Neer Dose Karnataka
Take a fresh look at your lifestyle.

Dk Shivakumar: ಅಯ್ಯೋ ಗ್ಯಾರಂಟಿ ಗಳಿಗೆ ಷರತ್ತು ಯಾಕೆ ಎಂದಿದ್ದಕ್ಕೆ ಡಿಕೆಶಿ ಬಹಿರಂಗವಾಗಿಯೇ ಹೇಳಿದ್ದೇನು ಗೊತ್ತೇ? ಶಾಕ್ ಆದ ಜನತೆ. ಕಾರಣ ಏನಂತೆ ಗೊತ್ತೆ?

Dk Shivakumar: ಕಾಂಗ್ರೆಸ್ ಸರ್ಕಾರ ಚುನಾವಣೆ ಪ್ರಚಾರದ ವೇಳೆ ಗ್ಯಾರಂಟಿ ಯೋಜನೆಗಳ ಬಗ್ಗೆ ಹೇಳುವಾಗ, ಯಾವುದೇ ಷರತ್ತುಗಳು ಅನ್ವಯವಾಗುತ್ತದೆ ಎಂದು ಹೇಳಿರಲಿಲ್ಲ. ಆದರೆ ಅಧಿಕಾರಕ್ಕೆ ಬಂದ ಬಳಿಕ ಶರತ್ತುಗಳ ಬಗ್ಗೆ ಹೇಳುತ್ತಿದ್ದಾರೆ. ಇದರ ಬಗ್ಗೆ ಜನರಿಗೆ ಅಸಮಧಾನ ಶುರುವಾಗಿದೆ. ಈ ಕಾರಣದಿಂದ ನೇರವಾಗಿ ಡಿಕೆಶಿ ಅವರಿಗೆ ಷರತ್ತು ಹಾಕಿರೋದು ಯಾಕೆ ಎಂದು ಕೇಳಿದ್ದಕ್ಕೆ ಅವರು ಕೊಟ್ಟ ಉತ್ತರ ಕೇಳಿ ಈಗ ಜನರೇ ಶಾಕ್ ಆಗಿದ್ದಾರೆ..

ಗೃಹಲಕ್ಷ್ಮಿ ಯೋಜನೆಯ ಶರತ್ತಿನ ಬಗ್ಗೆ ಡಿಕೆಶಿ ಅವರು..”ಸರ್ಕಾರ ನಡೆಸುವವರಾದ ನಾವು ಒಬ್ಬ ವ್ಯಕ್ತಿಗೆ ಒಂದು ರೂಪಾಯಿ ಕೊಟ್ಟರು ಅದಕ್ಕೆ ಅಕೌಂಟ್ ಕೊಡಬೇಕು. ವೋಟರ್ ಲಿಸ್ಟ್ ಇದೆಯಾ, ವೋಟರ್ ಐಡಿ ಇದೆಯಾ, ಆಧಾರ್ ಕಾರ್ಡ್ ಇದೆಯಾ? ಎಲ್ಲವನ್ನು ಪರೀಕ್ಷಿಸಿರಬೇಕು. ಮನೆಯ ಯಜಮಾನಿ ಯಾರು? ಮನೆ ನಡೆಸುವವರು ಯಾರು ಅನ್ನೋದನ್ನ ಜನರೇ ತೀರ್ಮಾನ ಮಾಡಬೇಕು, ಅವರ ಕುಟುಂಬದ ವಿಷಯಕ್ಕೆ ನಾವು ಹೋಗೋದಿಲ್ಲ.. ಬ್ಯಾಂಕ್ ಅಕೌಂಟ್ ಇರಲೇಬೇಕು, ಬೇರೆಯವರ ಅಕೌಂಟ್ ಗೆ ಹಣ ಹಾಕೋದಿಲ್ಲ..ಒಂದು ಕುಟುಂಬ BPL, APL, ಅಂತ್ಯೋದಯ ಕಾರ್ಡ್ ಎಲ್ಲವೂ ಇದ್ದರೆ, ಫಸ್ಟ್ ನೇಮ್ ಅಥವಾ ಸೆಕೆಂಡ್ ನೇಮ್.. ಇದನ್ನು ಓದಿ..Traffic Rules: ವಾಹನ ಸವಾರರಿಗೆ ಖಡಕ್ ಎಚ್ಚರಿಕೆ ರವಾನಿಸಿದ ಡಿಜಿಪಿ- ರೋಡ್ ನಲ್ಲಿ ನಿಯಮ ಉಲ್ಲಂಘ ಮಾಡಿದರೆ, ಅಷ್ಟೇ .. ಏನಾಗಿದೆ ಗೊತ್ತೇ?

ಯಾವುದು ಕೊಡಬೇಕು ಎನ್ನುವುದನ್ನು ಅವರೇ ಡಿಸೈಡ್ ಮಾಡಬೇಕು..” ಎಂದು ಹೇಳಿದ್ದಾರೆ ಡಿಕೆ ಶಿವಕುಮಾರ್. ಇದೇ ವಿಚಾರಕ್ಕೆ ಮುಂದುವರೆದು ಮಾತನಾಡಿ, ಐಟಿ ರಿಟರ್ನ್ಸ್ ಕಟ್ಟುವವರು, ಗ್ಯಾರಂಟಿ ಯೋಜನೆ ಬೇಕು ಎಂದು ಕೇಳಿಲ್ಲ, ಹಲವರು ನಮಗೆ 2000 ಬೇಡ ಎಂದು ಪತ್ರ ಬರೆದಿದ್ದಾರೆ, ಅವರ ಹೆಸರು ಹೇಳೋಹಾಗಿಲ್ಲ. ಐಟಿ ಅವರು ಯಾರು ಕೂಡ ನಮಗೆ ಗ್ಯಾರಂಟಿ ಯೋಜನೆ ಕೊಡಿ ಅಂತ ಕೇಳೋದಿಲ್ಲ..ಇದನ್ನ ನಾವು ಬಡಜನರಿಗೆ ಮಾಡಿದ್ದೇವೆ..ಎಂದಿದ್ದಾರೆ.

ಯೋಜನೆಗಳ ಸೌಲಭ್ಯ ಪಡೆಯಲು ಏನಿರಬೇಕು ಎಂದು ಜನರು ಕೇಳಿರೋದಕ್ಕೆ ನಾವು ಉತ್ತರ ಕೊಟ್ಟಿದ್ದೀವಿ. ಬಾಡಿಗೆ ಮನೆಯವರಿಗೆ ಫ್ರೀ ಕರೆಂಟ್ ಸಿಗಲ್ವಾ ಅನ್ನೋ ಪ್ರಶ್ನೆ ಬಂದಾಗ, ಅದಕ್ಕೆ ಉತ್ತರ ಕೊಟ್ಟಿದ್ದೀವಿ. ಬಾಡಿಗೆ ಮನೆಯಲ್ಲಿ ಇರೋರಿಗೂ ಉಚಿತ ವಿದ್ಯುತ್ ಕೊಡ್ತೀವಿ..ಇನ್ನು ಐಟಿ ಅವರು ನಮಗೆ ಬೇಡ ಎಂದಿದ್ದಾರೆ..ಎಂದು ಡಿಕೆಶಿ ಅವರು ಹೇಳಿದ್ದು, ಸರ್ಕಾರಿ ನೌಕರರಿಗೆ ಈ ಸೌಲಭ್ಯಗಳು ಸಿಗುತ್ತಾ ಎಂದು ಕೇಳಿದ ಪ್ರಶ್ನೆಗೆ, ಅದೆಲ್ಲ ನಮಗೆ ಗೊತ್ತಿದೆ ಬಿಡಿ ಎಂದು ಹೇಳಿ, ಗೊಂದಲವನ್ನು ಹಾಗೆಯೇ ಉಳಿಸಿದ್ದಾರೆ. ಒಟ್ಟಿನಲ್ಲಿ ಈ ಮಾತುಗಳು ಮತ್ತು ಷರತ್ತುಗಳನ್ನು ಕೇಳಿ ಜನರಿಗೆ ಶಾಕ್ ಆಗಿದೆ. ಇದನ್ನು ಓದಿ..Renukacharya: ಎಷ್ಟೆಲ್ಲ ಮಾಡಿದರೂ ಸೋತ ರೇಣುಕಾಚಾರ್ಯ ಮಹತ್ವದ ಹೆಜ್ಜೆ- ಇದು ಇದು ಬೇಕಾಗಿರೋದು ಎಂದ ಫ್ಯಾನ್ಸ್. ರೇಣುಕಾರ್ಯ ಹೊಸ ದಿಟ್ಟ ಹೆಜ್ಜೆ. ಏನು ಗೊತ್ತೆ?

Comments are closed.