Neer Dose Karnataka
Take a fresh look at your lifestyle.

Hardhik Pandya: ಹಾರ್ಧಿಕ್ ಪಾಂಡ್ಯ ಗೆ ಬಿಗ್ ಶಾಕ್- ಮೆರೆಯುತ್ತಿದ್ದ ಪಾಂಡ್ಯಗೆ ನಾಯಕತ್ವ ಕೊಡಲ್ಲ. ಬಿಸಿಸಿಐ ಗಟ್ಟಿ ನಿರ್ಧಾರ.

Hardhik Pandya: ಟೀಮ್ ಇಂಡಿಯದ (Team India) ಪ್ರತಿಭಾನ್ವಿತ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya), 2022ರ ಐಪಿಎಲ್ (IPL) ನಲ್ಲಿ ಗುಜರಾತ್ ಟೈಟನ್ಸ್ (Gujarat Titans) ತಂಡದ ಕ್ಯಾಪ್ಟನ್ ಆಗಿ ಮೊದಲ ಸಾಲಿನಲ್ಲೇ ಕ್ಯಾಪ್ಟನ್ ಆಗಿ ತಮ್ಮ ತಂಡವನ್ನು ಗೆಲ್ಲುವ ಹಾಗೆ ಮಾಡಿದರು. ಜಿಟಿ ತಂಡವು ಐಪಿಎಲ್ ಗೆ ಎಂಟ್ರಿ ಕೊಟ್ಟ ವರ್ಷವೇ ಐಪಿಎಲ್ ಗೆದ್ದಿದೆ. ಇದಾದ ಬಳಿಕ ಹಾರ್ದಿಕ್ ಪಾಂಡ್ಯ (Hardik Pandya) ಮತ್ತೆ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟರು. 2023ರಲ್ಲಿ ಕೂಡ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದರು.

ಇದಾದ ನಂತರ ಹಾರ್ದಿಕ್ ಪಾಂಡ್ಯ (Hardik Pandya) ಮತ್ತೆ ಟೀಮ್ ಇಂಡಿಯಾಗೆ ಬರುವುದು ಕಷ್ಟ ಎನ್ನುವ ಹಾಗಿತ್ತು, ಆದರೆ ಈಗ ಹಾರ್ದಿಕ್ ಪಾಂಡ್ಯ ಅವರು ಈಗ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಓಡಿಐ (Ind vs WI)ಸೀರೀಸ್ ಮೂಲಕ ಮತ್ತೆ ಟೀಮ್ ಇಂಡಿಯಾಗೆ ಬರಲಿದ್ದಾರೆ.. ಹಾಗೆಯೇ ವೆಸ್ಟ್ ಇಂಡೀಸ್ ವಿರುದ್ಧ 5 ಟಿ20 ಪಂದ್ಯಗಳ ಸರಣಿ ಇದ್ದು, ಆ ಸರಣಿಗೆ ಹಾರ್ದಿಕ್ ಪಾಂಡ್ಯ (Hardik Pandya) ಅವರು ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.. ಇದನ್ನು ಓದಿ..HDFC vs SBI Home Loan: ಹೋಮ್ ಲೋನ್ ತೆಗೆದುಕೊಳ್ಳುವಾದ SBI ಅಥವಾ HDFC ಇವೆರಡರಲ್ಲಿ ಬೆಸ್ಟ್ ಯಾವುದು ಗೊತ್ತೇ? ಸಂಪೂರ್ಣ ಡೀಟೇಲ್ಸ್.

ಇದೆಲ್ಲವೂ ನಡೆಯುತ್ತಿರುವ ಬೆನ್ನಲ್ಲೇ, ಬಿಸಿಸಿಐ (BCCI) ಈಗ ಟೀಮ್ ಇಂಡಿಯಾಗೆ ಹೊಸ ಕ್ಯಾಪ್ಟನ್ ಗಾಗಿ ಹುಡುಕಾಟ ನಡೆಸುತ್ತಿದೆ. ಈ ವರ್ಷ ಆಗಸ್ಟ್ 18 ರಿಂದ 21ರವರೆಗು ಭಾರತ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಆದರೆ ಈ ಟಿ20 ಸರಣಿಗೆ ಬಿಸಿಸಿಐ ಇನ್ನು ತಂಡವನ್ನು ಆಯ್ಕೆ ಮಾಡಿಲ್ಲ. ಆದರೆ ಈ ಪ್ರವಾಸದ ವೇಳೆ ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ಶುಬ್ಮನ್ ಗಿಲ್ (Shubman GIll) ಇಬ್ಬರಿಗೂ ಕೂಡ ರೆಸ್ಟ್ ನೀಡಬೇಕು ಎಂದು ಬಿಸಿಸಿಐ ತೀರ್ಮಾನ ಮಾಡಿದೆ.ಆದರೆ ಬಿಸಿಸಿಐ ತೆಗೆದುಕೊಂಡಿರುವ ಈ ನಿರ್ಧಾರದ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿಲ್ಲ.

ಬಿಸಿಸಿಐ ಅಧಿಕಾರಿ ಒಬ್ಬರು ಹೇಳಿರುವ ಹಾಗೆ, ಈ ಬಗ್ಗೆ ಹಾರ್ದಿಕ್ ಪಾಂಡ್ಯ (Hardik Pandya) ಅವರ ಜೊತೆಗೆ ಮಾತುಕತೆ ನಡೆಸಿದ್ದು, ಒಂದು ವೇಳೆ Hardik Pandya ಅವರೊಡನೆ ಮಾತುಕತೆ ಸುಗಮವಾಗಿ ಸಾಗಿದರೆ, ಐರ್ಲೆಂಡ್ ಪ್ರವಾಸಕ್ಕೆ ಹೋಗುವುದಾದರೆ, ಅವರೇ ಕ್ಯಾಪ್ಟನ್ ಆಗಲಿದ್ದಾರೆ. ಈಗ ಬಿಸಿಸಿಐ ನಿರ್ಧಾರ ಏನು ಎಂದರೆ, ಏಷ್ಯಾಕಪ್ ಮತ್ತು ಏಕದಿನ ವರ್ಲ್ಡ್ ಕಪ್ ಇರುವುದರಿಂದ ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ಹಿರಿಯ ಆಟಗಾರರಿಗೆ ವಿಶ್ರಾಂತಿ ಕೊಡಬೇಕು ಎಂದು ತೀರ್ಮಾನ ಮಾಡಿದೆ. ಇದನ್ನು ಓದಿ..Bank Locker Rules: ಬ್ಯಾಂಕ್ ನಲ್ಲಿ ನಿಮ್ಮ ಲಾಕರ್ ಕೀ ಕಳೆದು ಹೋದರೆ ಏನು ಮಾಡಬೇಕು? ಬ್ಯಾಂಕ್ ನ ನಿಯಮಗಳು ಏನು ಹೇಳುತ್ತವೆ ಗೊತ್ತೇ?

ಇನ್ನು ಏಷ್ಯನ್ ಗೇಮ್ಸ್ (Asian Games) ನಲ್ಲಿ ಐರ್ಲೆಂಡ್ ತಂಡಕ್ಕೆ ಪ್ರವಾಸಕ್ಕೆ ಹೋಗುವ ಆಟಗಾರರೇ ಇರಬಹುದು ಎಂದು ಹೇಳಲಾಗುತ್ತಿದೆ. ಇನ್ನು ಐರ್ಲೆಂಡ್ ಪ್ರವಾಸದ ಪಂದ್ಯಗಳಿಗೆ ಋತುರಾಜ್ ಗಾಯಕ್ವಾಡ್ ಅವರು ನಾಯಕನಾಗಬಹುದು ಎಂದು ಹೇಳಲಾಗುತ್ತಿದೆ. ಇಂದು ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ನಲ್ಲಿ ಟೀಮ್ ಇಂಡಿಯಾ ಚೈನಾಗೆ ಹೋಗಲಿದೆ. ಅವರಿಗೆ ಪ್ರಾಕ್ಟಿಸ್ ಗೆ ಸಮಯ ಬೇಕಿರುವುದರಿಂದ ಅದೇ ತಂಡ ತಂಡವನ್ನು ಐರ್ಲೆಂಡ್ ಸೀರೀಸ್ ಗೆ ಆಯ್ಕೆ ಮಾಡಬಹುದು ಎನ್ನಲಾಗಿದೆ. ಇದನ್ನು ಓದಿ..ITR: ನೀವು ಮೊದಲ ಬಾರಿಗೆ ITR ಫೈಲ್ ಮಾಡುತ್ತಿದ್ದರೇ, ಮೊದಲು ಈ ವಿಷಯ ತಿಳಿಯಿರಿ, ನಂತರ ಫೈಲ್ ಮಾಡಿ.

Comments are closed.