Neer Dose Karnataka
Take a fresh look at your lifestyle.

K Sudhakar: ಬಹಿರಂಗ ಸವಾಲು ಎಸೆದ ಕೆ ಸುಧಾಕರ್- ಏನು ಗೊತ್ತೇ?

K Sudhakar: ಬಿಜೆಪಿ (BJP) ಪಕ್ಷದವರಾಗಿರುವ ಮಾಜಿ ಮಿನಿಸ್ಟರ್ ಡಾ. ಕೆ ಸುಧಾಕರ್ (K Sudhakar) ಅವರು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾಗಿದ್ದರು.ಇದೀಗ ಇವರ ಕೆಲಸಕ್ಕೆದ ಬಗ್ಗೆ ಬೇರೆ ರೀತಿಯ ಮಾತುಗಳು ಕೇಳಿಬರುತ್ತಿರುವುದರಿಂದ ಸುಧಾಕರ್ (K Sudhakar) ಅವರು ಈಗ ಬಿಜೆಪಿ ಪಕ್ಷಕ್ಕೆ ಬಹಿರಂಗವಾಗಿ ಸವಾಲು ಹಾಕಿದ್ದಾರೆ. ಇವರು ಹೇಳಿದ್ದೇನು ಎಂದು ತಿಳಿಸುತ್ತೇವೆ ನೋಡಿ.. ಸುಧಾಕರ್ (K Sudhakar) ಅವರು ಹೇಳಿದ್ದು ಹೀಗೆ.. “ನಾನು 20 ಸಾವಿರ ನಿವೇಶನಗಳಿಗೆ ಭೂಮಿ ಮಂಜೂರು ಮಾಡಿಸಿದ್ದೇನ, ಇದರ ಬಗ್ಗೆ ನಾನು ಭೋಗ ನಂದೀಶ್ವರ ದೇವಸ್ಥಾನದಲ್ಲಿ ಪ್ರಮಾಣ ಕೂಡ ಮಾಡ್ತೀನಿ. ನಾನು ಈ ಕೆಲಸವನ್ನೇ ಮಾಡಿಲ್ಲ ಎಂದರೆ..

ಈಗಿರುವ ಶಾಸಕರು ಸಹ ಪ್ರಮಾಣ ಮಾಡಲಿ..” ಎಂದು ಕಾಂಗ್ರೆಸ್ ಗೆ ಸವಾಲು ಹಾಕಿದ್ದಾರೆ ಸುಧಾಕರ್ ಅವರು. “ಈಗಿರುವ ಹೊಸ ಶಾಸಕರು, ವಸತಿ ನಿವೇಶನ ವಿಚಾರದ ಕುರಿತು, ಸುಳ್ಳು ಸುಬ್ಬಿ ಹಬ್ಬಿಸುವುದಕ್ಕೆ ಶುರು ಮಾಡಿದ್ದಾರೆ. ಇವರು ಗೆದ್ದ ನಂತರ ಕ್ಷೇತ್ರದ ಅಭಿವೃದ್ಧಿ ಮಾಡುತ್ತಾರೆ ಅಂದುಕೊಂಡಿದ್ವಿ, ಆದರೆ ಈಗ ಸುಳ್ಳೇ ಅವರ ಮನೆದೇವರು ಎನ್ನುವ ಹಾಗೆ ನಿವೇಶನದ ವಿಷಯದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಜನರು ಮನೆ ಪಡೆಯುವ ಆಸೆಗೆ ಇವರು ತಣ್ಣೀರು ಎರಚಿದ್ದಾರೆ. ನಾನು ಜನರಿಗೆ ಗೊತ್ತಿರುವ ಯೋಜನೆಗಳನ್ನು ತಂದಿದ್ದೇನೆ.. ಇದನ್ನು ಓದಿ..Shakti Yojane: ಬಹಳ ಸುಲಭವಾಗಿ ಶಕ್ತಿ ಉಚಿತ ಪಾಸ್ ಗೆ ಮೊಬೈಲ್ ಅಥವಾ ಕಂಪ್ಯೂಟರ್ ನಿಂದ ಅರ್ಜಿ ಸಲ್ಲಿಸಿ.

ಕಣ್ಣಿಗೆ ಕಾಣಿಸದೆ ಇರುವ ಯೋಜನೆಗಳನ್ನು ತಂದಿಲ್ಲ. ಇಲ್ಲಿಯವರೆಗೂ ನಮ್ಮ ರಾಜ್ಯದಲ್ಲಿ ಒಂದೇ ಕಡೆ 20 ಸಾವಿರ ನಿವೇಶನಗಳನ್ನು ಹಂಚುವ ಕೆಲಸಯನ್ನು ಬೇರೆ ಯಾವ ಶಾಸಕ ಕೂಡ ಮಾಡಿಲ್ಲ. 555 ಎಕರೆ ಜಾಗ ಜನರ ಹೆಸರಿಗೆ ಮಂಜೂರಾಗಿದೆ, ಗ್ರಾಮಸಭೆ ನಡೆಸಿ ನಾನೇ ಫಲಾನುಭವಿಗಳ ಆಯ್ಕೆ ಮಾಡಿದ್ದೇನೆ. ಹಕ್ಕು ಪತ್ರ ಹಾಗೂ ಮಂಜೂರಾತಿ ಪತ್ರದ ಬಗ್ಗೆ ಈಗಿರುವ ಶಾಸಕರಿಗೆ ಗೊತ್ತಿಲ್ಲ. ಸಿನಿಮಾ ಡೈಲಾಗ್ ಹೇಳೋದ್ರಿಂದ ರಾಜಕೀಯ ಮಾಡೋಕಾಗಲ್ಲ, ಜನ ಯಾವಾಗಲೂ ಯಾಮಾರೋದಿಲ್ಲ..

ನಮ್ಮ ಕ್ಷೇತ್ರದ ಜನರಿಗೆ ಮೋಸ ಮಾಡುವ ಸ್ಥಿತಿಗೆ ನಾನಿನ್ನು ಹೋಗಿಲ್ಲ, ನಾನು ನಿವೇಶನ ಮಾಡಿಲ್ಲ ಎಂದರೆ, ಭೋಗ ನಂದೀಶ್ವರ ದೇವಸ್ಥಾನದಲ್ಲಿ, ದೀಪ ಹಚ್ಚಿ ಪ್ರಮಾಣ ಮಾಡುವುದಕ್ಕೆ ಸಿದ್ಧವಾಗಿದ್ದೇನೆ. ನಾನು ಮಾಡಿಲ್ಲ ಎಂದರೆ ಈಗಿನ ಶಾಸಕರು ಕೂಡ ಪ್ರಮಾಣ ಮಾಡಲಿ. HN ವ್ಯಾಲಿ ಯೋಜನೆಯಲ್ಲಿ 3ನೇ ಹಂತದ ಸಂಸ್ಕರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಎತ್ತಿನ ಹೊಳೆ ಯೋಜನೆ, ನಂದಿ ಬೆಟ್ಟ ರೋಪ್ ವೇ, ನಂದಿ ಮೆಡಿಕಲ್ ಕಾಲೇಜ್ ಬಿಲ್ಡಿಂಗ್ ಕೆಲಸ ಇದೆಲ್ಲದಕ್ಕೂ ಬಜೆಟ್ ನಲ್ಲಿ ಸ್ಥಾನ ಸಿಗಬೇಕು. ಈ ಕೆಲಸಗಳನ್ನು ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮಾಡಬೇಕು. ಇದನ್ನು ಓದಿ..Hanumaan Drawing: ನೋಡದೇನೆ ಆಂಜನೇಯದ ಫೋಟೋ ಬಿಡಿಸಿದ ಮಹಿಳೆ- ನೆಟ್ಟಿಗರ ಪ್ರಶಂಸೆ. ವಿಡಿಯೋ ನೋಡಿ.

ಮೆಡಿಕಲ್ ಕಾಲೇಜು ಕನಕಪುರದಲ್ಲಿ ಆಗಬೇಕಿತ್ತು, ಅದನ್ನು ಚಿಕ್ಕಬಳ್ಳಾಪುರಕ್ಕೆ (Chikkaballapura) ತರಲಾಯಿತು, ಇದಕ್ಕಾಗಿ ದೊಡ್ಡ ಕಟ್ಟಡ ಹಾಗೂ ಹೆಚ್ಚು ವಿನ್ಯಾಸ ಬೇಕಾಗಿದೆ, ಹಾಗಾಗಿ ಅನುದಾನ ಹೆಚ್ಚಾಗಬೇಕು. ಇಂಜಿನಿಯರ್ ಸಮಿತಿ ಹಾಗೂ ಜಡ್ಜ್ ಪರಿಶೀಲಿಸಿ ಮಂಜೂರು ಮಾಡಿದ್ದಾರೆ. ಇದರ ಬಗ್ಗೆಯೂ ತನಿಖೆ ಮಾಡುವುದಾದರೆ ಮಾಡಲಿ..2018 ಹಾಗೂ 2023ರ ಎಲೆಕ್ಷನ್ ನಲ್ಲಿ ಬಿಜೆಪಿಗೆ ಸಿಕ್ಕಿರುವ ವೋಟ್ ಗಳ ಸಂಖ್ಯೆ ಜಾಸ್ತಿಯಾಗಿದೆ. ಈಗ ಹಿಂದಕ್ಕೆ ಬಂದಿರಬಹುದು, ಆದರೆ ಮುಂದಿನ ಎಲೆಕ್ಷನ್ ನಲ್ಲಿ 8 ರಿಂದ10 ಸ್ಥಾನ ಪಡೆಯುವ ಪ್ರಯತ್ನ ಮಾಡುತ್ತೇವೆ. ರೈತರ ಜೊತೆಗೆ ಹೋರಾಟ ಮಾಡುತ್ತೇವೆ. ನಾವು ಸೋತಿರಬಹುದು ಆದರೆ ಸತ್ತಿಲ್ಲ.. ” ಎಂದಿದ್ದಾರೆ ಡಾ. ಕೆ ಸುಧಾಕರ್ (K Sudhakar) . ಇದನ್ನು ಓದಿ..Modi Scheme: ಇಡೀ ದೇಶದಲ್ಲಿ ಇರುವ ಮಹಿಳೆಯರಿಗೆ ಕೇಂದ್ರದಿಂದ 5000 ಸಹಾಯಧನ- ಅರ್ಜಿ ಸಲ್ಲಿಸಿದರೆ ಅಕೌಂಟಿಗೆ ಬರಲಿದೆ.

Comments are closed.