Asian Games: ಏಷ್ಯನ್ ಗೇಮ್ಸ್ ನಲ್ಲಿ ರೋಹಿತ್ ಬದಲು ನಾಯಕನಾಗಬಹುದಾದ ಟಾಪ್ ಮೂವರು ಆಟಗಾರರು.
Asian Games: ಚೀನಾದ ಹ್ಯಾಂಗ್ ಜು ನಲ್ಲಿ ಏಷಿಯನ್ ಗೇಮ್ಸ್ (Asian Games) ಟೂರ್ನಿ ನಡೆಯಲಿದ್ದು, ಇದರಲ್ಲಿ ಕ್ರಿಕೆಟ್ ಕೂಡ ಇರಲಿದೆ. ಬಿಸಿಸಿಐ (BCCI) ಈ ಟೂರ್ನಿಯಲ್ಲಿ ಟೀಮ್ ಇಂಡಿಯಾದ (Team India) ಪುರುಷರ ಹಾಗೂ ಮಹಿಳೆಯರ ತಂಡವನ್ನು ಕಳಿಸುವದಕ್ಕೆ ಒಪ್ಪಿಗೆ ನೀಡಿದೆ. ಮಹಿಳೆಯರ ತಂಡವೇನೋ ಹೋಗುವುದಕ್ಕೆ ಸಿದ್ಧವಾಗಿದೆ. ಅದರೆ ಪುರುಷರ ವಿಚಾರದಲ್ಲಿ ದ್ವಿತೀಯ ದರ್ಜೆಯ ತಂಡವನ್ನು ಕಳಿಸಲು ಮುಂದಾಗಿದೆ ಬಿಸಿಸಿಐ.
ಭಾರತದಲ್ಲಿ ಏಕದಿನ ವಿಶ್ವಕಪ್ (ODI World Cup) ನಡೆಯಲಿರುವುದರಿಂದ ಭಾರತ ತಂಡದ ಪ್ರಥ ದರ್ಜೆ ಆಟಗಾರರು ಈ ಟೂರ್ನಿಯಲ್ಲಿ ಬ್ಯುಸಿ ಆಗಿರುವುದರಿಂದ, ದ್ವಿತೀಯ ದರ್ಜೆಯ ತಂಡದ ಆಟಗಾರರು ಪಾಲ್ಗೊಳ್ಳಬಹುದು ಎನ್ನಲಾಗುತ್ತಿದ್ದು, ಈ ತಂಡದಲ್ಲಿ ಯಾರೆಲ್ಲಾ ಇದ್ದಾರೆ, ರೋಹಿತ್ ಶರ್ಮಾ (Rohit Sharma) ಅವರ ಬದಲಾಗಿ ನಾಯಕತ್ವ ಯಾರಿಗೆ ಸಿಗಬಹುದು ಎನ್ನುವ ಚರ್ಚೆ ನಡೆಯುತ್ತಿದ್ದು, Asian Games ನಲ್ಲಿ ಈ ಮೂವರು ಆಟಗಾರರಿಗೆ ಕ್ಯಾಪ್ಟನ್ ಆಗುವ ಸಾಮರ್ಥ್ಯವಿದೆ, ಆ ಮೂವರು ಆಟಗಾರರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Dk Shivakumar: ತಮಿಳುನಾಡಿನವರು ನಮ್ಮ ಬ್ರದರ್ಸ್ ಎಂದ ಡಿಕೆಶಿ- ಹೀಗ್ಯಾಕೆ ಹೇಳಿದ್ದು ಗೊತ್ತಾ.
ಶಿಖರ್ ಧವನ್ :- ಏಷಿಯನ್ ಗೇಮ್ಸ್ (Asian Games) ನಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ಆಗುವುದು ಇವರೇ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಶಿಖರ್ ಧವನ್ (Shikhar Dhavan) ಅವರು ಟೀಮ್ ಇಂಡಿಯಾದ ಪ್ರಾಥಮಿಕ ತಂಡದಿಂದ ಹೊರಗಿದ್ದಾರೆ, ಇವರು ಉತ್ತಮ ಫಾರ್ಮ್ ನಲ್ಲಿದ್ದರು ಸಹ, ಧವನ್ ಅವರಿಗೆ ಟೀಮ್ ಇಂಡಿಯಾದಲ್ಲಿ ತಂಡದಲ್ಲಿ ಅವಕಾಶ ಸಿಗುತ್ತಿಲ್ಲ, ಹೀಗಿದ್ದಾಗ ಇವರು ಏಷಿಯನ್ ಗೇಮ್ಸ್ (Asian Games) ಟೂರ್ನಿಯಲ್ಲಿ ಕ್ಯಾಪ್ಟನ್ ಆಗಬಹುದು ಎನ್ನಲಾಗುತ್ತಿದೆ.
ರವಿಚಂದ್ರನ್ ಅಶ್ವಿನ್ :- ಇವರು ಈಗ ಏಕದಿನ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿಲ್ಲ, ಆದರೆ ಅನುಭವಿ ಆಟಗಾರ ಆಗಿರುವ ಅಶ್ವಿನ್ ಅವರು ಟೀಮ್ ಇಂಡಿಯಾದ ಕ್ಯಾಪ್ಟನ್ಸಿ ನಿರ್ವಹಿಸಲಿ ಸೂಕ್ತವಾದ ಆಟಗಾರ ಆಗಿದ್ದಾರೆ. ಅಶ್ವಿನ್ ಅವರು ಆಲ್ ರೌಂಡರ್ ಹಾಗೂ ಉತ್ತಮ ಸ್ಪಿನ್ನರ್ ಆಗಿದ್ದು, ಇವರು ತಂಡವನ್ನು ಮುನ್ನಡೆಸುವ ಉತ್ತಮವಾದ ಬುದ್ಧಿಶಕ್ತಿ ಹೊಂದಿದ್ದಾರೆ. ಹಾಗಾಗಿ ಕ್ಯಾಪ್ಟನ್ಸಿಗೆ ಅಶ್ವಿನ್ ಅವರು ಕೂಡ ಉತ್ತಮವಾದ ಆಯ್ಕೆ ಆಗುತ್ತಾರೆ. ಇದನ್ನು ಓದಿ..Ration Card: ನೀವು ಮನೆಯಲ್ಲಿಯೇ ಕುಳಿತು, ರೇಷನ್ ಕಾರ್ಡ್ ಅರ್ಜಿ ಹಾಕಿ- ಸೈಬರ್ ನವರಿಗೆ ಹಣ ಕೊಡುವುದು ನಿಲ್ಲಿಸಿ.
ಸಂಜು ಸ್ಯಾಮ್ಸನ್ :- ಸಂಜು ಅವರು ಕೂಡ ಉತ್ತಮ ಆಟಗಾರನಾಗಿ, ಉತ್ತಮವಾದ ಅನುಭವ ಹೊಂದಿದ್ದರು ಸಹ, ಸಂಜು ಅವರಿಗೆ ಏಕದಿನ ವಿಶ್ವಕಪ್ ನಲ್ಲಿ ಇವರಿಗೆ ಸ್ಥಾನ ಸಿಕ್ಕಿಲ್ಲ. ಐಪಿಎಲ್ (IPL) ನಲ್ಲಿ ಕೂಡ ಸಂಜು ಅವರು ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿ, ಅನುಭವ ಪಡೆದುಕೊಂಡಿದ್ದಾರೆ. ಹಾಗಾಗಿ ಸಂಜು ಸ್ಯಾಮ್ಸನ್ (Sanju Samson) ಅವರು ಕೂಡ ಕ್ಯಾಪ್ಟನ್ ಆಗುವುದಕ್ಕೆ ಅರ್ಹವಾದ ಆಟಗಾರ ಆಗಿದ್ದು, ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ಸಿಕ್ಕರೆ, ಅವರ ಸಾಮರ್ಥ್ಯ ಕೂಡ ಗೊತ್ತಾಗಲಿದೆ. ಇದನ್ನು ಓದಿ..Shakti Yojane: ಬಹಳ ಸುಲಭವಾಗಿ ಶಕ್ತಿ ಉಚಿತ ಪಾಸ್ ಗೆ ಮೊಬೈಲ್ ಅಥವಾ ಕಂಪ್ಯೂಟರ್ ನಿಂದ ಅರ್ಜಿ ಸಲ್ಲಿಸಿ.
Comments are closed.