KL Rahul: ಸ್ವಾರ್ಥಿಯಾಗಿ ಬಿಟ್ಟರೆ ರಾಹುಲ್?? ಅಭಿಮಾನಿಗಳು ಕೂಡ ರಾಹುಲ್ ಕಂಡು ಬೇಸರ ವ್ಯಕ್ತ ಪಡಿಸಿ ಹೇಳಿದ್ದೇನು ಗೊತ್ತೇ? ಈತ ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ??
KL Rahul: ಟೀಮ್ ಇಂಡಿಯಾದ (Team India) ಕ್ರಿಕೆಟರ್ ಕೆ.ಎಲ್.ರಾಹುಲ್ (K L Rahul) ಅವರು ಈಗ ಕಳಪೆ ಫಾರ್ಮ್ ಬ್ಯಾಟಿಂಗ್ ಅನ್ನು ಎದುರಿಸುತ್ತಿದ್ದಾರೆ. ಕಳೆದ ವರ್ಷದಿಂದಲು ಉತ್ತಮ ಪ್ರದರ್ಶನ ನೀಡುತ್ತಿಲ್ಲ, ಈಗಾಗಲೇ ರಾಹುಲ್ ಅವರನ್ನು ಭಾರತದ ಟೆಸ್ಟ್ ಟೀಮ್ ಇಂದ ಹೊರಗಿಟ್ಟಿದ್ದು, ಇದೀಗ ಐಪಿಎಲ್ (IPL) ನಲ್ಲಿ ಸಹ ರಾಹುಲ್ ಅವರ ಕಳಪೆ ಫಾರ್ಮ್ ಮುಂದುವರೆದಿದೆ. ಎಲ್.ಎಸ್.ಜಿ (LSG) ತಂಡದ ಕ್ಯಾಪ್ಟನ್ ಆಗಿರುವ ಕೆ.ಎಲ್.ರಾಹುಲ್ ಅವರು ಓಪನರ್ ಆಗಿ ಕಣಕ್ಕೆ ಇಳಿದು ಕಳಪೆ ಫಾರ್ಮ್ ಮುಂದುವರೆಸಿದ್ದಾರೆ.
ಕೆ.ಎಲ್.ರಾಹುಲ್ ಅವರು ನಿನ್ನೆ ಬುಧವಾರ ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧ ನಡೆದ ಮ್ಯಾಚ್ ನಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿದರು, ಎದುರಿಸಿದ 32 ಎಸೆತಗಳಲ್ಲಿ ರಾಹುಲ್ ಅವರು ಗಳಿಸಿದ್ದು ಕೇವಲ 39 ರನ್ ಗಳು, ಇಷ್ಟು ರನ್ ಗಳ ಬಳಿಕ ವಿಕೆಟ್ ಒಪ್ಪಿಸಿದರು, ಆದರೆ ಔಟ್ ಆಗುವುದಕ್ಕಿಂತ ಮೊದಲು ಆರ್.ಆರ್ (RR) ತಂಡ ರಾಹುಲ್ ಅವರ ಕ್ಯಾಚ್ ಡ್ರಾಪ್ ಮಾಡಿದ ಕಾರಣ ರಾಹುಲ್ ಅವರಿಗೆ ಜೀವದಾನ ಸಿಕ್ಕಿತ್ತು. ಎಲ್.ಎಸ್.ಜಿ ತಂಡದ ಓಪನರ್ ಬ್ಯಾಟ್ಸ್ಮನ್ ಗಳಾಗಿ ಕೆ.ಎಲ್.ರಾಹುಲ್ ಹಾಗೂ ಕೈಲ್ ಮೇಯರ್ಸನ್ (Kyle Mayorson) ಅವರನ್ನು ಕಣಕ್ಕೆ ಇಳಿಸಲಾಗಿತ್ತು, ಇವರಿಬ್ಬರ ಜೊತೆಯಾಟದಲ್ಲಿ 82 ರನ್ಸ್ ಬಂದಿದೆ. ಆದರೆ, ರಾಹುಲ್ ಅವರು ಮಂದಗತಿ ಬ್ಯಾಟಿಂಗ್ ಇಂದ ಟ್ವಿಟರ್ ನಲ್ಲಿ ಟ್ರೋಲ್ ಅಗಿದ್ದಾರೆ. ಇದನ್ನು ಓದಿ..IPL 2023:ಚೆನ್ನೈ ತಂಡಕ್ಕೆ ಬಿಗ್ ಶಾಕ್: ಇಬ್ಬರು ಟಾಪ್ ಆಟಗಾರರು ಹೊರಕ್ಕೆ: ಇವರಿಲ್ಲದೆ ಪಂದ್ಯ ಗೆಲ್ಲಲು ಸಾಧ್ಯನಾ?? ಚೆನ್ನೈ ಕಥೆ ಉಡೀಸ್ ಹಾ?
ಮಾಜಿ ಆಟಗಾರ ದೊಡ್ಡ ಗಣೇಶ್ (Dodda Ganesh) ಅವರು, ಕೆ.ಎಲ್.ರಾಹುಲ್ ಇಷ್ಟು ಕೆಟ್ಟದಾಗಿ ಬ್ಯಾಟಿಂಗ್ ಮಾಡುತ್ತಾರೆ ಅಂದ್ರೆ ಅವರು ಮಿಡ್ಲ್ ಆರ್ಡರ್ ನಲ್ಲಿ ಬ್ಯಾಟಿಂಗ್ ಮಾಡುವುದು ಒಳ್ಳೆಯದು, 2018ರ ಥರದ ಪ್ಲಾನ್ ಬಳಸಿ ಆಡಬೇಕು ಇಲ್ಲದೆ ಹೋದರೆ ಟೀಮ್ ಇಂಡಿಯಾ ಪರವಾಗಿ ಕೂಡ ಆಡಬಾರದು. ಸಿಂಪಲ್ ಆಗಿ ಹೇಳೋದಾದರೆ, ಅಲ್ಲಿ ರನ್ ಗಳಿಸುವ ಆಸೆಯೇ ಇರಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ನೆಟ್ಟಿಗರು ಕೂಡ ಇದೇ ರೀತಿ ಟ್ರೋಲ್ ಮಾಡುತ್ತಿದ್ದಾರೆ, ರಾಹುಲ್ ಅವರು ಟಿ20 ಪಂದ್ಯದಲ್ಲಿ ಟೆಸ್ಟ್ ಮ್ಯಾವ್ಹ ಆಡುತ್ತಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.
ಇನ್ನು ಕೆಲವರು, ವಿರಾಟ್ ಕೊಹ್ಲಿ ಹಾಗೂ ಬಾಬರ್ ಅಜಂ ಅವರು ಸ್ಟ್ರೈಕ್ ರೇಟ್ ಕಡಿಮೆ ಇದೆ ಎಂದು ಟೀಕೆಗೆ ಒಳಗಾಗುತ್ತಿದ್ದಾರೆ. ಈಗ ರಾಹುಲ್ ಅವರು ಸ್ಟ್ರೈಕ್ ರೇಟ್ ಎನ್ನುವ ಪದಕ್ಕೆ ಅವಮಾನ ಎನ್ನುವ ಹಾಗೆ ಆಡುತ್ತಿದ್ದಾರೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಕಳಪೆ ಫಾರ್ಮ್ ಇಂದ ರಾಹುಲ್ ಅವರು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದು, ಈ ವರ್ಷ ಆಡಿರುವ 5 ಪಂದ್ಯಗಳಲ್ಲಿ 194 ರನ್ಸ್ ಗಳಿಸಿದ್ದರು ಸಹ, ರಾಹುಲ್ ಅವರ ಸ್ಟ್ರೈಕ್ ರೇಟ್ 115 ದಾಟಿಲ್ಲ. ಈ ಕಾರಣಕ್ಕೆ ಇನ್ನಷ್ಟು ಟ್ರೋಲ್ ಆಗುತ್ತಿದ್ದಾರೆ. ಇದನ್ನು ಓದಿ..Business idea: ಮನೆಯಲ್ಲಿ ಅಮ್ಮ, ಹೆಂಡತಿ ಖಾಲಿ ಕೂತಿದ್ದಾರೆ, ಚಿಕ್ಕ ಹೂಡಿಕೆ ಮಾಡಿ, ಈ ಬಿಸಿನೆಸ್ ಆರಂಭಿಸಿ: ವರ್ಷಕ್ಕೆ 10 ಲಕ್ಷ ಲಾಭ ಫಿಕ್ಸ್. ಏನು ಉದ್ಯಮ ಗೊತ್ತೇ??
Comments are closed.