Neer Dose Karnataka
Take a fresh look at your lifestyle.

Samantha New Look: ಫುಲ್ ಗೆಟಪ್ ಬದಲಾಯಿಸಿದ ಸಮಂತಾ- ಹೊಸ ಲುಕ್ ಕಂಡು ಅಭಿಮಾನಿಗಳು ಮತ್ತೆ ಮನ ಸೋತರು. ಏನ್ ಅಂದ ಸ್ವಾಮಿ.

Samantha New Look: ಚಿತ್ರರಂಗದಲ್ಲಿ ಹೀರೋಯಿನ್ ಆಗಿ ಸ್ಥಾನ ಪಡೆದು, ದೊಡ್ಡದಾಗಿ ಹೆಸರು ಮಾಡಬೇಕು ಎಂದರೆ ಸಾಕಷ್ಟು ಕಷ್ಟಪಡಬೇಕು. ವಿಭಿನ್ನವಾದ ಲುಕ್ಸ್ ಗಳನ್ನು ಟ್ರೈ ಮಾಡಬೇಕು, ತಮ್ಮ ಇಮೇಜ್ ಮತ್ತು ಹೆಸರು ಎಲ್ಲವನ್ನು ಉಳಿಸಿಕೊಳ್ಳಬೇಕು. ಇದೆಲ್ಲವೂ ಸಾಧ್ಯ ಆಗದೆ ಹೋದರೆ ಹೀರೋಯಿನ್ ಗಳ ಕೆರಿಯರ್ ಹೆಚ್ಚು ವರ್ಷಗಳ ಕಾಲ ಉಳಿಯುವುದಿಲ್ಲ ಎಂದು ಹೇಳಬಹುದು. ಹಾಗಾಗಿ ಎಲ್ಲಾ ಹೀರೋಯಿನ್ ಗಳು ಕೂಡ ತಮ್ಮ ಇಮೇಜ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ (Samantha New Look).

ಇನ್ನು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿ ಇರುವವರು ನಟಿ ಸಮಂತಾ (Samantha). ಈಗ ಇವರು ದಕ್ಷಿಣ ಭಾರತ ಚಿತ್ರರಂಗದ ಬಹಳ ಪಾಪ್ಯುಲರ್ ಆದ ನಟಿ, ಈಗ ಟಾಲಿವುಡ್, ಬಾಲಿವುಡ್ ಎಂದು ಎಲ್ಲಾ ಕಡೆ ಬ್ಯುಸಿ ಆಗಿದ್ದಾರೆ. ಕಳೆದ ವರ್ಷ ಮಯೋಸೈಟಿಸ್ ಆರೋಗ್ಯ ಸಮಸ್ಯೆ ಇಂದ ಬಳಲುತ್ತಿದ್ದ ಸಮಂತಾ ಅವರು ಚೇತರಿಸಿಕೊಂಡು ಮತ್ತೆ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಸಿಟಾಡೆಲ್ ವೆಬ್ ಸೀರೀಸ್ ಮತ್ತು ವಿಜಯ್ ದೇವರಕೊಂಡ ಅವರ ಖುಷಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದನ್ನು ಓದಿ..Loan transfer: ಒಂದು ಬ್ಯಾಂಕ್ ನಿಂದ ಮತ್ತೊಂದು ಬ್ಯಾಂಕ್ ಗೆ ನೀವು ಲೋನ್ ಟ್ರಾನ್ಸ್ ಫರ್ ಮಾಡಿಸಿದರೆ ಲಾಭ ಏನು ಗೊತ್ತೇ? ಪ್ರಯೋಜನದ ಸಂಪೂರ್ಣ ಡೀಟೇಲ್ಸ್.

ಇನ್ನು ಕೆಲವು ಪ್ರಾಜೆಕ್ಟ್ ಗಳನ್ನು ಒಪ್ಪಿಕೊಂಡಿರುವ ಸಮಂತಾ ಅವರು ಇದೀಗ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಒಂದೆರಡು ವರ್ಷಗಳಲ್ಲಿ ಸಮಂತಾ ಅವರ ಲೈಫ್ ನಲ್ಲಿ ಸಾಕಷ್ಟು ಏಳುಬೀಳುಗಳು ನಡೆದಿದೆ. ಅದೆಲ್ಲವನ್ನು ಮೀರಿ ಸಮಂತಾ ಅವರು ಇಂಡಸ್ಟ್ರಿಯಲ್ಲಿ ಒಳ್ಳೆಯ ಹೆಸರನ್ನು ಉಳಿಸಿಕೊಂಡು ಬರುತ್ತಿದ್ದಾರೆ. ಈಗಲೂ ಸಹ ಸ್ಟಾರ್ ಹೀರೋಯಿನ್ ಆಗಿ ಹೆಸರು ಮಾಡುತ್ತಿದ್ದಾರೆ. ಸೆಪ್ಟೆಂಬರ್ ನಲ್ಲಿ ಇವರ ಖುಷಿ ಸಿನಿಮಾ ಬಿಡುಗಡೆ ಆಗಲಿದೆ. ಇದೀಗ ಸಮಂತಾ ಅವರು ಸಿನಿಮಾ ಇಂದ ಬ್ರೇಕ್ ತೆಗೆದುಕೊಂಡು ಅಮೆರಿಕಾಗೆ ಟ್ರೀಟ್ಮೆಂಟ್ ಗಾಗಿ ಹೋಗುತ್ತಿದ್ದಾರೆ ಎನ್ನಲಾಗಿದೆ.

ಅಮೆರಿಕಾಗೆ ಹೋಗುವುದಕ್ಕಿಂತ ಮೊದಲು ಹಲವು ಆಧ್ಯಾತ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇತ್ತೀಚೆಗೆ ಸಮಂತಾ ಅವರ ಹೊಸ ಲುಕ್ (Samantha New Look) ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿದ್ದು, ಸಂಪೂರ್ಣ ಬದಲಾಗಿದ್ದಾರೆ. ಓ ಬೇಬಿ ಸಿನಿಮಾದಲ್ಲಿ ಕಾಣುತ್ತಿದ್ದ ಹಾಗೆ ಕಾಣುತ್ತಿದ್ದಾರೆ ಸಮಂತಾ. ಹೇರ್ ಕಟ್ ಮಾಡಿಸಿ, ಕೂದಲನ್ನು ಕ್ರಾಫ್ ತೆಗೆದು, ಕೂಲ್ ಮತ್ತು ಕ್ಲಾಸಿಕ್ ಲುಕ್ (Samantha New Look) ನಲ್ಲಿ ಕಾಣಿಸಿಕೊಂಡಿದ್ದಾರೆ ಸಮಂತಾ. ಈ ಹೊಸ ವಿಡಿಯೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇದನ್ನು ಓದಿ..Bigg Boss: ಬಿಗ್ ಬಾಸ್ ಮನೆಯ ಹಣದ ದಾಹವನ್ನು ಬಿಚ್ಚಿಟ್ಟ ಖ್ಯಾತ ನಟಿ, ಹಣ ಕೊಟ್ಟ ಎಂಟ್ರಿ ಎಂದು ಸತ್ಯ ಹೇಳಿದ್ದೇನು ಗೊತ್ತೇ?

ಸಮಂತಾ ಅವರು ಬಬ್ಲಿ ಮತ್ತು ಹಾಟ್ ಲುಕ್ (Samantha New Look) ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಟ್ ಆಗಿ ಎಲ್ಲರು ಫಿದಾ ಆಗುವ ಹಾಗೆ ಮಾಡಿರುವ ಸಮಂತಾ ಅವರ ಈ ವಿಡಿಯೋ ಅಪ್ಲೋಡ್ ಆದ ಕೆಲವೇ ಗಂಟೆಗಳಲ್ಲಿ 12ಲಕ್ಶಕ್ಕಿಂತ ಹೆಚ್ಚು ಲೈಕ್ಸ್ ಪಡೆದಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ರಿಯಾಕ್ಟ್ ಮಾಡುತ್ತಿದ್ದಾರೆ. ಸಮಂತ ಅವರು ಈಷಾದಲ್ಲಿ ಇರುವ ಫೋಟೋಗಳು ಕೂಡ ವೈರಲ್ ಆಗಿದೆ. ಇದನ್ನು ಓದಿ..Chanakya Neeti: ಮದುವೆ ಆಗಿ ತಪ್ಪಿಲ್ಲ ಆದರೆ ಅಪ್ಪಿ ತಪ್ಪಿನೂ ಈ ರೀತಿ ಹುಡುಗಿಯನ್ನು ಬೇಡ.

Comments are closed.