Neer Dose Karnataka
Take a fresh look at your lifestyle.

Sharanya Shetty: ಗಣೇಶ್ ಸಿನೆಮಾಗೆ ಪ್ರಮುಖ ರೋಲ್ ಗೆ ಆಯ್ಕೆಯಾದ ಕಿರುತೆರೆ ನಟಿ ಶರಣ್ಯ ಶೆಟ್ಟಿ- ಇವರ ಹಿನ್ನೆಲೆ, ನಿಜಕ್ಕೂ ಈ ನಟಿ ಯಾರು ಗೊತ್ತೆ?

Sharanya Shetty: ನಟ ಗೋಲ್ಡನ್ ಸ್ಟಾರ್ ಗಣೇಶ್ (Ganesh) ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಹೊಸ ಸಿನಿಮಾ ಬಗ್ಗೆ ಮಾಹಿತಿ ಸಿಕ್ಕಿದೆ. ಗಣೇಶ್ ಅವರ ಈ ಹೊಸ ಸಿನಿಮಾಗೆ ಕೃಷ್ಣಮ್ ಪ್ರಣಯ ಸಖಿ (Krishna Pranaya Sakhi) ಎಂದು ಹೆಸರಿಡಲಾಗಿದ್ದು, ಈ ಸಿನಿಮಾವನ್ನು ದಂಡುಪಾಳ್ಯ ಸಿನಿಮಾ ನಿರ್ದೇಶನ ಮಾಡಿದ್ದ ಶ್ರೀನಿವಾಸ್ ರಾಜು (Srinivas Raju) ಅವರು ನಿರ್ದೇಶನ ಮಾಡಿದ್ದಾರೆ. ಟೈಟಲ್ ಕೇಳಿದರೆ ಇದೊಂದು ಭಾವನಾತ್ಮಕ ಲವ್ ಸ್ಟೋರಿ ಎನ್ನುವುದು ಗೊತ್ತಾಗುತ್ತದೆ.

sharanya shetty got a lead role in ganesh movie
sharanya shetty got a lead role in ganesh movie

ಡೈರೆಕ್ಟರ್ ಶ್ರೀನಿವಾಸ್ ರಾಜು ಅವರು ಮೊದಲ ಸಾರಿ ಆಕ್ಷನ್ ಕ್ರೈಮ್ ಸಿನಿಮಾ ಬಿಟ್ಟು, ಲವ್ ಸ್ಟೋರಿ ನಿರ್ದೇಶನ ಮಾಡುತ್ತಿದ್ದು, ಗಣೇಶ್ ಅವರ ಸಿನಿಮಾ ಎಂದಮೇಲೆ ನಿರೀಕ್ಷೆ ಕೂಡ ಹೆಚ್ಚಾಗಿಯೇ ಇದೆ. ಕೃಷ್ಣಮ್ ಪ್ರಣಯ ಸಖಿ ಸಿನಿಮಾದಲ್ಲಿ ಗಣೇಶ್ ಅವರಿಗೆ ಇಬ್ಬರು ನಾಯಕಿಯರು, ಅವರಲ್ಲಿ ಒಬ್ಬರು ಮಾಳವಿಕಾ ನಾಯರ್ (Malavika Nair).ಇವರು ಮಲಯಾಳಂ ಚಿತ್ರರಂಗದ ನಟಿಯಾಗಿದ್ದು, ಈಗಾಗಲೇ ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.. ಇದನ್ನು ಓದಿ..Driving Tricks: ನೀವು ಹೈವೇ ಗಳಲ್ಲಿ ವಾಹನ ಚಲಾವಣೆ ಮಾಡುವಾಗ ಫಾಲೋ ಮಾಡಬೇಕಾದ ಟ್ರಿಕ್ಸ್ ಗಳು- ಇವುಗಳನ್ನು ಫಾಲೋ ಮಾಡಿ ಬದಲಾವಣೆ ನೋಡಿ.

ಸಿನಿಮಾದಲ್ಲಿ ಇನ್ನೊಬ್ಬರು ನಾಯಕಿಯಾಗಿ ಆಯ್ಕೆ ಆಗಿರುವುದು ನಟಿ ಶರಣ್ಯ ಶೆಟ್ಟಿ (Sharanya Shetty). ಇವರ ಪರಿಚಯ ಈಗಾಗಲೇ ಎಲ್ಲರಿಗೂ ಇದೆ. ಶರಣ್ಯ ಶೆಟ್ಟಿ (Sharanya Shetty) ಅವರು ಈಗಾಗಲೇ ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ಗುರುತಿಸಿಕೊಂಡಿದ್ದಾರೆ. ಇಂಜಿನಿಯರಿಂಗ್ ಮಾಡುವ ಸಮಯದಲ್ಲಿ ಶರಣ್ಯ ಶೆಟ್ಟಿ ಅವರು ಜೀಕನ್ನಡ ವಾಹಿನಿಯ ಟಾಪ್ ಧಾರವಾಹಿ ಗಟ್ಟಿಮೇಳದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆಗ ಓದು ಮತ್ತು ನಟನೆ ಎರಡನ್ನು ಮ್ಯಾನೇಜ್ ಮಾಡುತ್ತಿದ್ದರು ಶರಣ್ಯ.

ಇಂಜಿನಿಯರಿಂಗ್ ಮುಗಿದ ಬಳಿಕ ಈಗ ನಟನೆಯನ್ನು ಫುಲ್ ಟೈಮ್ ಪ್ರೊಫೆಷನ್ ಆಗಿ ತೆಗೆದುಕೊಂಡಿದ್ದಾರೆ. ಶರಣ್ಯ (Sharanya Shetty) ಅವರು ಈಗಾಗಲೇ 1980 ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದು, ಸ್ಪೂಕಿ ಕಾಲೇಜ್, ಹುಟ್ಟುಹಬ್ಬದ ಶುಭಾಶಯಗಳು ಸಿನಿಮಾದಲ್ಲಿ ಸಹ ನಟಿಸಿದ್ದಾರೆ. ಜನರಿಗೆ ಇವರ ಮುಖಪರಿಚಯ ಕೂಡ ಚೆನ್ನಾಗಿಯೇ ಇದೆ. ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ ಹೀರೋಯಿನ್ ಆಗಿ ತೆರೆಹಂಚಿಕೊಳ್ಳುವ ಅವಕಾಶ ಈ ನಟಿಗೆ ಸಿಕ್ಕಿದೆ.. ಇದನ್ನು ಓದಿ..Jackie Chan Daughter: ಮಗಳು ಎಂಬುದನ್ನು ನೋಡದೆ ಖ್ಯಾತ ನಟ ಜಾಕಿ ಚಾನ್ ಕಠಿಣ ನಿರ್ಧಾರ- ಬೀದಿಗೆ ಬಂದ ಮಗಳು- ಬೀದಿ ಬೀದಿ ಅಳೆಯುತ್ತಿದ್ದಾಳೆ.

ಇದು ಶರಣ್ಯ (Sharanya Shetty) ಅವರ ಕೆರಿಯರ್ ನ ದೊಡ್ಡ ಸಿನಿಮಾ ಎಂದು ಹೇಳಬಹುದು. ಗಣೇಶ್ ಅವರೊಡನೆ ತೆರೆಹಂಚಿಕೊಳ್ಳುವುದಕ್ಕೆ ಶರಣ್ಯ (Sharanya Shetty) ಕೂಡ ಉತ್ಸುಕರಾಗಿದ್ದಾರೆ. ಕೃಷ್ಣಮ್ ಪ್ರಣಯ ಸಖಿ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಈ ಸಿನಿಮಾದಲ್ಲಿ ಹಿರಿಯನಟಿ ಸುಧಾರಾಣಿ (Sudharani), ನಟ ಸಾಧುಕೋಕಿಲ (Sadhu Kokila), ಗಿರಿ ಶಿವಣ್ಣ ಹಾಗೂ ಇನ್ನಿತರ ಕಲಾವಿದರು ನಟಿಸಲಿದ್ದಾರೆ. ಇದನ್ನು ಓದಿ..Ankita Amar: ಭಾಗ್ಯಲಕ್ಷಿ ಧಾರಾವಾಹಿಗೆ ದಿಡೀರ್ ಎಂದು ಬಂದಿರುವ ಅಂಕಿತ ರವರು ಪಡೆಯುತ್ತಿರುವ ದಾಖಲೆ ಸಂಭಾವನೆ ಎಷ್ಟು ಗೊತ್ತೇ?

Comments are closed.