Neer Dose Karnataka
Take a fresh look at your lifestyle.

Indian Squad: ವೆಸ್ಟ್ ವಿರುದ್ದದ ಸರಣಿಗೆ ತಂಡವನ್ನು ಆಯ್ಕೆ ಮಾಡಿದ ಸಮಿತಿ- ಅಚ್ಚರಿಯಾಗಿ ಹಲವಾರು ಆಟಗಾರರು ಆಯ್ಕೆ.

Indian Squad: ಟೀಮ್ ಇಂಡಿಯಾ (Team India) ಕ್ರಿಕೆಟ್ ತಂಡವು ಒಂದು ಕಡೆ ಏಕದಿನ ವಿಶ್ವಕಪ್ (ODI World Cup) ಗಾಗಿ ತಯಾರಿ ನಡೆಸುತ್ತಿದ್ದರೆ, ಮತ್ತೊಂದು ಕಡೆ ಈಗ ವೆಸ್ಟ್ ಇಂಡೀಸ್ (West Indies) ವಿರುದ್ಧ ನಡೆಯಲಿರುವ 5 ಟಿ20 ಪಂದ್ಯಗಳ ಸರಣಿಗೆ 15 ಸದಸ್ಯರನ್ನು (Indian Squad) ಒಳಗೊಂಡ ತಂಡವನ್ನು ಬಿಸಿಸಿಐ (BCCI) ಆಯ್ಕೆ ಮಾಡಿದೆ. ಈ ತಂಡದಲ್ಲಿ ಯಾರೆಲ್ಲಾ ಆಯ್ಕೆಯಾಗಿದ್ದಾರೆ ಎನ್ನುವ ಬಗ್ಗೆ ಇಂದು ನಿಮಗೆ ತಿಳಿಸಿಕೊಡುತ್ತೇವೆ.. ಐಪಿಎಲ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಮಿಂಚಿದ್ದ ಇಬ್ಬರು ಆಟಗಾರರಿಗೆ ನ್ಯಾಷನಲ್ ಟೀಮ್ ನಲ್ಲಿ ಮೊದಲ ಅವಕಾಶ ಸಿಕ್ಕಿದೆ..

ಆ ಆಟಗಾಗರು ಯಶಸ್ವಿ ಜೈಸ್ವಾಲ್ (Yashasvi Jaiswal) ಹಾಗು ತಿಲಕ್ ವರ್ಮಾ (Tilak Varma), ಆದರೆ ಅತ್ಯುತ್ತಮ ಪ್ರದರ್ಶನ ನೀಡಿದ್ದ ಕೆಕೆಆರ್ (KKR) ತಂಡದ ಆಟಗಾರ ರಿಂಕು ಸಿಂಗ್ (Rinku Singh) ಅವರಿಗೆ ನ್ಯಾಶನಲ್ ಟೀಮ್ ನಲ್ಲಿ ಅವಕಾಶ ಸಿಕ್ಕಿಲ್ಲ. ಈ ಮಂಗಳವಾರ ಅಜಿತ್ ಅಗರ್ಕರ್ (Ajith Agarkar) ಅವರು ಬಿಸಿಸಿಐ ಆಯ್ಕೆಸಮಿತಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದು, 5 ಜನ ಆಯ್ಕೆಗಾರರ ತಂಡ ರೂಪುಗೊಂಡಿದೆ. ಹೊಸ ಆಯ್ಕೆಸಮಿತಿ ಕೆರೆಬಿಯನ್ ಟಿ20 ಸರಣಿಗೆ ಟೀಮ್ ಇಂಡಿಯಾವನ್ನು (Indian Squad) ಆಯ್ಕೆ ಮಾಡಿದ್ದು, ಕ್ಯಾಪ್ಟನ್ ಆಗಿ ಹಾರ್ದಿಕ್ ಪಾಂಡ್ಯ (Hardik Pandya).. ಇದನ್ನು ಓದಿ..K Sudhakar: ಬಹಿರಂಗ ಸವಾಲು ಎಸೆದ ಕೆ ಸುಧಾಕರ್- ಏನು ಗೊತ್ತೇ?

ವೈಸ್ ಕ್ಯಾಪ್ಟನ್ ಆಗಿ ಸೂರ್ಯಕುಮಾರ್ ಯಾದವ್ (Suryakumar Yadav) ಆಯ್ಕೆಯಾಗಿದ್ದಾರೆ. ಏಕದಿನ ವಿಶ್ವಕಪ್ ಇರುವುದರಿಂದ ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ (Virat Kohli), ಮೊಹಮ್ಮದ್ ಸಿರಾಜ್ (Mohammad Siraj) ಹಾಗೂ ಇನ್ನು ಕೆಲವು ಹಿರಿಯ ಆಟಗಾರರು ಟಿ20 ಇಂದ ಹೊರಗುಳಿದಿದ್ದಾರೆ. ಇನ್ನು ಸಂಜು ಸ್ಯಾಮ್ಸನ್ (Sanju Samson) ಅವರು ಟಿ20 ಪಂದ್ಯಗಳ ಮೂಲಕ ಟೀಮ್ ಇಂಡಿಯಾಗೆ (Indian Squad) ಕಂಬ್ಯಾಕ್ ಮಾಡಿದ್ದಾರೆ. ಹಾಗೆಯೇ ಇಶಾನ್ ಕಿಶನ್ ಅವರು ಕೂಡ ಟಿ20 ಟೂರ್ನಿಯ ಮೂಲಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದಾರೆ.

ಯುವ ಆಟಗಾರರಾದ ಆವೇಶ್ ಖಾನ್ (Avesh Khan) ಹಾಗೂ ರವಿ ಬಿಶ್ನೋಯ್ (Ravi Bishnoi) ಇಬ್ಬರು ಸಹ ನ್ಯಾಷನಲ್ ಟೀಮ್ (Indian Squad) ನಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತ ಆರ್.ಆರ್ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡಿದ ಸ್ಪಿನ್ನರ್ ಯುಜವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಇಬ್ಬರು ಕೂಡ ಟೀಮ್ ಇಂಡಿಯಾದಲ್ಲಿ (Indian Squad) ಸ್ಥಾನ ಪಡೆದಿದ್ದಾರೆ. ಇದನ್ನು ಓದಿ..Worldcup 2023: ಭಾರತ ತಂಡಕ್ಕೆ ಈ ಬಾರಿ ವಿಶ್ವಕಪ್ ಗೆಲ್ಲಿಸಿ ಕೊಡುವ ಇಬ್ಬರು ಕಿಲಾಡಿಗಳನ್ನು ಆಯ್ಕೆ ಮಾಡಿದ ಹರ್ಭಜನ್. ಇವರಿಬ್ಬರೇ ಆ ಕಿಲಾಡಿಗಳು

ವೆಸ್ಟ್ ಇಂಡೀಸ್ ಸರಣಿಗೆ ಆಯ್ಕೆಯಾಗಿರುವ ಟೀಮ್ ಇಂಡಿಯಾ ತಂಡ ಹೀಗಿದೆ… ಶಾನ್ ಕಿಶನ್ (ವಿಕೆಟ್ ಕೀಪರ್), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ವೈಸ್ ಕ್ಯಾಪ್ಟನ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಕ್ಯಾಪ್ಟನ್), ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಲ್, ಕುಲ್‌ ದೀಪ್ ಯಾದವ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಆವೇಶ್ ಖಾನ್, ಮುಖೇಶ್ ಕುಮಾರ್. ಇದನ್ನು ಓದಿ..Tata Tiago: ನೋಡಲು ಬೆಂಕಿ ಪೊಟ್ಟಣದಂತೆ ಇರುವ ಟಾಟಾ ಟಿಯಾಗೋ ಕಾರು ಆಯಿತು ಪಲ್ಟಿ ಪಲ್ಟಿ- ಒಳಗಿರುವ ಜನರ ಕಥೆ ಏನಾಗಿದೆ ಗೊತ್ತೆ?

Comments are closed.