Tech News: ಹೆಚ್ಚು ಭಾರತೀಯರು ಬಳಸುತ್ತಿರುವ ಆಪ್ ತೆಗೆದ ಗೂಗಲ್- ನೀವು ಫೋಟೋ ತೆಗೆಯಲು ಈ ಕ್ಯಾಮೆರಾ ಆಪ್ ಬಳಸುತ್ತಿದ್ದರೇ ಈಗಲೇ ಡಿಲೀಟ್ ಮಾಡಿ.
ನಮಸ್ಕಾರ ಸ್ನೇಹಿತರೆ ಸ್ಮಾರ್ಟ್ ಫೋನ್(Smartphone ) ಅನ್ನು ಬಳಸದೆ ಇರುವ ವ್ಯಕ್ತಿಗಳು ಈ ಪ್ರಪಂಚದಲ್ಲಿ ಯಾರಿದ್ದಾರೆ ಹೇಳಿ. ಅದರಲ್ಲಿ ವಿಶೇಷವಾಗಿ ನಾವು ಮಾತನಾಡಲು ಹೊರಟಿರೋದು ಇಂತಹ ಸ್ಮಾರ್ಟ್ ಫೋನ್ ಗಳಲ್ಲಿ ಬಳಸುವಂತಹ ಕೆಲವೊಂದು ಕ್ಯಾಮರಾ ಅಪ್ಲಿಕೇಶನ್ ಗಳ ಬಗ್ಗೆ. ಗೂಗಲ್ ಪ್ಲೇ ಸ್ಟೋರ್ ನಿಯಮಗಳನ್ನು ಪಾಲಿಸಿದೆ ಇರುವ ಕಾರಣಕ್ಕಾಗಿ ಕೆಲವೊಂದು ಕ್ಯಾಮೆರಾ ಅಪ್ಲಿಕೇಶನ್ ಗಳನ್ನು ಇತ್ತೀಚಿಗಷ್ಟೇ ಗೂಗಲ್ ತೆಗೆದು ಹಾಕಿದೆ ಎಂಬುದಾಗಿ ತಿಳಿದು ಬಂದಿದ್ದು ನಿಮ್ಮ ಮೊಬೈಲ್ ನಲ್ಲಿ ಕೂಡ ಈ ಅಪ್ಲಿಕೇಶನ್ ಗಳು ಇದ್ದರೆ ಈಗಲೇ ಡಿಲೀಟ್ ಮಾಡುವುದು ಒಳ್ಳೆಯದು.
ಇದನ್ನು ಕೂಡ ಓದಿ: ಮೊಬೈಲ್ ನಲ್ಲಿಯೇ ಉಚಿತವಾಗಿ ವಿಶ್ವಕಪ್ ವೀಕ್ಷಿಸುವುದು ಹೇಗೆ ಗೊತ್ತೇ? ಇಲ್ಲಿ ನೋಡಿ ಸಂಪೂರ್ಣ ಮಾಹಿತಿ. Watch World cup 2023 Free
Tech News in Kannada- Google removed this camera app from Play store.
ಈ ನಕಲಿ ಅಪ್ಲಿಕೇಶನ್ ಗಳು ನಿಮ್ಮ ಫೋನಿನಿಂದ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕಲಿಯುವಂತಹ ಪ್ರಯತ್ನವನ್ನು ಮಾಡುತ್ತಿವೆ ಎಂಬುದಾಗಿ ಗೂಗಲ್ (Google) ಗುರುತಿಸಿದೆ. ಇದೇ ಕಾರಣಕ್ಕಾಗಿ ಇವುಗಳನ್ನು ಪ್ಲೇ ಸ್ಟೋರ್ ನಿಂದ ತೆಗೆಯುವಂತಹ ಪ್ರಯತ್ನವನ್ನು ಗೂಗಲ್ ಮಾಡುತ್ತಿದ್ದು ಒಂದು ವೇಳೆ ನಿಮ್ಮ ಬಳಿ ಕೂಡ ಈ ಅಪ್ಲಿಕೇಶನ್ ಇದ್ರೆ ಈಗ್ಲೇ ಡಿಲೀಟ್ ಮಾಡುವುದು ಒಳ್ಳೆಯದು. ಹಾಗಿದ್ದರೆ ಬನ್ನಿ ಅಪ್ಲಿಕೇಶನ್ ಗಳು ಯಾವುವು ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಯೋರೋಕೋ ಕ್ಯಾಮೆರಾ ಅಪ್ಲಿಕೇಶನ್, ಸೋಲು ಕ್ಯಾಮೆರಾ ಅಪ್ಲಿಕೇಶನ್, ಲೈಟ್ ಬ್ಯೂಟಿ ಕ್ಯಾಮೆರಾ ಅಪ್ಲಿಕೇಶನ್, beauty college light application, ಬ್ಯೂಟಿ ಅಂಡ್ ಫಿಲ್ಟರ್ ಕ್ಯಾಮೆರಾ ಅಪ್ಲಿಕೇಶನ್, ಫೋಟೋ ಕೊಲಾಜ್ ಅಂಡ್ ಬ್ಯೂಟಿ ಅಪ್ಲಿಕೇಶನ್, ಬ್ಯೂಟಿ ಕ್ಯಾಮೆರಾ ಸೆಲ್ಫಿ ಆಪ್ಲಿಕೇಶನ್, ಗೇಟಿ ಬ್ಯೂಟಿ ಕ್ಯಾಮೆರಾ, ಪಾಂಡ್ ಸೆಲ್ಫಿ ಬ್ಯೂಟಿ ಕ್ಯಾಮೆರಾ, ಕಾರ್ಟೂನ್ ಫೋಟೋ ಎಡಿಟರ್ ಆಪ್ಲಿಕೇಶನ್, ಬೆಂಬು ಸೆಲ್ಫಿ ಬ್ಯೂಟಿ ಕ್ಯಾಮೆರಾ, ಪೀನಟ್ ಸೆಲ್ಫಿ ಬ್ಯೂಟಿ ಕ್ಯಾಮೆರಾ ಅಪ್ಲಿಕೇಶನ್, ಮೂಡ್ ಫೋಟೋ ಎಡಿಟರ್ ಅಪ್ಲಿಕೇಶನ್, rose photo editor application.
ಇಡೀ ಪೋಸ್ಟ್ ಆಫೀಸ್ ನಲ್ಲಿಯೇ ಬೆಸ್ಟ್ ಯೋಜನೆ- 200 ಯಂತೆ ಹೂಡಿಕೆ ಮಾಡಿದರೆ ಲಕ್ಷಗಟ್ಟಲೆ ಹಣವನ್ನು ರಿಟರ್ನ್ ಪಡೆದುಕೊಳ್ಳಿ Post office scheme
ಈ ಸಾಲಿನಲ್ಲಿ ಇನ್ನು ಮುಂದುವರೆಯುತ್ತಾ ಹೋದರೆ ಸೆಲ್ಫಿ ಕ್ಯಾಮೆರಾ ಅಪ್ಲಿಕೇಶನ್, ಸೆಲ್ಫಿ ಬ್ಯೂಟಿ ಕ್ಯಾಮೆರಾ, ಫಸ್ಟ್ ಸೆಲ್ಫಿ ಬ್ಯೂಟಿ ಕ್ಯಾಮೆರಾ, ವನು ಸೆಲ್ಫಿ ಬ್ಯೂಟಿ ಕ್ಯಾಮೆರಾ, Sun Pro Beauty camera, ಫನ್ನಿ ಸ್ವೀಟಿ ಬ್ಯೂಟಿ ಕ್ಯಾಮೆರಾ, ಲಿಟಲ್ ಬಿ ಬ್ಯೂಟಿ ಕ್ಯಾಮೆರಾ, ಬ್ಯೂಟಿ ಕ್ಯಾಮೆರಾ, ಗ್ರಾಸ್ ಬ್ಯೂಟಿ ಕ್ಯಾಮೆರಾ, ಎಲೆ ಬ್ಯೂಟಿ ಕ್ಯಾಮೆರಾ, ಪವರ್ ಬ್ಯೂಟಿ ಕ್ಯಾಮೆರಾ, ಬೆಸ್ಟ್ ಸೆಲ್ಫಿ ಬ್ಯೂಟಿ ಕ್ಯಾಮೆರಾ, ಆರೆಂಜ್ ಕ್ಯಾಮೆರಾ, ಸನ್ನಿ ಬ್ಯೂಟಿ ಕ್ಯಾಮೆರಾ, ಲ್ಯಾಂಡಿ ಸೆಲ್ಫಿ ಬ್ಯೂಟಿ ಕ್ಯಾಮೆರಾ, ನಟ್ ಸೆಲ್ಫಿ ಕ್ಯಾಮೆರಾ, ರೋಸ್ ಫೋಟೋ ಎಡಿಟರ್ ಇದೇ ರೀತಿ ಲಕ್ಷಾಂತರ ಡೌನ್ಲೋಡ್ ಗಳನ್ನು ಹೊಂದಿರುವಂತಹ ಫೋಟೋ ಎಡಿಟಿಂಗ್ ಹಾಗೂ ಫೋಟೋ ಕ್ಯಾಮೆರಾ ಅಪ್ಲಿಕೇಶನ್ಗಳನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದುಹಾಕಿದೆ. (Tech News in Kannada)
ಒಂದು ವೇಳೆ ಈ ಅಪ್ಲಿಕೇಶನ್ ಗಳು ನಿಮ್ಮ ಮೊಬೈಲ್ ನಲ್ಲಿ ಅಥವಾ ನಿಮ್ಮ ಪರಿಚಯದವರ ಮೊಬೈಲ್ ನಲ್ಲಿ ಕೂಡ ಇರುವುದನ್ನು ನೀವು ಕಂಡರೆ ಕೂಡಲೇ ಅದನ್ನು ಡಿಲೀಟ್ ಮಾಡಿಸಿ ಇಲ್ಲವಾದಲ್ಲಿ ನಿಮ್ಮ ಮೊಬೈಲ್ ನಲ್ಲಿ ಇರುವಂತಹ ಪ್ರತಿಯೊಂದು ನಿಮ್ಮ ವಯಕ್ತಿಕ ಮಾಹಿತಿಗಳನ್ನು ಕೂಡ ಅಂತರ್ಜಾಲದಲ್ಲಿ ಲೀಕ್ ಮಾಡುವಂತಹ ಕೆಲಸಗಳನ್ನು ಇವುಗಳು ಮಾಡುತ್ತವೆ ಎಂಬುದನ್ನು ನೀವು ತಿಳಿದುಕೊಳ್ಳಬೇಕಾಗಿರುತ್ತದೆ.
Comments are closed.