Neer Dose Karnataka
Take a fresh look at your lifestyle.

Karnataka News: ಸರ್ಕಾರೀ ಶಾಲೆಗಳ ಅಭಿವೃದ್ಧಿಗೆ ಹಣ ನೀಡಲಿಲ್ಲ, ಅಷ್ಟೇ ಅಲ್ಲ, ಸರ್ಕಾರೀ ಮಕ್ಕಳಿಗೆ ಮತ್ತೊಂದು ಶಾಕ್- ಪೋಷಕರ ಜೋಬಿಗೆ ಕತ್ತರಿ.

Karnataka News: ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಎಂದರೆ, ಅವರು ಬಡ ಕುಟುಂಬದಲ್ಲಿ ಜನಿಸಿದ ಮಕ್ಕಳಾಗಿರುತ್ತಾರೆ, ಅವರ ತಂದೆ ತಾಯಿಗೆ ಹೆಚ್ಚು ಸೌಕರ್ಯ ಇರುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಷ್ಟು ವರ್ಷಗಳ ಕಾಲ ಸರ್ಕಾರವು ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಸಾಕಷ್ಟು ಹೊಸ ಯೋಜನೆಗಳನ್ನು ತಂದಿದೆ. ಉಚಿತ ತಿಂಡಿ ಮತ್ತು ಊಟ ಹಾಗೆಯೇ ಉಚಿತ ಸಮವಸ್ತ್ರ ಇದೆಲ್ಲವನ್ನು ನೀಡುತ್ತಿದೆ. ಆದರೆ ಈಗ ರಾಜ್ಯ ಸರ್ಕಾರ ಬೇರೆಯದೇ ರೀತಿ ಮಾಡಿದೆ. 2023-24ನೇ ವರ್ಷದಲ್ಲಿ ಅಡ್ಮಿಷನ್ ಆಗಿರುವ ಸರ್ಕಾರಿ ಶಾಲೆಯ ಮಕ್ಕಳಿಗೆ ಒಂದು ಜೊತೆ ಸಮವಸ್ತ್ರವನ್ನು ಉಚಿತವಾಗಿ ನೀಡಿದೆ (Karnataka News).

ಇನ್ನು ಒಂದು ಜೊತೆ ಕೊಡಬೇಕು, ಅದಕ್ಕಾಗಿ ಸರ್ಕಾರವು ಸಮವಸ್ತ್ರದ ಬಟ್ಟೆಯನ್ನು ಮಾತ್ರ ಕೊಡಲಿದ್ದು, ಮಕ್ಕಳಿಗೆ ಬಟ್ಟೆ ಹೊಲಿಸಿಕೊಡುವ ಜವಾಬ್ದಾರಿ ತಂದೆ ತಾಯಿಯದ್ದು ಎಂದು ಹೇಳಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿವರೆಗು 45,45,749 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ಮಕ್ಕಳ ತಂದೆತಾಯಿಯೇ ಸಮವಸ್ತ್ರ ಹೊಲಿಸಲು ಹಣ ಖರ್ಚು ಮಾಡಬೇಕಿದ್ದು, ಒಂದು ಜೊತೆಗೆ 600 ಇಂದ 700 ರೂಪಾಯಿ ಖರ್ಚು ಬೀಳುತ್ತದೆ. 2022-23ನೇ ವರ್ಷದಲ್ಲಿ 2ನೇ ಜೊತೆ ಸಮವಸ್ತ್ರವನ್ನು ಸರ್ಕಾರ ನೀಡಿರಲಿಲ್ಲ (Karnataka News)… ಇದನ್ನು ಓದಿ..Mysore Bangalore Expressway: ಕೊನೆಗೂ ಚಾಲಕರಿಗೆ ಬುದ್ದಿ ಕಲಿಸಲು ಮುಂದಾದ ಪೊಲೀಸರು- ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೆ ನಲ್ಲಿ ಬಾರಿ ಬದಲಾವಣೆ ಜನ ಸುಸ್ತೋ ಸುಸ್ತು.

ಈಗ 2023-24ನೇ ಅವಧಿಗೆ ಅದೇ ಸಮವಸ್ತ್ರಗಳನ್ನೇ ನೀಡಲಾಗುತ್ತಿದೆ. ಸಮವಸ್ತ್ರದ ಟೆಂಡರ್ ಅನ್ನು ಮಹಾರಾಷ್ಟ್ರ ಮೂಲದ ಕಂಪನಿ ಪಡೆದಿದೆ, ಈ ಕಂಪನಿ ಬಟ್ಟೆಗಳನ್ನು ಮಾತ್ರ ತಯಾರಿಸಿ ಕೊಡಲಿದ್ದು, ಹೊಲಿಗೆ ಖರ್ಚನ್ನು ಮಕ್ಕಳ ತಂದೆ ತಾಯಿ ನೋಡಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ (Karnataka News). ಮಕ್ಕಳು ವರ್ಷಪೂರ್ತಿ 1 ಜೊತೆ ಸಮವಸ್ತ್ರ ಧರಿಸಿ ಬರಲು ಆಗೋದಿಲ್ಲ, ಬಟ್ಟೆಗಳು ಕ್ಲೀನ್ ಆಗಿರಬೇಕು ಎನ್ನುವ ಕಾರಣಕ್ಕೆ, ಕೆಲವು ವರ್ಷಗಳಿಂದ ಹಿಂದಿನಿಂದ, 2 ಜೊತೆ ಸಮವಸ್ತ್ರವನ್ನು ಸರ್ಕಾರದ ಕಡೆಯಿಂದ ನೀಡಲಾಗುತ್ತಿದೆ.

1 ರಿಂದ 10ನೇ ತರಗತಿ ವಿದ್ಯಾರ್ಥಿಗಳವರೆಗು ವಿದ್ಯಾವಿಕಾಸ್ ಯೋಜನೆಯ ಅಡಿಯಲ್ಲಿ ಸಮವಸ್ತ್ರ ನೀಡಲಾಗುತ್ತಿದೆ. ಆದರೆ 2019-20 ಸಾಲಿನಿಂದ 2ನೇ ಜೊತೆ ಸಮವಸ್ತ್ರ ನೀಡಿಲ್ಲ. 2022-23ರ ವರ್ಷದಲ್ಲಿ ಸಹ ನೀಡಿಲ್ಲ. ಈಗ ಸಮವಸ್ತ್ರದ ಕಂಟ್ರಾಕ್ಟ್ ಟೆಂಡರ್ಮ ಹಾರಾಷ್ಟ್ರದ ಪದಮಚಂದ್‌ ವಿಲಾಪ್‌ ಚಂದ್‌ ಜೈನ್‌ ಎನ್ನುವ ಸಂಸ್ಥೆಗೆ ಸಿಕ್ಕಿದೆ. ಈ ಸಂಸ್ಥೆಯು ತಾಲೂಕು ಮಟ್ಟದ, ಕ್ಷೇತ್ರ ಶಿಕ್ಷಣಾಧಿಕಾರಿ ಸಂಸ್ಥೆಗಳಿಗೆ ಬಟ್ಟೆಯನ್ನು ಸರಬರಾಜು ಮಾಡುತ್ತದೆ (Karnataka News). ಇಲಾಖೆಯ ಅಧಿಕಾರಿಗಳು ಬಟ್ಟೆಗಳನ್ನು ಶಾಲೆಗಳಿಗೆ ವರ್ಗಾವಣೆ ಮಾಡಬೇಕು. ಇದನ್ನು ಓದಿ..Annabhagya: ಅನ್ನಭಾಗ್ಯ ಯೋಜನೆಯಲ್ಲಿ ನಿಜಕ್ಕೂ ಯಾರಿಗೆ ಎಷ್ಟು ಹಣ ಸಿಗಲಿದೆ ಗೊತ್ತೇ? ತೆರೆಮರೆಯಲ್ಲಿ ಇರುವ ಶರತ್ತುಗಳೇನು ಗೊತ್ತೇ?

ಇನ್ನು ಸಮವಸ್ತ್ರದ ಬಣ್ಣ ಯಾವುದು ಎಂದು ಹೇಳುವುದಾದರೆ. ಗಂಡು ಮಕ್ಕಳಿಗೆ ಲೈಟ್ ಬ್ಲೂ ಕಲರ್ ಶರ್ಟ್, ನೇವಿ ಬ್ಲೂ ಕಲರ್ ನಿಕ್ಕರ್, ಹೆಣ್ಣುಮಕ್ಕಳಿಗೆ ಚೂಡಿದಾರ್ ಇರಲಿದ್ದು, 5 ಬಣ್ಣಗಳು ಮಿಕ್ಸ್ ಆಗಿರುವ ಚೆಕ್ಸ್ ಬಟ್ಟೆ, ಇದರಲ್ಲಿ ಹಸಿರು, ಕೆಂಪು, ಬಿಳಿ, ಕಪ್ಪು ಮತ್ತು ಹಳದಿ ಬಣ್ಣ ಇರುತ್ತದೆ. (Karnataka News) ಹಸಿರು ಬಣ್ಣದ ಬಾಟಮ್ ಮತ್ತು ದುಪ್ಪಟ್ಟ ಇರಲಿದೆ. ಇದನ್ನು ಓದಿ..Flipkart Loan: ಅಗತ್ಯ ಬಿದ್ದಾಗ ದಿಡೀರ್ ಎಂದು 30 ಸೆಕೆಂಡ್ ನಲ್ಲಿ ಫ್ಲಿಪ್ ಕಾರ್ಟ್ ಕೊಡುತ್ತಿದೆ 5 ಲಕ್ಷ ಸಾಲ- ಅದು ಹೆಚ್ಚಿನ ದಾಖಲಾತಿ ಇಲ್ಲದೆ. ಹೀಗೆ ಪಡೆಯಿರಿ.

Comments are closed.