿ, ರೈತರಿಗೆ ಕೊಡುವ ಹಣವನ್ನು ಬ್ಯಾಲೆನ್ಸ್ ಮಾಡುವ ಪ್ಲಾನ್ ಮಾಡಲಾಗಿತ್ತು.. ಇದನ್ನು ಓದಿ..Railway Jobs: ಹತ್ತನೇ ತರಗತಿ, ITI ಪಾಸ್ ಆಗಿದ್ದರೆ ಸಾಕು- ರೈಲ್ವೆ ಇಲಾಖೆಯಲ್ಲಿ ಕೈತುಂಬಾ ಸಂಬಳದ ಉದ್ಯೋಗಗಳು ಖಾಲಿ. ಅರ್ಜಿ ಹಾಕಿ ಕೆಲಸ ಗಿಟ್ಟಿಸಿಕೊಳ್ಳಿ.
ಮೂರು ತಿಂಗಳ ಹಿಂದೆ ಈ ಯೋಚನೆ ಬಂದರು ಕೂಡ, ಈಗ ಹೊಸ ಸರ್ಕಾರ ಬಂದು ಧಾನ್ಯಗಳ ಬೆಲೆ ಹೆಚ್ಚಾಗಿದೆ, ಇದೇ ವೇಳೆ ಹಾಲಿನ ಬೆಲೆ ಕೂಡ ಹೆಚ್ಚಾದರೆ, ಜನರು ಕೋಪಗೊಳ್ಳುತ್ತಾರೆ ಎಂದು ಹಾಲಿನ ದರವನ್ನು ಜಾಸ್ತಿ ಮಾಡುವ ನಿರ್ಧಾರವನ್ನು ಕೈಬಿಡಲಾಗಿದೆ. ಬಮೂಲ್ (Bamul) ನಲ್ಲಿ ದಿನಕ್ಕೆ 1.64 ಲಕ್ಷ ಲೀಟರ್ ಹಾಲು ಉತ್ಪತ್ತಿ ಆಗುತ್ತದೆ. ಇಲ್ಲಿ ಒಂದು ಲೀಟರ್ ಹಾಲಿಗೆ 2.85 ರೂಪಾಯಿಯನ್ನು ಹೆಚ್ಚಾಗಿ ನೀಡಿದರೆ, ದಿನಕ್ಕೆ 48 ಲಕ್ಷ, ಒಂದು ತಿಂಗಳಿಗೆ 14.48 ಕೋಟಿ ಹಣವನ್ನು ಹೆಚ್ಚುವರಿಯಾಗಿ ಬಮೂಲ್ ಹೈನುಗಾರರಿಗೆ ಜಮೆ ಮಾಡಬೇಕಾಗುತ್ತದೆ.
ಈ ನಷ್ಟ ಆಗುವುದು ಬೇಡ ಎಂದು ಹಣವನ್ನು ಕಮ್ಮಿ ಮಾಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ಇತ್ತ ರೈತರಿಗೆ ಧಾನ್ಯಗಳ ಬೆಲೆ ಹೆಚ್ಚಾಗಿ, ಪಶು ಆಹಾರದ ಬೆಲೆ ಹೆಚ್ಚಾಗಿ, ಅವರಿಗೆ ಕೊಡುವ ಹಣದಲ್ಲಿ ಕಡಿತ ಆಗಿರುವುದು ನುಂಗಲಾರದ ತುತ್ತಿನ ಹಾಗೆ ಆಗಿದ್ದು, ಸರ್ಕಾರ ಮಧ್ಯಕ್ಕೆ ಬಂದು, ಈ ಸಮಸ್ಯೆ ಪರಿಹರಿಸಬೇಕು, ಹಾಲಿನ ದರವನ್ನು ಜಾಸ್ತಿ ಮಾಡಬೇಕು ಎಂದು ಕೇಳಿಕೊಂಡಿದೆ. ರಾಜ್ಯದಲ್ಲಿ ಒಟ್ಟು 17 ಕೆಎಂಎಫ್ (KMF) ಒಕ್ಕೂಟ ಇದೆ. ಆದರೆ ಅವುಗಳ ಪೈಕಿ ಬೆಲೆ ಏರಿಕೆ ಮಾಡುವ ನಿರ್ಧಾರ ಮಾಡಿದ್ದು, ಬಮೂಲ್ ಮಾತ್ರ. ಇದನ್ನು ಓದಿ..Bank Savings: ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಉಳಿಸಿಕೊಳ್ಳಬಹುದು ಗೊತ್ತೇ? ಬ್ಯಾಂಕ್ ನಲ್ಲಿ ಇಷ್ಟು ಹಣ ಇಟ್ಟರೆ ಮಾತ್ರ ಸೇಫ್.
ಆದರೆ ಈಗ ಮೂರು ತಿಂಗಳ ನಂತರ ಬೆಲೆ ಏರಿಕೆಯ ನಿರ್ಧಾರವನ್ನು ವಾಪಸ್ ತೆಗೆದುಕೊಂಡಿರುವುದು ಬೆಂಗಳೂರು ಹಾಗೂ ಹತ್ತಿರದ ಊರುಗಳಲ್ಲಿ ಜನರಿಗೆ ಹಾಲಿನ ದರ ಏರಿಕೆ ಆಗಬಹುದಾದ ಶಾಕ್ ಅನ್ನು ನೀಡಿದೆ. ಒಟ್ಟಿನಲ್ಲಿ ಬಮೂಲ್ (Bamul) ಸಂಸ್ಥೆಯ ಈ ನಿರ್ಧಾರದಿಂದ ರೈತರ ಜೀವನ ಕಷ್ಟದ ಸ್ಥಿತಿಗೆ ತಲುಪಿದ್ದು, ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ನೋಡಬೇಕಿದೆ. ಇದನ್ನು ಓದಿ..Tata Tiago: ನೋಡಲು ಬೆಂಕಿ ಪೊಟ್ಟಣದಂತೆ ಇರುವ ಟಾಟಾ ಟಿಯಾಗೋ ಕಾರು ಆಯಿತು ಪಲ್ಟಿ ಪಲ್ಟಿ- ಒಳಗಿರುವ ಜನರ ಕಥೆ ಏನಾಗಿದೆ ಗೊತ್ತೆ?