Karnataka: BJP ಪಕ್ಷಕ್ಕೆ ಮತ್ತೊಂದು ಶಾಕ್ ಕೊಟ್ಟ ಹಿಂದೂ ಮಹಾಸಭಾ- ಬಹಿರಂಗವಾಗಿಯೇ ಹೇಳಿದ್ದೇನು ಗೊತ್ತೇ?? ಬಿಜೆಪಿ ಕಥೆ ಮುಗಿಯಿತೇ??
Karnataka: ಬಿಜೆಪಿ (BJP) ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಪಕ್ಷದ ಮುಖಂಡರ ವಿರುದ್ಧ ಹಿಂದೂ ಮಹಾಸಭಾ ಆಕ್ರೋಶಗೊಂಡಿದೆ. ಹಿಂದೂ ಮಹಾಸಭೆಯ ಚಾಲಕ್ ಧರ್ಮೇಂದ್ರ ಅಮಿನ್ (Dharmendra Amin) ಅವರು ಮಾತನಾಡಿ, ನಳಿನ್ ಕುಮಾರ್ ಕಟೀಲ್ ಅವರೇ ನಿಮಗೆ ತಾಕತ್ ಇದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ನಿಂತು, ಮೋದಿ ಯೋಗಿ ಅಬರ ಹೆಸರು ಬಳಸದೆ ಅರುಣ್ ಪುತ್ತಿಲ (Arun Puttila) ಅವರಲ್ಲಿ 10% ಮತ ಪಡೆದು ತೋರಿಸಿ, ಅಷ್ಟು ತಾಕತ್ ನಿಮ್ಮ ಹತ್ತಿರ ಇದ್ಯಾ ಎಂದು ಸವಾಲು ಹಾಕಿದ್ದಾರೆ..
ಹರೀಶ್ ಪೂಂಜಾ, ಸತ್ಯಜಿತ್ ಸುರತ್ಕಲ್, ಮಹೇಶ್ ಶೆಟ್ಟು ತಿಮರೋಡಿ ಅವರ ಬಗ್ಗೆ ಮಾತನಾಡುತ್ತಾರೆ, ಬಿಜೆಪಿ ನಾಯಕರಿಗೆ ಅವರ ಬಗ್ಗೆ ಮಾತನಾಡೋ ನೈತಿಕತೆ ಇದೆಯೇ? ಅಧಿಕಾರ ಸಿಕ್ಕಾಗ ಬಾಯಿಗೆ ಬಂದ ಹಾಗೆ ಮಾತನಾಡಬಾರದು, ಪೀಠದಲ್ಲಿ ಕೂರಿಸಿದವರಿಗೆ ಅದರಿಂದ ಇಳಿಸೋದು ಕೂಡ ಗೊತ್ತು ಎಂದು ಎಚ್ಚರಿಕೆ ನೀಡಿದ್ದಾರೆ..ಬಿಜೆಪಿ ಶಾಸಕರಿಗೆ ನೈತಿಕತೆ ಇದ್ದರೆ, ನೀವು ಮೌನವಾಗಿರಿ, ಹಿಂದೂ ಕಾರ್ಯಕರ್ತರು ಮತ್ತು ಹಿಂದುತ್ವ ವಾದಿಗಳಿಗೆ ಸಹಾಯ ಮಾಡಿ..ಅದೆಲ್ಲ ಬಿಟ್ಟು ಅಧಿಕಾರವನ್ನು ಬಳಸಿಕೊಂಡು ದೌರ್ಜನ್ಯ ಮಾಡಿದ್ರೆ ನಾವು ಸುಮ್ಮನೆ ಇರೋದಿಲ್ಲ.. ಎಲ್ಲಾ ಸಂಘಟನೆಗಳು ಜೊತೆಯಾಗಿ, ಬಿಜೆಪಿ ವಿರುದ್ಧ ಹೋರಾಟ ಮಾಡಬಹುದು. ಇದನ್ನು ಓದಿ..Kannada News: ಕನ್ನಡಿಗ ಪ್ರವೀಣ್ ಸೂದ್ CBI ನಿದೇಶಕ- ಆಯ್ಕೆಯಾದ ತಕ್ಷಣ ಡಿಕೆಶಿ ಫ್ಯಾನ್ಸ್ ನಿರಾಸೆ ಗೊಂಡಿರುವುದು ಯಾಕೆ ಗೊತ್ತೇ?? ಏನೆಲ್ಲಾ ನಡೆದಿದೆ ಗೊತ್ತೇ?
ಮುಂದಿನ ವರ್ಷ ಚುನಾವಣೆ ಇದೆ, ನಾವು ಸುಮ್ಮನೆ ಇರೋದು ಮೋದಿ ಅವರ ಮುಖ ನೋಡಿಕೊಂಡು ನಿಮ್ಮ ಮುಖ ನೋಡಿಕೊಂಡು ಅಲ್ಲ..ಇದಕ್ಕೆಲ್ಲ ಉತ್ತರ ಕೊಡೋದಕ್ಕೆ ನಮಗೆ ಬರುತ್ತೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ ಧರ್ಮೇಂದ್ರ ಅಮಿನ್, ಪುತ್ತೂರಿನಲ್ಲಿ ನಡೆದ ಪೊಲೀಸ್ ಕೇಸ್ ಗೆ ನ್ಯಾಯ ಸಿಕ್ಕಿಲ್ಲ, ಡಿವೈಎಸ್ಪಿ ಅವರನ್ನು ತಕ್ಷಣವೇ ಅಮಾನತು ಮಾಡಬೇಕು. ಮಾಡದೆ ಹೋದರೆ ಕೋರ್ಟ್ ಮೊರೆ ಹೋಗುತ್ತೇವೆ..ಎಂದಿದ್ದಾರೆ. ಹಿಂದೂ ಮಹಾಸಭಾದ ಬೆಳ್ತಂಗಡಿ ತಾಲೂಕಿನ ಅಧ್ಯಕ್ಷ ಪುನೀತ್ ಸುವರ್ಣ ಅವರು ಮಾತನಾಡಿ, ದಿ.ಪ್ರವೀಣ್ ನೆಟ್ಟಾರ್ ಅವರ ಕುಟುಂಬಕ್ಕೆ ಸಹಾಯ ಮಾಡಿದ್ದು, ಹಿಂದೂ ಸಂಘಟನೆಯ ಕಾರ್ಯಕರ್ತರು.
ಬಿಜೆಪಿ ನಾಯಕರು ಸಹಾಯ ಮಾಡಿಲ್ಲ, ಪ್ರವೀಣ್ ನೆಟ್ಟಾರ್ ಅವರ ಕುಟುಂಬಕ್ಕೆ ನಳಿನ್ ಕುಮಾರ್ ಕಟೀಲ್ ಅವರು ಮನೆ ಕಟ್ಟಿಕೊಟ್ಟಿದ್ದಾರೆ ಎಂದು ಹೇಳ್ತಿದ್ದಾರೆ..ನಳಿನ್ ಅವರ ಕಾರನ್ನು ಅಲುಗಾಡಿಸಿರುವುದಕ್ಕೆ ಮನೆ ಕಟ್ಟಿಕೊಟ್ಟಿದ್ದಾರೆ, ಆದರೆ ನಳಿನ್ ಅವರ ಕಾರನ್ನಲ್ಲ ನಳಿನ್ ಅವರನ್ನೇ ಅಲುಗಾಡಿಸಬೇಕಿತ್ತು ಎಂದಿದ್ದಾರೆ ಪ್ರವೀಣ್. ನಾವೇನದರು ಅಲ್ಲಿ ಇದ್ದಿದ್ರೆ ನಳಿನ್ ಅವರನ್ನೇ ಅಲುಗಾಡಿಸುತ್ತಿದ್ವಿ ಎಂದು ಪುನೀತ್ ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ನಾಯಕರಿಗೆ ಹಿಂದೂ ಮಹಾಸಭಾ ದೊಡ್ಡ ಶಾಕ್ ಅನ್ನೇ ಕೊಟ್ಟಿದೆ. ಇದನ್ನು ಓದಿ..Kodimutt Swamiji: ಖಚಿತ ಭವಿಷ್ಯ ನುಡಿಯುವ ಕೋಡಿಮಠ, ಸ್ವಾಮಿಗಳು- ಎಲ್ಲರ ಲೆಕ್ಕಾಚಾರ ಉಲ್ಟಾ ಆಗುವಂತೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಷಾಕಿಂಗ್ ಆಗಿ ಹೇಳಿದ್ದೇನು ಗೊತ್ತೇ?
Comments are closed.