Naveen Ul Haq: ಇಷ್ಟು ದಿವಸ ಆದ್ಮೇಲೆ, ಕೊಹ್ಲಿ ಜೊತೆ ಕಿರಿಕ್ ಬಗ್ಗೆ ನವೀನ್ ಉಲ್ ಹಕ್ ಹೇಳಿದ್ದೇನು ಗೊತ್ತೇ?? ಇಷ್ಟು ದಿನ ಆದ್ಮೇಲೆ ಇವೆಲ್ಲ ಬೇಕಿತ್ತಾ??
Naveen Ul Haq: ಈ ವರ್ಷ ಐಪಿಎಲ್ (IPL) ನಲ್ಲಿ ದೊಡ್ಡ ವಿವಾದದ ಹಾಗೆ ಆಗಿದ್ದು, LSG ತಂಡದ ಆಟಗಾರ ನವೀನ್ ಉಲ್ ಹಕ್ ಹಾಗೂ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ನಡೆದ ಜಗಳ ಆಗಿದೆ. ನವೀನ್ ಉಲ್ ಹಕ್ ಸುಖಾಸುಮ್ಮನೆ ಕೊಹ್ಲಿ ಅವರ ಆರ್ಸಿಬಿ ಅಭಿಮಾನಿಗಳ ದ್ವೇಷ ಕಟ್ಟಿಕೊಂಡರು. ಅಂದು ಮೈದಾನದಲ್ಲಿ ನಡೆದ ಮಾತಿನ ಚಕಾಮಕಿ ವಿರಾಟ್ ಕೊಹ್ಲಿ ಅವರು ಕೈಕುಲುಕಿದಾಗ ಕೈ ಎಳೆದದ್ದು ಇದೆಲ್ಲವೂ ವೈರಲ್ ಆಗಿದ್, ವಿರಾಟ್ ಅಭಿಮಾನಿಗಳು ನವೀನ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಟೀಕೆ ಮಾಡಿದ್ದರು..
ಇದೆಲ್ಲದರ ಬಗ್ಗೆ ನವೀನ್ ಉಲ್ ಹಕ್ ಇತ್ತೀಚೆಗೆ ನೀಡಿರುವ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. “ಆ ಥರದ ಘಟನೆಗಳು ನಡೆಯಬಾರದಿತ್ತು, ಆದರೆ ನಡೆದು ಹೋಯಿತು. ಪಂದ್ಯ ನಡೆಯುವಾಗ ಮತ್ತು ನಂತರ ಜಗಳ ಶುರು ಮಾಡಿದ್ದು ನಾನಲ್ಲ.. ಮ್ಯಾಚ್ ಮುಗಿದು ಹಸ್ತಲಾಘವ ಮಾಡುವಾಗ ವಿರಾಟ್ ಅವರು ನನ್ನ ಕೈಹಿಡಿದಿದ್ದರು ಬಿಡಲಿಲ್ಲ, ಹಾಗಾಗಿ ನಾನು ಕೈಬಿಡಿಸಿಕೊಂಡೆ, ನಾನು ಮನುಷ್ಯ ನನಗೂ ಕೋಪ ಬರುತ್ತೆ. ವಿರಾಟ್ ಕೊಹ್ಲಿ ಅವರೇ ಜಗಳ ಶುರು ಮಾಡಿದರು. ಇದನ್ನು ಓದಿ..Team India: ಒಂದಲ್ಲ ಎರಡಲ್ಲ ಐದು ವರ್ಷಗಳ ಬಳಿಕ ಟೆಸ್ಟ್ ತಂಡಕ್ಕೆ ಬಂದ ಖಡಕ್ ಆಲ್ ರೌಂಡರ್- ಇನ್ನು ಭಾರತವನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಯಾರು ಗೊತ್ತೇ?
ನಾನು ಯಾರನ್ನು ಕೆಣಕಲು ಹೋಗಿಲ್ಲ, ಈವರೆಗೂ ಆಡಿರುವ ಪಂದ್ಯಗಳಲ್ಲಿ ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿಲ್ಲ. ಪಂದ್ಯದ ಸಮಯದಲ್ಲಿ ನಾನು ಒಂದು ಮಾತನ್ನು ಸಹ ಆಡಿರಲಿಲ್ಲ. ಆದರೆ ನನ್ನನ್ನು ಯಾರಾದರೂ ಬೈದರೆ ನಾನು ಸುಮ್ಮನೆ ಇರುವುದಿಲ್ಲ. ಅದು ದೊಡ್ಡ ಆಟಗಾರನೇ ಆಗಿರಲಿ ಅಥವಾ ಸಣ್ಣ ಆಟಗಾರನೇ ಆಗಿರಲಿ. ಇದೆಲ್ಲ ನಡೆದ ನಂತರ ಅಭಿಮಾನಿಗಳು ನನ್ನನ್ನೇ ಟಾರ್ಗೆಟ್ ಮಾಡಿದರು, ಸಾವಿರಾರು ಜನರಿಗೆ ನಾನು ಉತ್ತರ ಕೊಡಬೇಕಿತ್ತು. ಹಾಗಾಗಿ ನಾನು ಪಂದ್ಯದ ಮೇಲೆ ಮಾತ್ರ ಗಮನ ಇಟ್ಟಿದ್ದೆ, ಚೆನ್ನಾಗಿ ಆಡುತ್ತೇನೆ ಎನ್ನುವ ವಿಶ್ವಾಸ ಇತ್ತು ಎಂದಿದ್ದಾರೆ ನವೀನ್ ಉಲ್ ಹಕ್.
ಅಲ್ಲಿಗೆ ವಿಷಯವನ್ನು ಬಿಡುವುದನ್ನು ಬಿಟ್ಟು, ಮಾವಿನ ಹಣ್ಣಿನ ಫೋಟೋಸ್ ಶೇರ್ ಮಾಡಿ, ವಿವಾದವನ್ನು ಇನ್ನು ದೊಡ್ಡದು ಯಾಕೆ ಮಾಡಿದಿರಿ ಎಂದು ಕೂಡ ಕೇಳಲಾಯಿತು. ಅದಕ್ಕೆ ನವೀನ್ ಅವರು ಉತ್ತರಿಸಿ, ಅಲ್ಲಿ ನಾನು ಯಾವುದೇ ಆಟಗಾರನ ಹೆಸರನ್ನು ಹಾಕಿರಲಿಲ್ಲ. ನಾನು ಪಂದ್ಯ ನೋಡುತ್ತಾ ಮಾವಿನ ಹಣ್ಣು ತಿನ್ನುತ್ತಿದ್ದ ಫೋಟೋ ಹಾಕಿದ್ದ ಅಷ್ಟೇ. ಅದು ಕೂಡ ದೊಡ್ಡ ಚರ್ಚೆಗೆ ಕಾರಣವಾಯಿತು ಎಂದಿದ್ದಾರೆ. ಇದೀಗ ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಏಷ್ಯಾಕಪ್ ವೇಳೆ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ಮುಖಾಮುಖಿ ಆಗಲಿದ್ದು, ಆಗ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Ravi Shastri: ನಿವೃತ್ತಿ ಆಗುವವರೆಗೂ ಅವಕಾಶ ಕೊಡಬೇಡಿ, ಮೊದಲು ಇವರನ್ನು ಕಿತ್ತುಹಾಕಿ ಎಂದ ರವಿ ಶಾಸ್ತ್ರೀ- ಯಾರು ಹೊರಹೋಗಬೇಕಂತೆ ಗೊತ್ತೇ??
Comments are closed.