Neer Dose Karnataka
Take a fresh look at your lifestyle.

Team India: ರೋಹಿತ್ ಶರ್ಮ ನಂತರ, ಭಾರತ ಟೆಸ್ಟ್ ತಂಡದ ನಾಯಕ ಯಾರಾಗಬಹುದು ಗೊತ್ತೇ?? ಅಚ್ಚರಿಯ ಹೆಸರುಗಳು ಲಿಸ್ಟ್ ನಲ್ಲಿ. ಯಾರ್ಯಾರು ಗೊತ್ತೇ?

Team India: ಟೀಮ್ ಇಂಡಿಯಾ ಈಗ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ನಲ್ಲಿ ಸೋತ ನಂತರ ಕ್ಯಾಪ್ಟನ್ ರೋಹಿತ್ ಶರ್ಮಾ ಅವರನ್ನು ಟೆಸ್ಟ್ ನಾಯಕತ್ವದಿಂದ ಕೆಳಗಿಳಿಸಬೇಕು ಎನ್ನುವ ಮಾತು ಜೋರಾಗಿಯೇ ಕೇಳಿಬರುತ್ತಿದೆ. ರೋಹಿತ್ ಶರ್ಮಾ ಅವರಿಗೆ ಈಗ 36 ವರ್ಷ ವಯಸ್ಸು, ಜೊತೆಗೆ ಫಿಟ್ನೆಸ್ ಸಮಸ್ಯೆ ಇಂದ ಕೂಡ ಬಳಲುತ್ತಿದ್ದಾರೆ. ಹಾಗಾಗಿ ರೋಹಿತ್ ಶರ್ಮಾ ಅವರು ಮೂರು ಸ್ವರೂಪದ ಕ್ರಿಕೆಟ್ ತಂಡಗಳನ್ನು ಮುನ್ನಡೆಸುವುದು ಕಷ್ಟವಾಗಲಿದ್ದು ಅವರ ಬದಲಾಗಿ ಹೊಸ ಕ್ಯಾಪ್ಟನ್ ಅನ್ನು ಆಯ್ಕೆ ಮಾಡುವುದು ಒಳ್ಳೆಯದು ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ತಂಡಕ್ಕೆ ಆಯ್ಕೆಯಾಗಬಹುದಾದ ಹೊಸ ಕ್ಯಾಪ್ಟನ್ ಯಾರಾಗಬಹುದು ಎನ್ನುವ ಚರ್ಚೆ ಸಹ ಶುರುವಾಗಿದೆ.

ಭಾರತ ತಂಡದ ಮುಂದಿನ ಕ್ಯಾಪ್ಟನ್ ಆಗಿ ಚೇತೇಶ್ವರ ಪೂಜಾರ ಅಥವಾ ಅಜಿಂಕ್ಯಾ ರಹಾನೆ ಅವರು ಆಯ್ಕೆಯಾಗಬಹುದು ಎನ್ನಲಾಗುತ್ತಿದೆ. ಆದರೆ ಇಬ್ಬರಲ್ಲು ವಯಸ್ಸಿನ ಸಮಸ್ಯೆ ಇದೆ. ಹಾಗೆಯೇ ಚೇತೇಶ್ವರ ಪೂಜಾರ ಅವರಿಗೆ ಕ್ಯಾಪ್ಟನ್ಸಿ ಅನುಭವ ಇಲ್ಲ ಹಾಗೆಯೇ ಅವರು ಕಳಪೆ ಫಾರ್ಮ್ ಇಂದಲೂ ಬಳಲುತ್ತಿದ್ದಾರೆ. ಇನ್ನು ಕೊಹ್ಲಿ ಅವರು ಸಹ ಮತ್ತೆ ಕ್ಯಾಪ್ಟನ್ ಆಗುವ ಸಂಭವ ಕಡಿಮೆ ಇದೆ. ಈಗ ತಂಡವನ್ನು ದೀರ್ಘಕಾಲದವರೆಗೂ ಮುಂದುವರೆಸುವ ಆಟಗಾರ ಬೇಕಿರುವುದರಿಂದ ಯುವ ಆಟಗಾರರನ್ನು ಆಯ್ಕೆ ಮಾಡಬೇಕಿದೆ.. ಇದನ್ನು ಓದಿ..UPI Scan: ಎಲ್ಲೆಂದರಲ್ಲಿ UPI ಸ್ಕ್ಯಾನ್ ಮಾಡಿ ಹಣ ಕಳುಹಿಸುತ್ತಿದ್ದೀರಾ?? ಹಾಗಿದ್ದರೆ ಈ ವಿಷಯದಲ್ಲಿ ಜಾಗ್ರತೆ ಆಗಿ- ಇಲ್ಲವಾದಲ್ಲಿ ಖಾತೆಯಲ್ಲಿ ಇರುವ ಹಣ ಡಮಾರ್.

ಜಸ್ಪ್ರೀತ್ ಬುಮ್ರ, ಶ್ರೇಯಸ್ ಅಯ್ಯರ್ ಹಾಗೂ ರಿಷಬ್ ಪಂತ್ ಮೂವರು ಉತ್ತಮವಾದ ಆಯ್ಕೆಯಾಗಿದ್ದಾರೆ. ಆದರೆ ಈ ಮೂವರು ಕೂಡ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಪಂತ್ ಅವರು ಹುಷಾರಾಗೋದು ಯಾವಾಗ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಶ್ರೇಯಸ್ ಅಯ್ಯರ್ ಅವರು ಹಾಗೂ ಬುಮ್ರ ಅವರು ಶೀಘ್ರದಲ್ಲೇ ತಂಡಕ್ಕೆ ವಾಪಸ್ ಬರಬಹುದು ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಇವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡುವುದು ಸಹ ಕಷ್ಟವೇ ಆಗಿದೆ. ಇನ್ನು ಕೆ.ಎಲ್.ರಾಹುಲ್ ಅವರು ಕೂಡ ಇದೇ ಸಾಲಿನಲ್ಲಿದ್ದಾರೆ.

ಈಗ ಶುಬ್ಮನ್ ಗಿಲ್ ಅವರು ಒಳ್ಳೆಯ ಫಾರ್ಮ್ ನಲ್ಲಿದ್ದಾರೆ. ಆದರೆ ಇವರಿಗೆ ಕ್ಯಾಪ್ಟನ್ಸಿ ಕೊಡುವ ಬಗ್ಗೆ ಚರ್ಚೆ ಇದೆ. ಬಹುಶಃ ಅಶ್ವಿನ್ ಅವರು ಸಧ್ಯಕ್ಕೆ ತಂಡದ ಕ್ಯಾಪ್ಟನ್ ಆಗಿ ಮಾಡಿ, ಮುಂದಿನ ದಿನಗಳಿಗಾಗಿ ನಾಯಕನನ್ನು ಸಿದ್ಧಪಡಿಸುವ ಜವಾಬ್ದಾರಿ ಕೊಟ್ಟರು ಕೊಡಬಹುದು ಎನ್ನಲಾಗುತ್ತಿದೆ. ಆದರೆ ಸಧ್ಯಕ್ಕೆ ರೋಹಿತ್ ಶರ್ಮಾ ಅವರೇ ಕ್ಯಾಪ್ಟನ್ ಆಗಿ ಮುಂದುವರೆಯುವುದು ಖಚಿತವಾಗಿದ್ದು, ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Business Idea: ರಿಸ್ಕ್ ಇಲ್ಲದೆ ಇರುವ ಹಾಗೆ ಈ ಉದ್ಯಮ ಮಾಡಿ, ತಿಂಗಳಿಗೆ ಕನಿಷ್ಠ 50 ಸಾವಿರ ನಿಮ್ಮ ಜೇಬಿಗೆ ಲಾಭ. ಏನು ಮಾಡಬೇಕು ಗೊತ್ತೇ?

Comments are closed.