Neer Dose Karnataka
Take a fresh look at your lifestyle.

Loan: ಇದಪ್ಪ ಅದೃಷ್ಟ ಅಂದ್ರೆ- ಮಹಿಳೆಯರಿಗೆ ಸಿಗುತ್ತೆ ಸಾಲ- ಬಡ್ಡಿ ಕಡಿಮೆ, ಗ್ಯಾರಂಟಿ ಬೇಡ. ಹೆಂಗಸರ ಕೈಯಲ್ಲಿ ಅರ್ಜಿ ಹಾಕಿಸಿ.

Loan: ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ರಾಜ್ಯದಲ್ಲಿ ಸಾಕಷ್ಟು ಮಹಿಳೆಯರಿಗೆ ಎಂದೇ ರಚಿತವಾಗಿರುವ ಸ್ವಸಹಾಯ ಸಂಘಗಳು ಇವೆ. ಇಂತಹ ಸಂಘ-ಸಂಸ್ಥೆಗಳಿಗೆ ಸರ್ಕಾರದಿಂದ ಸಬ್ಸಿಡಿ ರೂಪದಲ್ಲಿ ಕೂಡ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.

ಈಗಾಗಲೇ ನೋಂದಣಿ ಮಾಡಿಕೊಂಡಿರುವಂತಹ ಸ್ವಸಹಾಯ ಸಂಘಗಳಲ್ಲಿ ಇರುವಂತಹ ಮಹಿಳೆಯರು ಅರ್ಜಿಯನ್ನು ಸಲ್ಲಿಸುವ ಮೂಲಕ ಸರ್ಕಾರದಿಂದ ಸಿಗುತ್ತಿರುವಂತಹ ಈ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಪರಿಶಿಷ್ಟ ವರ್ಗ ಹಾಗೂ ಪಂಗಡಕ್ಕೆ ಸೇರಿರುವಂತಹ ಮಹಿಳೆಯರಿಗೆ ಪ್ರೇರಣ ಯೋಜನೆ(Prerna loan scheme) ಅಡಿಯಲ್ಲಿ ಸಾಲವನ್ನು ನೀಡಲು ಸರ್ಕಾರ ಹೊರಟಿದೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

Detailed Guide to Get Loan
Detailed Guide to Get Loan

ಪ್ರೇರಣ ಸಾಲ ಯೋಜನೆ ಅಡಿಯಲ್ಲಿ ಸಾಲ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು- Eligibility to get a loan

  1. ಸಾಲವನ್ನು ಪಡೆದುಕೊಳ್ಳಲು ಹೊರಟಿರುವಂತಹ ಮಹಿಳೆ ಸ್ವಸಹಾಯ ಸಂಘದ ಸದಸ್ಯರಾಗಿರಬೇಕು ಹಾಗೂ ಕರ್ನಾಟಕದ ಖಾಯಂ ವಾಸಿಯಾಗಿರಬೇಕು.
  2. ಸಾಲವನ್ನು ಪಡೆದುಕೊಳ್ಳಲು ಹೊರಟಿರುವಂತಹ ಸಂಘ ಸಂಸ್ಥೆಗಳ ಒಟ್ಟಾರೆ ಮಹಿಳಾ ಸದಸ್ಯರಲ್ಲಿ ಕನಿಷ್ಠ ಪಕ್ಷ ಹತ್ತು ಜನರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು.
  3. ಇನ್ನು ಯಾವೆಲ್ಲ ವರ್ಗದವರು ಈ ಸಾಲವನ್ನು ಪಡೆದುಕೊಳ್ಳಬಹುದು ಎಂಬುದನ್ನು ನೋಡುವುದಾದರೆ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಸೇರಿದವರು, ಭೋವಿ ಜನಾಂಗ, ಆದಿ ಜಾಂಬವ, ತಾಂಡ, ಸಹಾಯ ಕರ್ಮಚಾರಿ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದಂತಹ ವರ್ಗದ ಜನರು ಈ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ, ಅದರಲ್ಲೂ ವಿಶೇಷವಾಗಿ ಮಹಿಳೆಯರು ಮಾತ್ರ.

ಇದನ್ನು ಕೂಡ ಓದಿ: Personal Loan: ಅರ್ಜೆಂಟ್ ಇದೆ, ಯಾರು ದುಡ್ಡು ಕೊಟ್ಟಿಲ್ಲ ಎಂದಾಗ ಗ್ಯಾರಂಟಿ ಇಲ್ಲದೆ 50000 ಲೋನ್ ಪಡೆಯಿರಿ.

ಈ ಯೋಜನೆಯಿಂದ ಸಿಗುವಂತಹ ಸಾಲ ಸೌಲಭ್ಯ ಎಷ್ಟು?- How much you can get a Loan

ಪ್ರಮುಖವಾಗಿ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ 10 ಪರಿಶಿಷ್ಟ ವರ್ಗದ ಅಥವಾ ಪರಿಶಿಷ್ಟ ಪಂಗಡದ ಮಹಿಳಾ ಸದಸ್ಯರನ್ನು ಹೊಂದಿರುವಂತಹ ಮಹಿಳಾ ಸಂಘಗಳಿಗೆ ಮಾತ್ರ ಪ್ರತಿ ಸದಸ್ಯರಿಗೆ 25,000ಗಳ ರೀತಿಯಲ್ಲಿ ಸಾಲ ಸೌಲಭ್ಯ ದೊರಕುತ್ತದೆ.

ಇದರಲ್ಲಿ ಹದಿನೈದು ಸಾವಿರ ರೂಪಾಯಿಗಳಷ್ಟು ಸಬ್ಸಿಡಿ ಆಗಿರುತ್ತದೆ. ಒಂದು ಸಂಘಕ್ಕೆ ಹೆಚ್ಚೆಂದರೆ 2.50 ಲಕ್ಷ ರೂಪಾಯಿಗಳ ಸಾಲ ದೊರಕುತ್ತದೆ. 30 ಕಂತುಗಳಲ್ಲಿ ಕಟ್ಟುವಂತಹ ಅವಕಾಶವನ್ನು ನೀಡಲಾಗುತ್ತದೆ ಹಾಗೂ ಬಡ್ಡಿದರ ಕೇವಲ ವಾರ್ಷಿಕ 4 ಪ್ರತಿಶತ ಮಾತ್ರ ಇರುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?- How to apply for a Loan

  1. ಸಣ್ಣರೂಪದ ಸಾಲ ಯೋಜನೆ ಆಗಿರುವಂತಹ ಪ್ರೇರಣ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳಲು ಸೇವಾ ಸಿಂಧು ಪೋರ್ಟಲ್ ಅನ್ನು ನೀವು ಉಪಯೋಗಿಸಿಕೊಳ್ಳಬಹುದಾಗಿದೆ.
  2. ಆನ್ಲೈನ್ ಮಾತ್ರವಲ್ಲದೇ ಆಫ್ಲೈನ್ ವಿಚಾರಕ್ಕೆ ಬರೋದಾದ್ರೆ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ವನ್ ನಲ್ಲಿ ಕೂಡ ನೀವು ಅರ್ಜಿ ಸಲ್ಲಿಸುವ ಮೂಲಕ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಸಾಲವನ್ನು ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ ಗಳು- Required Documents to get a Loan

  1. ಪ್ರಮುಖವಾಗಿ ಸಂಘದ ಎಲ್ಲಾ ಸದಸ್ಯರ ಭಾವಚಿತ್ರ ಬೇಕಾಗಿರುತ್ತದೆ .
  2. ಮಹಿಳಾ ಸಂಘದ ಸದಸ್ಯರ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ ಬೇಕಾಗಿರುತ್ತದೆ.
  3. ಅಡ್ರೆಸ್ ಪ್ರೂಫ್ ಹಾಗೂ ಐಡೆಂಟಿಟಿ ಪ್ರೂಫ್ ಗಾಗಿ ಆಧಾರ್ ಕಾರ್ಡ್ ಜೆರಾಕ್ಸ್ ಅನ್ನು ನೀಡಬೇಕಾಗಿರುತ್ತದೆ.
  4. ನಿಮ್ಮ ಸಂಘದ ಪಾಸ್ ಬುಕ್ ಹಾಗೂ ನೋಂದಣಿಯ ವಿವರವನ್ನು ಕೂಡ ಈ ಸಂದರ್ಭದಲ್ಲಿ ನೀಡಬೇಕಾಗಿರುತ್ತದೆ.

ಇನ್ನು ಈ ಯೋಜನೆಗೆ ಅರ್ಜಿ ಸಲ್ಲಿಸಲು ನವೆಂಬರ್ 29 ಕೊನೆಯ ದಿನಾಂಕ ವಾಗಿರುತ್ತದೆ ಎಂಬುದನ್ನು ಕೂಡ ನೆನಪಿನಲ್ಲಿಟ್ಟುಕೊಳ್ಳಿ.

Comments are closed.