Tata Nexon: ಮಾರುಕಟ್ಟೆಯಲ್ಲಿ ಲಾಂಚ್ ಆಯ್ತು ಟಾಟಾ ನೆಕ್ಸನ್ ಕಾರಿನ ಹೊಸ ವೇರಿಯಂಟ್ ಗಳು. ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Tata Nexon: ನಮಸ್ಕಾರ ಸ್ನೇಹಿತರೆ ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಮಾರಾಟ ಆಗುವಂತಹ ಹಾಗೂ ಗ್ರಾಹಕರ ನಂಬಿಕೆಯನ್ನು ಹೊಂದಿರುವಂತಹ ಆಟೋಮೊಬೈಲ್ ಕಂಪನಿಗಳಲ್ಲಿ ಟಾಟಾ ಮೋಟರ್ಸ್(Tata Motors) ಕೂಡ ಒಂದಾಗಿ ಕಾಣಿಸಿಕೊಳ್ಳುತ್ತದೆ. ಇನ್ನು ಇತ್ತೀಚಿಗಷ್ಟೇ ಟಾಟಾ ಮೋಟರ್ಸ್ Tata Nexon Facelift ಕಾರನ್ನು ಲಾಂಚ್ ಮಾಡಿದ್ದು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯುವುದಕ್ಕಾಗಿಯೇ ಇವತ್ತಿನ ಲೇಖನಿಯಲ್ಲಿ ನಿಮಗೆ ಮಾಹಿತಿಯನ್ನು ನೀಡಲು ಹೊರಟಿದ್ದು ಬನ್ನಿ ಇದರ ವೇರಿಯಂಟ್ ಗಳು ಮತ್ತು ಬೆಲೆ ಮತ್ತು ಇನ್ನಿತರ ವಿಶೇಷತೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ.
New Tata Nexon facelift Complete Details – Explained in Kannada by Automobile News Kannada
Tata Nexon Facelift 2023 ಕಾರ್ ಅನ್ನು ಈಗಾಗಲೇ ಅಧಿಕೃತವಾಗಿ ಲಾಂಚ್ ಮಾಡಿದ್ದು ಇದರ ಪೆಟ್ರೋಲ್ ಹಾಗೂ ಡೀಸೆಲ್ ವೇರಿಯಂಟ್ ಗಳು 8 ಲಕ್ಷದಿಂದ 13 ಲಕ್ಷ ರೂಪಾಯಿಗಳವರೆಗೆ ಎಕ್ಸ್ ಶೋರೂಮ್ ಬೆಲೆಯಲ್ಲಿ ನಿಮಗೆ ದೊರಕುತ್ತವೆ. Tata Nexon Facelift ಕಾರಿನ ಎಲೆಕ್ಟ್ರಿಕ್ ವರ್ಷನ್ ಬೆಲೆಯ ಬಗ್ಗೆ ಮಾತನಾಡುವುದಾದರೆ 14.74 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಸಿಗುತ್ತಿದೆ. ಆರು ಕಲರ್ ಆಪ್ಶನ್ ಹಾಗೂ ವಿಭಿನ್ನ ವೇರಿಯಂಟ್ ಗಳಲ್ಲಿ ಕೂಡ ಈ ಕಾರು ನಿಮಗೆ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತದೆ. ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಯ Tata Nexon ಕಾರುಗಳು ನಿಮಗೆ ನಾಲ್ಕು ವೇರಿಯಂಟ್ ಗಳಲ್ಲಿ ಕಾಣಿಸಿಕೊಳ್ಳುತ್ತವೆ.
ಸೆಪ್ಟೆಂಬರ್ ನಾಲ್ಕನೇ ತಾರೀಖಿನಿಂದಲೇ ಟಾಟಾ ಕಂಪನಿ ಕಾರಿನ ಅಡ್ವಾನ್ಸ್ ಬುಕಿಂಗ್ ಆರಂಭ ಮಾಡಿದ್ದು, Tata Nexon ಎಲೆಕ್ಟ್ರಿಕ್ ಕಾರಿನ ಲಾಂಚ್ ಅನ್ನು ಕೂಡ ಅದೇ ಸಂದರ್ಭದಲ್ಲಿ ಮಾಡಲಾಗಿದೆ. Tata Nexon ಹೊಸ ವರ್ಷ 10.25 ಇಂಚುಗಳ ಇಂಫೋಟೈನ್ಮೆಂಟ್ ಟಚ್ ಸ್ಕ್ರೀನ್ ಸಿಸ್ಟಮ್ ಅನ್ನು ಕೂಡ ಹೊಂದಿದೆ. ವಾಯ್ಸ್ ಅಸಿಸ್ಟೆಂಟ್ ಹೊಂದಿರುವ ಸನ್ರೂಫ್, ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಸೇರಿದಂತೆ ಸಾಕಷ್ಟು ತಂತ್ರಜ್ಞಾನಗಳನ್ನು ನೀವು ಕಾಣಬಹುದಾಗಿದೆ. ಎರಡು ವರ್ಷಗಳಿಂದಲೂ ಕೂಡ SUV ಸೆಗ್ಮೆಂಟ್ ನಲ್ಲಿ ಅತ್ಯಂತ ಹೆಚ್ಚು ಮಾರಾಟ ಆಗುವಂತಹ ಕಾರ್ ಆಗಿ Tata Nexon ಕಾಣಿಸಿಕೊಂಡಿದೆ.
ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಆಯಿತು Volvo C40 Recharge ಎಲೆಕ್ಟ್ರಿಕ್ ಕಾರ್. ಬೆಲೆ ಹಾಗೂ ವಿಶೇಷತೆಯ ಮಾಹಿತಿ ಇಲ್ಲಿದೆ ನೋಡಿ. Volvo C40 Recharge
Tata Nexon ಕಾರಿನ ಹೊಸ ವೇರಿಯಂಟ್ ನಲ್ಲಿ ಈ ಬಾರಿ ಸಾಕಷ್ಟು ಒಳ ವಿನ್ಯಾಸಗಳನ್ನು ಕೂಡ ಬದಲಾಯಿಸಲಾಗಿದೆ ಎನ್ನುವುದಾಗಿ ಕೂಡ ತಿಳಿದು ಬಂದಿದೆ. ಅದರಲ್ಲೂ ವಿಶೇಷವಾಗಿ ಸುರಕ್ಷತಾ ವಿಚಾರಕ್ಕೆ ಬಂದರೆ ಆರು ಏರ್ ಬ್ಯಾಗ್ ಗಳನ್ನು ಕಾರಿನಲ್ಲಿ ಅಳವಡಿಸಲಾಗಿರುವುದು ನಿಜಕ್ಕೂ ಕೂಡ ಕಾರನ್ನು ಗ್ರಾಹಕರಿಗೆ ಸುರಕ್ಷಿತವನ್ನಾಗಿ ಮಾಡಿಸುತ್ತದೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದು. Electronic Stability Control ನಂತಹ ಮುಂದುವರೆದ ತಂತ್ರಜ್ಞಾನವನ್ನು ಕೂಡ ನೀವು ಈ ಕಾರಿನಲ್ಲಿ ಗಮನಿಸಬಹುದಾಗಿದೆ. ಎಲ್ಲಕ್ಕಿಂತ ಒಂದು ಹೆಜ್ಜೆ ಸುರಕ್ಷತೆಯ ವಿಚಾರದಲ್ಲಿ ಮುಂದೆ ಹೋಗಿರುವಂತಹ Tata Nexon Facelift ವರ್ಷನ್ ಸೀಟ್ ಬೆಲ್ಟ್ ಗಳಿಗೆ 3 ಪಾಯಿಂಟ್ ಗಳನ್ನು ಅಳವಡಿಸಲಾಗಿದ್ದು ಇದು ಕುಳಿತುಕೊಂಡು ಪ್ರಯಾಣಿಸುವಂತಹ ಪ್ಯಾಸೆಂಜರ್ ಗಳಿಗೆ ಇನ್ನಷ್ಟು ಹೆಚ್ಚಿನ ಸುರಕ್ಷತೆಯನ್ನು ನೀಡುತ್ತದೆ.
2014ರಲ್ಲಿ ಭಾರತದಲ್ಲಿ ಕಾಣಿಸಿಕೊಂಡ Tata Nexon ಕಾರು ಇದುವರೆಗೂ 5 ಲಕ್ಷಕ್ಕೂ ಹೆಚ್ಚಿನ ಯೂನಿಟ್ ಗಳನ್ನು ಮಾರಾಟ ಮಾಡಿರುವುದಾಗಿ ತಿಳಿದು ಬಂದಿದ್ದು ಹೊಸಹೊಸ ವೇರಿಯಂಟ್ ಗಳೊಂದಿಗೆ ಖಂಡಿತವಾಗಿ ಮುಂದಿನ ದಿನಗಳಲ್ಲಿ ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಮಾರಾಟ ಆಗಿರುವಂತಹ ಕಾರುಗಳ ಪೈಕಿಯಲ್ಲಿ ಕಾಣಿಸಿಕೊಂಡರು ಕೂಡ ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲ.
Comments are closed.