Neer Dose Karnataka
Take a fresh look at your lifestyle.

ಪ್ರತಿ ಬಾರಿಯೂ ಬ್ಯಾಟಿಂಗ್ ನಲ್ಲಿ ವಿಫಲವಾಗುತ್ತಿರುವ ರಾಹುಲ್ ರವರಿಗೆ ಈ ಬಾರಿ ಕಂಡು ಕೇಳರಿಯದ ಶಾಕ್?? ಏನಾಗುತ್ತಿದೆ ಗೊತ್ತೇ??

ಕರ್ನಾಟಕದ ಹುಡುಗ ಕೆ.ಎಲ್.ರಾಹುಲ್ ಅವರು ಅತ್ಯುತ್ತಮ ಬ್ಯಾಟ್ಸ್ಮನ್ ಆಗಿ ಗುರುತಿಸಿಕೊಂಡಿದ್ದವರು, ಆದರೆ ಈಗ ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸುತ್ತಿದ್ದು, ವೃತ್ತಿ ಜೇವನದಲ್ಲಿ ಬಹಳ ಕೆಟ್ಟ ಸಮಯ ಅನುಭವಿಸುತ್ತಿದ್ದಾರೆ. ರಾಹುಲ್ ಅವರು ಇಂಜುರಿ ಇಂದ ಚೇತರಿಸಿಕೊಂಡು ಭಾರತಕ್ಕೆ ಕಂಬ್ಯಾಕ್ ಮಾಡಿದ ನಂತರ ಸತತವಾಗಿ ವೈಫಲ್ಯ ಅನುಭವಿಸುತ್ತಿದ್ದಾರೆ. ಕಳೆದ ವರ್ಷ ವಿಶ್ವಕಪ್ ನಲ್ಲಿ ಇವರ ಪ್ರದರ್ಶನ ಚೆನ್ನಾಗಿರಲಿಲ್ಲ, ಬಳಿಕ ಬಿಗ್ ಬ್ರೇಕ್ ತೆಗೆದುಕೊಂಡು ಜಿಂಬಾಬ್ವೆ ವಿರುದ್ಧದ ಸೀರೀಸ್ ಮೂಲಕ ಕಂಬ್ಯಾಕ್ ಮಾಡಿ ವೈಫಲ್ಯ ಅನುಭವಿಸಿದರು. ಏಷ್ಯಾಕಪ್ ಸೀರಿಸ್ ನಲ್ಲಿ ಕೂಡ ಇದೇ ಮುಂದುವರೆಯಿತು.

ವಿಶ್ವಕಪ್ ನಲ್ಲಿ ರಾಹುಲ್ ಅವರು ಫಾರ್ಮ್ ಕಂಡುಕೊಳ್ಳುತ್ತಾರೆ ಎಂದು ಆಯ್ಕೆ ಮಾಡಲಾಯಿತು. ಆದರೆ, ರಾಹುಲ್ ಅವರು ಮತ್ತೆ ವೈಫಲ್ಯ ಅನುಭವಿಸುತ್ತಿದ್ದಾರೆ. ಇವರನ್ನು ವಿಶ್ವಕಪ್ ಗೆ ಆಯ್ಕೆ ಮಾಡಿಕೊಂಡಾಗಲೇ, ಕ್ರಿಕೆಟ್ ಅಭಿಮಾನಿಗಳು ಕೆ.ಎಲ್.ರಾಹುಲ್ ಅವರನ್ನು ದೂರ ಇಡುವುದೇ ಒಳ್ಳೆಯದು ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಕೇವಲ 4 ರನ್ ಗಳಿಸಿ, ನಸೀಮ್ ಶಾ ಅವರ ಎಸೆತಕ್ಕೆ ಔಟ್ ಆದ ರಾಹುಲ್ ಅವರು, ನೆದರ್ಲ್ಯಾನ್ಡ್ ವಿರುದ್ಧ ನಡೆದ 2ನೇ ಪಂದ್ಯದಲ್ಲಿ 9 ರನ್ ಗಳಿಸಿ ಔಟ್ ಆಗಿದ್ದರು. ಎರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣ ನೆಟ್ಟಿಗರು ಕೆ.ಎಲ್.ರಾಹುಲ್ ಅವರನ್ನು ತೀವ್ರವಾಗಿ ಟ್ರೋಲ್ ಮಾಡಿ, ಮೀಮ್ಸ್ ಮಾಡಿ, ಟೀಕೆ ಮಾಡಿದ್ದರು. ಭಾರತ ಟ್ಯಾಂಡಡ್ ಬ್ಯಾಟಿಂಗ್ ಕೋಚ್ ಸಹ ಕೆ.ಎಲ್.ರಾಹುಲ್ ಅವರ ಪರವಾಗಿ ಮಾತನ್ನಾಡಿ, ಒಬ್ಬ ಆಟಗಾರ ಒಂದೆರಡು ಇನ್ನಿಂಗ್ಸ್ ನಲ್ಲಿ ಕಡಿಮೆ ರನ್ ಗಳಿಸಿ ಔಟ್ ಆದರು ಎಂದು ಅವರನ್ನು ಬಿಟ್ಟುಬಿಡಲು ಆಗುವುದಿಲ್ಲ ಎಂದರು.

ನಿನ್ನೆ ನಡೆದ ಮೂರನೇ ಪಂದ್ಯದಲ್ಲಿ ಸಹ ಇದೇ ರಿಪೀಟ್ ಆಗಿದೆ. ಕೆ.ಎಲ್.ರಾಹುಲ್ ಅವರು ನಿನ್ನೆಯ ಪಂದ್ಯದಲ್ಲಿ ಸ್ವಲ್ಪ ನಿಧಾನವಾಗಿ ಸಮಯ ತೆಗೆದುಕೊಂಡು ಎಚ್ಚರಿಕೆಯಿಂದ ಆಟವಾಡಲು ಶುರು ಮಾಡಿದರು, ಮೊದಲ ಎರಡು ಓವರ್ ಗಳು ಕಾದು, 3ನೇ ಓವರ್ ನಲ್ಲಿ ಸಿಕ್ಸರ್ ಭಾರಿಸುವ ಮೂಲಕ ಖಾತೆ ಶುರು ಮಾಡಿದರು, ಆದರೆ 9 ರನ್ ಗಳಿಸಿ 5ನೇ ಓವರ್ ನಲ್ಲಿ ಲುಂಗಿ ಎನ್ ಗಿಡಿ ಅವರ ಬೌಲಿಂಗ್ ಗೆ ಔಟ್ ಆದರು. ಪದೇ ಪದೇ ರಾಹುಲ್ ಅವರು ವೈಫಲ್ಯ ಅನುಭವಿಸುತ್ತಿರುವುದರಿಂದ ನೆಟ್ಟಿಗರು, ರಾಹುಲ್ ಅವರನ್ನು ಓಪನರ್ ಆಗಿ ತೆಗೆದುಕೊಳ್ಳಬೇಡಿ ಎನ್ನುತ್ತಿದ್ದಾರೆ, ರಾಹುಲ್ ಅವರನ್ನು ಓಪನರ್ ಆಗಿ ತೆಗೆದುಕೊಂಡು ಅವರಿಂದ ನಮಗೆ ತುಂಬಾ ನೋವಾಗಿದೆ, ರಾಹುಲ್ ಅವರನ್ನು ತೆಗೆದುಕೊಳ್ಳುವುದು ಬೇಡ ಎಂದು ಅಭಿಮಾನಿಗಳು ಟ್ವೀಟ್ ಮೂಲಕ ಒತ್ತಾಯ ಮಾಡುತ್ತಿದ್ದಾರೆ.

Comments are closed.