Neer Dose Karnataka
Take a fresh look at your lifestyle.

Toyota EV: ಮಾರುಕಟ್ಟೆಯನ್ನು ತಲ್ಲಣ ಗೊಳಿಸಲು ಬರುತ್ತಿದೆ ಹೊಸ ಟೊಯೋಟಾ EV: ಇದರ ರೇಂಜ್ ಕ್ಯಾಪಾಸಿಟಿ ಬಗ್ಗೆ ತಿಳಿಯಿರಿ.

Toyota EV: ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹಾಗೂ ಪೂರೈಕೆ ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಯಾವ ಮಟ್ಟದಲ್ಲಿ ಹೆಚ್ಚಾಗಿದೆ ಎಂಬುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ ಎನ್ನುವುದಾಗಿ ಭಾವಿಸುತ್ತೇವೆ. ಅದರಲ್ಲೂ ವಿಶೇಷವಾಗಿ 2026ರ ಒಳಗಾಗಿ ಖ್ಯಾತ ವಾಹನ ನಿರ್ಮಾಣ ಸಂಸ್ಥೆ ಆಗಿರುವಂತಹ ಟೊಯೋಟಾ(Toyota) ತನ್ನ ಹೊಸ ಎಲೆಕ್ಟ್ರಿಕ್ ವಾಹನವನ್ನು ಮಾರುಕಟ್ಟೆಗೆ ತರುವಂತಹ ಪ್ರಯತ್ನವನ್ನು ನಡೆಸುತ್ತಿದೆ.

ಎಲ್ಲಕ್ಕಿಂತ ಪ್ರಮುಖವಾಗಿ ಬ್ಯಾಟರಿ ಬಳಕೆಯಲ್ಲಿ ಕೂಡ ಸುಧಾರಣೆಯನ್ನು ತರಲು ಹೊರಟಿರುವಂತಹ ಟೊಯೋಟಾ ಸಂಸ್ಥೆ ತನ್ನ ಮುಂದಿನ ಸರಣಿಯ ಎಲೆಕ್ಟ್ರಿಕ್ ಕಾರುಗಳನ್ನು 2026ರಲ್ಲಿ ಬಿಡುಗಡೆ ಮಾಡುವಂತಹ ಯೋಜನೆಯನ್ನು ಹಾಕಿಕೊಂಡಿದ್ದು 40% ಖರ್ಚನ್ನು ಉಳಿತಾಯ ಮಾಡುವ ನಿಟ್ಟಿನಲ್ಲಿ ಗ್ರಾಹಕರಿಗೆ ಒಂದೊಳ್ಳೆ ಉಡುಗೊರೆಯನ್ನು ನೀಡಬೇಕು ಎನ್ನುವುದಾಗಿ ಪ್ಲಾನಿಂಗ್ ಅನ್ನು ಹಾಕಿಕೊಂಡಿದೆ. ಏನಿಲ್ಲವೆಂದರೂ ಸಿಂಗಲ್ ಚಾರ್ಜ್ ನಲ್ಲಿ 800 ಕಿಲೋಮೀಟರ್ಗಳ ರೇಂಜ್ ಅನ್ನು ನೀಡೋ ಪ್ರಯತ್ನದಲ್ಲಿ ಟೊಯೋಟಾ ಸಂಸ್ಥೆ ಇದೆ ಎಂದು ಹೇಳಬಹುದಾಗಿದೆ.

Toyota EV: Future Toyota electric vehicles may have a range of over 1,000 km and a charging time of 10 min.

ಸಾಮಾನ್ಯವಾಗಿ ಒಂದು ಎಲೆಕ್ಟ್ರಿಕ್ ವಾಹನದಲ್ಲಿ(Electric Vehicle) ಅತ್ಯಂತ ಹೆಚ್ಚಾಗಿ ಖರ್ಚು ಮಾಡಬೇಕಾಗಿರುವುದು ಬ್ಯಾಟರಿಗಳ ಮೇಲೆ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರಬಹುದು. ಸದ್ಯಕ್ಕೆ ಎರಡು ವಿಧದ ಬ್ಯಾಟರಿ ಮೇಲೆ ಟೊಯೋಟಾ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಮೊದಲನೇ ಬ್ಯಾಟರಿ ಲಿಥಿಯಂ ಅಯಾನ್ ಬ್ಯಾಟರಿ ಆಗಿದ್ದು ಇದನ್ನು ಕಾರ್ಯಕ್ಷಮತೆಗಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕಂಪನಿ ಯೋಚಿಸುತ್ತಿದೆ ಹಾಗೂ ಎರಡನೇದಾಗಿ ಕಡಿಮೆ ವೆಚ್ಚದಲ್ಲಿ ಸಿಗುವುದಕ್ಕಾಗಿ ಲೀಥಿಯಂ ಐರನ್ ಫಾಸ್ಪೆಟ್ ಬ್ಯಾಟರಿಗಳನ್ನು ಟೊಯೋಟಾ ಸಂಸ್ಥೆ ಮ್ಯಾನುಫ್ಯಾಕ್ಚರ್ ಮಾಡೋದಿಕ್ಕೆ ಹೊರಟಿದೆ.

2027 ರಿಂದ 28ರ ಅವಧಿಯಲ್ಲಿ ಟೊಯೋಟಾ ಸಂಸ್ಥೆ (Toyota EV) ಲೀಥಿಯಂ ಅಯಾನ್ ಹೈ ಪರ್ಫಾರ್ಮೆನ್ಸ್ ಬ್ಯಾಟರಿ ಪ್ಯಾಕ್ ಅನ್ನು ಪರಿಚಯಿಸಲಿದೆ. ಈ ಸುಧಾರಿತ ಬ್ಯಾಟರಿ ತಂತ್ರಜ್ಞಾನದ ಮೂಲಕ ಕಡಿಮೆ ಎಂದರು ಸಿಂಗಲ್ ಚಾರ್ಜ್ ನಲ್ಲಿ 999 ಕಿಲೋಮೀಟರ್ ಅನ್ನು ರೇಂಜ್ ರೂಪದಲ್ಲಿ ಗ್ರಾಹಕರಿಗೆ ನೀಡೋ ಯೋಜನೆಯನ್ನು ಹಾಕಿಕೊಂಡಿದೆ. ವಿಶೇಷ ಎನ್ನುವಂತೆ ಇದರ ಬೆಲೆ ಕೂಡ 10 ಪ್ರತಿಶತ ಕಡಿಮೆ ಆಗಿರಲಿದೆ.

ಇನ್ನು ಟೊಯೋಟಾ ಸಂಸ್ಥೆಯ (Toyota EV) ಬ್ಯಾಟರಿ ಆಯ್ಕೆಯನ್ನು ಗಮನಿಸುವುದಾದರೆ ಲಿಕ್ವಿಡ್ ಬ್ಯಾಟರಿ ಗಿಂತ ಹೆಚ್ಚಾಗಿ ಸಾಲಿಡ್ ಬ್ಯಾಟರಿಗಳು(Solid Batteries) ಸಾಕಷ್ಟು ಪೂರಕವಾಗಿರುತ್ತದೆ ಎಂಬುದಾಗಿ ಭಾವಿಸಿದೆ. ಸಾಲಿಡ್ ಬ್ಯಾಟರಿಗಳು Solid Electrolyte ಗಳನ್ನು ನೀಡುತ್ತವೆ ಎಂಬುದಾಗಿ ಟೊಯೋಟಾ ಸಂಸ್ಥೆ ನಂಬುತ್ತದೆ. ಮೊದಲ ಜನರೇಶನ್ ನ ಸಾಲಿಡ್ ಬ್ಯಾಟರಿಗಳು 1200 ಕಿಲೋಮೀಟರ್ಗಳ ವರೆಗು ಕೂಡ ರೇಂಜ್ ನೀಡಬಹುದಾದ ಸಾಧ್ಯತೆ ಇದೆ. 10 ನಿಮಿಷಗಳಲ್ಲಿ 80 ಪ್ರತಿಶತ ಚಾರ್ಜ್ ಕೂಡ ಆಗಬಹುದು. ಇದಕ್ಕೆ ಹೋಲಿಸಿದರೆ ಲಿಥಿಯಂ ಅಯಾನ್ ಬ್ಯಾಟರಿ 20 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತದೆ.

ಟೊಯೋಟಾ ಸಂಸ್ಥೆ ಇದಕ್ಕಿಂತಲೂ ಕೂಡ ಮಿಗಿಲಾಗಿರುವಂತಹ ಸಾಲಿಡ್ ಬ್ಯಾಟರಿಯನ್ನು ಕೂಡ ಬಿಲ್ಡಪ್ ಮಾಡುವಂತಹ ಹಂತದಲ್ಲಿದೆ ಎಂಬುದಾಗಿ ಕೂಡ ತಿಳಿದುಬಂದಿದ್ದು ಇದು ಇನ್ನಷ್ಟು ಹೆಚ್ಚಿನ ರೇಂಜ್ ಅನ್ನು ತನ್ನ ಎಲೆಕ್ಟ್ರಿಕ್ ವಾಹನಗಳಿಗೆ ನೀಡಲಿದೆ ಎಂಬುದಾಗಿ ತಿಳಿದು ಬಂದಿದೆ. ಟೊಯೋಟಾ ಕಂಪನಿಯ ಇದೆ ಪ್ಲಾನಿಂಗ್ ಅನ್ನು ಈಗ NISSAN ಹಾಗೂ BMW ಕಾರುಗಳಲ್ಲಿ ಕೂಡ 2028ರ ಹೊತ್ತಿಗೆ ನೀವು ಕಾಣಬಹುದಾಗಿದ್ದು ಪ್ರತಿಯೊಂದು ಎಲೆಕ್ಟ್ರಿಕ್ ವಾಹನಗಳು ಕೂಡ ಮಾರುಕಟ್ಟೆಯಲ್ಲಿ ತಮ್ಮ ಅಭಿವೃದ್ಧಿಪಡಿಸಿದ ಕಾರುಗಳನ್ನು ಪ್ರಸ್ತುತಪಡಿಸಲು ಸಾಕಷ್ಟು ಪ್ರಯೋಗಾತ್ಮಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿವೆ ಎಂದು ಹೇಳಬಹುದಾಗಿದೆ.

Toyota ಕಾರುಗಳ ಏರೋ ಡೈನಾಮಿಕ್ ಮುಂದಿನ ದಿನಗಳಲ್ಲಿ ಕಡಿಮೆಯಾಗಲಿದ್ದು, ಬ್ಯಾಟರಿಯ ಎತ್ತರವನ್ನು ಕೂಡ 120 ಮಿ.ಮೀ ಗೆ ಕಡಿತಗೊಳಿಸಲಾಗುತ್ತದೆ. ಒಟ್ಟಾರೆಯಾಗಿ 2030ರ ಒಳಗಾಗಿ TOYOTA BEV 3.5 ಮಿಲಿಯನ್ ಘಟಕಗಳಿಗೆ ವಿಸ್ತರಿಸುವಂತಹ ಯೋಜನೆ ನಡೆದಿದ್ದು ಇದಕ್ಕಾಗಿ 1.7 ಮಿಲಿಯನ್ ಬ್ಯಾಟರಿ ಪ್ಯಾಕ್ ಗಳ ಹೊಸ ಯೂನಿಟ್ ಕೂಡ ತಯಾರಾಗುತ್ತಿದ್ದು ಒಟ್ಟಾರೆಯಾಗಿ ತನ್ನ ಹೊಸ ತಂತ್ರಜ್ಞಾನದ ಜೊತೆಗೆ ಟೊಯೋಟಾ ಸಂಸ್ಥೆ ಎಲೆಕ್ಟ್ರಿಕ್ ವಾಹನಗಳ ಘಟಕದಲ್ಲಿ ಲಾಂಗ್ ರೇಂಜ್ ಹಾಗೂ ಉತ್ತಮ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವಂತಹ ಕಾರುಗಳನ್ನು ಗ್ರಾಹಕರಿಗೆ ನೀಡುವಂತಹ ಯೋಜನೆಯನ್ನು ಹಾಕಿಕೊಂಡಿದ್ದು ಈ ವಿಚಾರದಲ್ಲಿ ಬೇರೆಯೆಲ್ಲಾ ಎಲೆಕ್ಟ್ರಿಕ್ ವಾಹನಗಳನ್ನು ಹಿಂದಿಕ್ಕುವ ನಿಟ್ಟಿನಲ್ಲಿ ಕಾರ್ಯತತ್ಪರವಾಗಿದೆ ಎನ್ನಬಹುದಾಗಿದೆ.

Comments are closed.