Neer Dose Karnataka
Take a fresh look at your lifestyle.

Loan Scheme: ಖರ್ಚಿಗೆ ಕಾಸ್ ಇಲ್ಲ ಎಂದರೆ- ಈ ಯೋಜನೆ ಬಳಸಿ, ದಿಡೀರ್ ಅಂತ 50000 ಪಡೆಯಿರಿ.

Loan: ನಮಸ್ಕಾರ ಸ್ನೇಹಿತರೇ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಸರ್ಕಾರ ಮಹಿಳೆಯರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡುವಂತಹ ಕೆಲಸವನ್ನು ಅವಿರತವಾಗಿ ಮಾಡುತ್ತಿದೆ. ಇನ್ನು ಈ ಬಾರಿ ಮಹಿಳೆಯರಿಗೆ( women) 50,000 ರೂಪಾಯಿಗಳ ಸಹಾಯಧನವನ್ನು (Loan) ನೀಡುವುದಕ್ಕೆ ಹೊರಟಿದ್ದು ಬನ್ನಿ ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ಹೇಳೋದಕ್ಕೆ ಹೊರಟಿದ್ದು ತಪ್ಪದೆ ಲೇಖನಿಯನ್ನು ಕೊನೆವರೆಗೂ ಕೂಡ ಓದುವ ಮೂಲಕ ಮಾಹಿತಿಯನ್ನು ಅರ್ಥ ಮಾಡಿಕೊಳ್ಳಿ.

get-money-up-to-50000 using this loan scheme
get-money-up-to-50000 using this loan scheme

ಯೋಜನೆಯ ಗುರಿ- Loan Scheme Intentions.

ಮಹಿಳೆಯರಿಗೆ ಆರ್ಥಿಕ ಸ್ವಾಾವಲಂಬಿತನವನ್ನು ನೀಡುವ ಉದ್ದೇಶದಲ್ಲಿ ಸರ್ಕಾರ ಈಗಾಗಲೇ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗೆ ವಿಶೇಷವಾಗಿ ಆರ್ಥಿಕ ಸಹಾಯವನ್ನು ನೀಡುವಂತಹ ಕೆಲಸವನ್ನು ಸರ್ಕಾರ ಮಾಡುತ್ತಿದೆ. ತಮಗೆ ಬೇಕಾಗಿರುವಂತಹ ಸ್ವಂತ ಉದ್ಯಮ ಹಾಗೂ ಉದ್ಯೋಗದಲ್ಲಿ ತೊಡಗಿಕೊಳ್ಳುವಂತಹ ಸ್ವಾತಂತ್ರ್ಯವನ್ನು ಕೂಡ ಈ ಆರ್ಥಿಕ ಸಹಾಯದ ಮೂಲಕ ಸರ್ಕಾರ ನೀಡುತ್ತದೆ. ಈ ಯೋಜನೆಯ ಮೂಲಕ ಅಲ್ಪಸಂಖ್ಯಾತ ಮಹಿಳೆಯರು ತಾವು ಈಗಾಗಲೇ ಪ್ರಾವೀಣ್ಯತೆಯನ್ನು ಹೊಂದಿರುವಂತಹ ಕರಕುಶಲ ಕೌಶಲ್ಯ ಸೇರಿದಂತೆ ತಮ್ಮ ಸ್ವಂತ ಉದ್ಯಮಗಳನ್ನು ಇನ್ನಷ್ಟು ಉತ್ತಮವಾಗಿ ಮುಂದುವರಿಸಲು ಕೂಡ ಈ ಸಾಲ ಸೌಲಭ್ಯದ ಮೂಲಕ ಸಹಾಯ ಮಾಡಲಾಗುತ್ತದೆ.

ಮತ್ತಷ್ಟು ಸುದ್ದಿಗಳು- Personal Loan: ದಿಡೀರ್ ಎಂದು ಹಣ ಬೇಕು ಎಂದರೆ ಎರಡು ದಿನದಲ್ಲಿ ಲೋನ್- 25 ಲಕ್ಷ- ಗ್ಯಾರಂಟಿ ಕೇಳುವುದೇ ಇಲ್ಲ.

ಈ ಯೋಜನೆಯ ಲಾಭಗಳು- Loan benefits

ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರ ಮೂಲಕ ಗುಡಿ ಕೈಗಾರಿಕೆಗೆ ಇನ್ನಷ್ಟು ವೇಗವನ್ನು ಈ ಯೋಜನೆಯ ಮೂಲಕ ನೀಡಿದಂತಾಗುತ್ತದೆ. ಎಲ್ಲಕ್ಕಿಂತ ಪ್ರಮುಖವಾಗಿ ಮಹಿಳೆಯರಿಗೆ ಆರ್ಥಿಕ ಬೆಂಬಲವನ್ನು ಈ ಮೂಲಕ ನೀಡಿದರೆ ಖಂಡಿತವಾಗಿ ಆ ಕುಟುಂಬದ ಆದಾಯ ಹೆಚ್ಚಾಗುತ್ತದೆ ಎನ್ನುವುದು ಕೂಡ ಒಂದು ಪ್ರಮುಖ ವಿಚಾರವಾಗಿದೆ. ಇಂತಹ ಮಹಿಳೆಯರ ಸ್ವಂತ ಉದ್ಯಮ ಅಥವಾ ಉದ್ಯೋಗಕ್ಕಾಗಿ ಐವತ್ತು ಸಾವಿರ ರೂಪಾಯಿಗಳವರೆಗು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡುವ ಮೂಲಕ ಆರ್ಥಿಕ ರೂಪದಲ್ಲಿ ಮಹಿಳೆಯರು ಸದೃಢರಾಗಲಿ ಎನ್ನುವ ಕಾರಣಕ್ಕಾಗಿ ಕೂಡ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಯೋಜನೆಯ ನಿಯಮ ಹಾಗೂ ವಿವರಗಳು- Loan details and other details

ಈ ಸಲ ಯೋಜನೆಯಲ್ಲಿ ನೀಡುವಂತಹ ಹಣದ 50 ಪ್ರತಿಶತ ಸಹಾಯಧನ ಎಂಬುದಾಗಿ ಪರಿಗಣಿಸಲಾಗುತ್ತದೆ ಹಾಗೂ ಉಳಿದ 50 ಪ್ರತಿಶತ ಹಣವನ್ನು 36 ತಿಂಗಳುಗಳ ಅವಧಿಯಲ್ಲಿ ಮರುಪಾವತಿ ಮಾಡಬೇಕಾಗಿರುತ್ತದೆ. ಒಂದು ವೇಳೆ ಸಾಧ್ಯವಾಗದೆ ಹೋದಲ್ಲಿ ಈಗಾಗಲೇ ಸಹಾಯಧನ ಎಂದು ಪರಿಗಣಿಸಲಾಗಿರುವ ಹಣವನ್ನು ಕೂಡ ಸಾಲ ರೂಪದ ಹಣ ಎಂಬುದಾಗಿ ಪರಿಗಣಿಸಲಾಗುತ್ತದೆ.

ಇದಕ್ಕಾಗಿರುವಂತಹ ನಿಯಮಗಳ ಬಗ್ಗೆ ಮಾತನಾಡುವುದಾದರೆ ಮಹಿಳೆಯರು ರಾಜ್ಯದ ಅಲ್ಪಸಂಖ್ಯಾತ ಸಮುದಾಯದ ಮೂಲದವರಾಗಿರಬೇಕು ಮತ್ತು ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು. ಕುಟುಂಬದ ಆದಾಯ ವಾರ್ಷಿಕವಾಗಿ 6 ಲಕ್ಷ ರೂಪಾಯಿಗಳಿಗೆ ಹೆಚ್ಚಿರಬಾರದು ಹಾಗೂ ವಯಸ್ಸು 18 ರಿಂದ 55ರ ನಡುವೆ ಇರಬೇಕು. ಬೇರೆ ಯಾವುದೇ ಯೋಜನೆಗಳಿಗೆ ಅರ್ಜಿ ಸಲ್ಲಿಸಿರಬಾರದು ಹಾಗೂ ಫಲಾನುಭವಿಗಳಾಗಿರಬಾರದು. ಕೆ ಎಂ ಡಿ ಸಿ ನಲ್ಲಿ ಸಾಲಗಾರರಾಗಿ ಕೂಡ ಇರಬಾರದು.

ಯೋಜನೆಗೆ ಬೇಕಾಗಿರುವ ಪ್ರಮುಖ ಡಾಕ್ಯುಮೆಂಟ್ಗಳು- Documents required to get a Loan

ಯೋಜನೆಯನ್ನು ಪಡೆಯಲು ಅಧಿಕೃತ ಆನ್ಲೈನ್ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ಲೇಟೆಸ್ಟ್ ಎರಡು ಭಾವಚಿತ್ರಗಳನ್ನು ಕೂಡ ಪಾಸ್ಪೋರ್ಟ್ ಸೈಜ್ ನಲ್ಲಿ ನೀಡಬೇಕು. ನೀವು ಅಲ್ಪಸಂಖ್ಯಾತರು ಎನ್ನುವುದನ್ನು ತಿಳಿಸಲು ಜಾತಿ ಹಾಗೂ ನಿಮ್ಮ ಆದಾಯ ನಿಗದಿತ ನಿಯಮಗಳ ಅಡಿಯಲ್ಲಿ ಇದೆ ಎನ್ನುವುದನ್ನು ತಿಳಿಸಲು ಆದಾಯ ಪ್ರಮಾಣ ಪತ್ರವನ್ನು ಕೂಡ ನೀವು ನೀಡಬೇಕಾಗಿರುತ್ತದೆ. ಯೋಜನಾ ವರದಿಯನ್ನು ಕೂಡ ನೀಡಬೇಕಾಗುತ್ತದೆ ಈ ಮೂಲಕ ನೀವು ನಿಮ್ಮ ಚಿಕ್ಕಪುಟ್ಟ ವ್ಯಾಪಾರಗಳಿಗೆ ಆರ್ಥಿಕ ಸಹಾಯವನ್ನು ಪಡೆದುಕೊಳ್ಳುವುದರ ಮೂಲಕ ಅವುಗಳನ್ನು ದೊಡ್ಡದಾಗಿ ಮಾಡಬಹುದು.

Comments are closed.